ಆಗಸ್ಟ್ 14-2026, ರ ಸಂಜೆ 4-00ಗಂಟೆಗೆ ಸಾಗರ ಶ್ರೀಮಹಾಗಣಪತಿ ದೇವಸ್ಥಾನದ ಆವರಣದಿಂದ ತಿರಂಗಾ ಯಾತ್ರೆ-ಹರ್ ಘರ್ ತಿರಂಗಾ-ಬಿಜೆಪಿ ಯುವ ಮೋರ್ಚಾದಿಂದ ದೇಶಭಕ್ತಿ ಕಾರ್ಯಕ್ರಮ
ಆಗಸ್ಟ್ 14-2026, ರ ಸಂಜೆ 4-00ಗಂಟೆಗೆ ಸಾಗರ ಶ್ರೀಮಹಾಗಣಪತಿ ದೇವಸ್ಥಾನದ ಆವರಣದಿಂದ ತಿರಂಗಾ ಯಾತ್ರೆ-ಹರ್ ಘರ್ ತಿರಂಗಾ-ಬಿಜೆಪಿ ಯುವ ಮೋರ್ಚಾದಿಂದ ದೇಶಭಕ್ತಿ ಕಾರ್ಯಕ್ರಮ
ಸಾಗರ ; ಸಾಗರ ನಗರ ಮತ್ತು ಗ್ರಾಮಾಂತರ ಮಂಡಲ ಬಿಜೆಪಿ ಯುವಮೋರ್ಚಾದಿಂದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಇದೇ ಆಗಸ್ಟ್ ತಿಂಗಳ 14ರಂದು ಸಾಗರದ ಶ್ರೀಮಹಾಗಣಪತಿ ದೇವಸ್ಥಾನದ ಆವರಣದಿಂದ *ತಿರಂಗಾ ಯಾತ್ರೆ-ಹರ್ ಘರ್ ತಿರಂಗಾ* ಬೃಹತ್ ಬೈಕ್ ರ್ಯಾಲಿಯನ್ನು ತಿರಂಗಾ ನಮ್ಮ ಹೆಮ್ಮೆ ಭಾರತ ನಮ್ಮ ಹೆಮ್ಮೆ ಎಂಬ ಕಾರ್ಯಕ್ರಮವು ಆಗಸ್ಟ್ 14ರಂದು ಸಾಯಂಕಾಲ 4-00 ಗಂಟೆಗೆ ಆರಂಭವಾಗಲಿದೆ.
ಈ ಒಂದು ಕಾರ್ಯಕ್ರಮವು ದೇಶಭಕ್ತಿಯ ಸಂಕೇತವೆಂದು ಪರಿಗಣಿಸಲಾಗಿದ್ದು, ಸಾಗರದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಎಲ್ಲಾ ಪ್ರಮುಖರು ಬೈಕ್ ಮೂಲಕ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಾಗರ ಬಿಜೆಪಿ ಯುವಮೋರ್ಚಾ ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದೆ.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ

Comments
Post a Comment