ಸಾಗರ ನಗರಪ್ರದೇಶದ ವಾರ್ಡ್ ನಂ. 19ರ ರಾಮನಗರ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ಕಾರ್ಯಕರ್ತೆ ಶಾಂತಮ್ಮ ವಯೋನಿವೃತ್ತಿ, ಅಭಿನಂದಿಸಿ ಬೀಳ್ಕೊಡುಗೆ ನೀಡಿದ ಶಾಲಾ ಸಿಬ್ಬಂದಿಗಳು

ಸಾಗರ ನಗರಪ್ರದೇಶದ ವಾರ್ಡ್ ನಂ. 19ರ ರಾಮನಗರ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ಕಾರ್ಯಕರ್ತೆ ಶಾಂತಮ್ಮ ವಯೋನಿವೃತ್ತಿ, ಅಭಿನಂದಿಸಿ ಬೀಳ್ಕೊಡುಗೆ ನೀಡಿದ ಶಾಲಾ ಸಿಬ್ಬಂದಿಗಳು


ಸಾಗರ ;  ಸಾಗರ ನಗರಪ್ರದೇಶದ ವಾರ್ಡ್ ನಂ. 19ರ ರಾಮನಗರ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ಕಾರ್ಯಕರ್ತೆ ಶಾಂತಮ್ಮ ವಯೋನಿವೃತ್ತಿಯಾದ ಕಾರಣ ಶಾಂತಮ್ಮನವರಿಗೆ ಶಾಲೆಯ ಸಿಬ್ನಂದಿಗಳು ಅಭಿನಂದಿಸಿ ಬೀಳ್ಕೊಡುಗೆ ನೀಡಿದರು.

ಅಲ್ಲಿನ ಉಪಾಧ್ಯಾಯಿನಿ ಗೀತಾರವರು ಶಾಂತಮ್ಮನವರ ಬಗ್ಗೆ ಮಾತನಾಡಿ,‌ ಪ್ರಾಮಾಣಿಕತೆಯಿಂದ ಕೆಲಸ ಮಾಡುವುದಲ್ಲದೇ ವಿದ್ಯಾರ್ಥಿಗಳಿಗೆ ತಮ್ಮ ಮಕ್ಕಳಂತೆ ಶಾಂತಮ್ಮ ಕಂಡರು.‌ ಅವರು ಸಹ ಬಡತನದಿಂದ ಬಂದವರು. ವೇಳೆಗೆ ಸರಿಯಾಗಿ ಮಕ್ಕಳಿಗೆ ಊಟ ನೀಡುವ ಜವಾಬ್ದಾರಿ ಸುಲಭದ್ದಲ್ಲ. ಬದಲಿಗೆ ಬದ್ದತೆಯಿಂದ ಕೆಲಸ ಮಾಡಿರುವುದು ನಮ್ಮ ಶಾಲೆಗೆ ಅವರು ತಂದ ಹೆಮ್ಮೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶಾಂತಮ್ಮ ಅವರಿಗೆ ಶಾಲೆಯ ವತಿಯಿಂದು ಶಾಲಾ ಶಿಕ್ಷಕರು ಮತ್ತು ಇತರ ಸಿಬ್ಬಂದಿಗಳು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಬೀಳಕೊಟ್ಟರು.

ಸರಕಾರ ನಿವೃತ್ತರಾದ ಬಿಸಿಯೂಟ ಕಾರ್ಯಕರ್ತೆಯರಿಗೆ ಇಡಿಗಂಟು ನೀಡುವ ಕೊಡುಗೆಯೂ ಇವರಿಗೆ ಸಿಗಬೇಕಿತ್ತು. ಆದರೆ ಸರಕಾರ ಇತ್ತಿಚೆಗೆ ಬಿಸಿಯೂಟ ಕಾರ್ಯಕರ್ತೆಯನ್ನು ಕೆಲಸಕ್ಕೆ ಬಳಸಿಕೊಳ್ಳುತ್ತದೆ. ವಿನಃ ಅವರಿಗೆ ಸಂಬಳವೂ ಜಾಸ್ತಿ ನೀಡದೇ ತನ್ನ ಚುನಾವಣಾ ಪ್ರಣಾಳಿಕೆ ಮರೆತಿದೆ ಎಂಬುದು ವಿಪರ್ಯಾಸ.

ಶಾಲಾ ಮುಖ್ಯ ಶಿಕ್ಷಕ ದೇವೇಂದ್ರಪ್ಪ, ರಚಿತಾ ಇನ್ನಿತರರು ಹಾಜರಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ‌ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ