ಸೂರು ನಿರ್ಮಿಸಿಕೊಳ್ಳಬೇಕು ಎನ್ನುವವರ ಬಯಕೆ ಈಡೇರಿಸುವ ನಿಟ್ಟಿನಲ್ಲಿ ಸಾಗರ ಟೌನ್ ಹೌಸ್ ಬಿಲ್ಡಿಂಗ್ ಸೊಸೈಟಿ 70 ವರ್ಷಗಳಿಂದ ಶ್ರಮಿಸುತ್ತಿದೆ-ಅಧ್ಯಕ್ಷ ಸತೀಶ ಕೆ. ಮೋಗವೀರ
ಸೂರು ನಿರ್ಮಿಸಿಕೊಳ್ಳಬೇಕು ಎನ್ನುವವರ ಬಯಕೆ ಈಡೇರಿಸುವ ನಿಟ್ಟಿನಲ್ಲಿ ಸಾಗರ ಟೌನ್ ಹೌಸ್ ಬಿಲ್ಡಿಂಗ್ ಸೊಸೈಟಿ 70 ವರ್ಷಗಳಿಂದ ಶ್ರಮಿಸುತ್ತಿದೆ-ಅಧ್ಯಕ್ಷ ಸತೀಶ ಕೆ. ಮೋಗವೀರ
ಸಾಗರ : ಗೃಹನಿರ್ಮಾಣ, ಗೃಹ ರಿಪೇರಿ ಹಾಗೂ ನಿವೇಶನ ಖರೀದಿ ಸುಲಭವಾಗಬೇಕು. ಸೂರು ನಿರ್ಮಿಸಿಕೊಳ್ಳಬೇಕು ಎನ್ನುವವರ ಬಯಕೆ ಈಡೇರಿಸುವ ನಿಟ್ಟಿನಲ್ಲಿ ನಮ್ಮ ಸಹಕಾರಿ 70 ವರ್ಷಗಳಿಂದ ಶ್ರಮಿಸುತ್ತಿದೆ ಎಂದು ಸಾಗರ ಪಟ್ಟಣ ಹೌಸ್ ಬಿಲ್ಡಿಂಗ್ ಸೊಸೈಟಿ ಅಧ್ಯಕ್ಷ ಸತೀಶ್ ಕೆ. ತಿಳಿಸಿದರು.
ಇಲ್ಲಿನ ಶಾರದಾಂಬಾ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಾಗರ ಟೌನ್ ಹೌಸ್ ಬಿಲ್ಡಿಂಗ್ ಸೊಸೈಟಿಯ ಷೇರುದಾರರ ವಾರ್ಷಿಕ ಮಹಾಸಭೆಯಲ್ಲಿ ಅವರು ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ನೆರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಹಿರಿಯರು ಗೃಹ ನಿರ್ಮಾಣದ ಉದ್ದೇಶಕ್ಕೆ ಕಟ್ಟಿದ್ದ ಸಹಕಾರಿಯು ಅತಿಹೆಚ್ಚು ವಹಿವಾಟು ಹೊಂದುವ ಜೊತೆಗೆ ಅನೇಕ ಷೇರುದಾರಸ್ನೇಹಿ ಯೋಜನೆ ಜಾರಿಗೆ ತಂದಿದ್ದು, "ಎ" ದರ್ಜೆಯ ಸಹಕಾರಿ ಎನ್ನುವ ಹೆಗ್ಗಳಿಕೆ ಹೊಂದಿದೆ. ಕೊರೋನಾದಂತಹ ಸಂಕಷ್ಟ ಸಂದರ್ಭದಲ್ಲಿ ಸಹ ಷೇರುದಾರರು ಸಂಸ್ಥೆಯ ಶ್ರೇಯೋಭಿವೃದ್ದಿಗೆ ನಿರಂತರ ಸಹಕಾರ ನೀಡುತ್ತಾ ಬಂದಿದ್ದಾರೆ. ಸದಸ್ಯರ ಸಂಖ್ಯೆ ಹೆಚ್ಚಿಸಿರುವ ಜೊತೆಗೆ ಠೇವಣಿವಸಂಗ್ರಹದಲ್ಲಿ ಸಹ ನಾವು ಮುಂಚೂಣಿ ಕಾಯ್ದುಕೊಂಡಿದ್ದೇವೆ ಎಂದರು.
ಮನೆ ನಿರ್ಮಾಣಕ್ಕೆ ಸಾಲವನ್ನು 25 ಲಕ್ಷ ರೂ.ವರೆಗೂ, ಮನೆ ರಿಪೇರಿಗೆ 4 ರಿಂದ 10 ಲಕ್ಷವರೂ. ವರೆಗೂ, ನಿವೇಶನ ಖರೀದಿಗೂ ಹೆಚ್ಚಿನ ಸಾಲಸೌಲಭ್ಯ ಕೊಡುವ ಉದ್ದೇಶವಿದೆ. ಇದರ ಜೊತಗೆ ಬಡ್ಡಿದರವನ್ನು ಶೇ. 2 ಕಡಿಮೆಗೊಳಿಸಿ, ಮುಕ್ತಿನಿಧಿಯನ್ನು 3 ಸಾವಿರ ರೂಪಾಯಿವರೆಗೆ ಹೆಚ್ಚಿಸಿದೆ. ಈ ಆರ್ಥಿಕ ಸಾಲಿನಲ್ಲಿ ನಮ್ಮ ಸಂಸ್ಥೆಯು 23 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು ಷೇರುದಾರರಿಗೆ ಶೇ. 10 ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಿರಿಯ ಸಹಕಾರಿ ವೈ.ಮೋಹನ್ ಮತ್ತು ಅಂತರಾಷ್ಟ್ರೀಯ ಅಂದ ಕ್ರಿಕೇಟ್ ಪಟು ಕಾವ್ಯ ವಿ. ರಿಪ್ಪನಪೇಟೆ ಅವರನ್ನು ಸನ್ಮಾನಿಸಲಾಯಿತು. ವಾಯಿದೆಯೊಳಗೆ ಸಾಲ ಮರುಪಾವತಿ ಮಾಡಿದ ವಸಂತ ಮತ್ತು ವೀಣಾ ಅವರನ್ನು ಅಭಿನಂದಿಸಲಾಯಿತು. ಎಸ್.ಎಸ್.ಎಲ್.ಸಿ., ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ಬಸವರಾಜ್, ನಿರ್ದೇಶಕರಾದ ಸುಜಾತ, ಉಷಾ, ಚಂದ್ರು, ವಿಘ್ನೇಶ್, ಗೋಪಾಲ ಬಿಲ್ಲವ, ಎಸ್.ಎಂ.ರಾಮಚಂದ್ರ ಇನ್ನಿತರರು ಹಾಜರಿದ್ದರು.
ವಿ. ಪದ್ಮನಾಭ ಪ್ರಾರ್ಥಿಸಿದರು. ಎಸ್.ಬಿ.ರಘುನಾಥ್ ಸ್ವಾಗತಿಸಿದರು. ಪ್ರಮೋದ್ ಪ್ರಾಸ್ತಾವಿಕ ಮಾತನಾಡಿದರು. ನಾಗಪ್ಪ ವಂದಿಸಿದರು. ಉಮೇಶ್ ಹಿರೇನೆಲ್ಲೂರು ನಿರೂಪಿಸಿದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ




Comments
Post a Comment