ಟೀಕೆಯನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳುವ ಸಂಸ್ಕೃತಿ ಕಾಂಗ್ರೇಸ್ಸಿಗರು ಬೆಳೆಸಿಕೊಳ್ಳಬೇಕು-BJP

ಟೀಕೆಯನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳುವ ಸಂಸ್ಕೃತಿ ಕಾಂಗ್ರೇಸ್ಸಿಗರು ಬೆಳೆಸಿಕೊಳ್ಳಬೇಕು-BJP

ಹರತಾಳು ಹಾಲಪ್ಪ ಸಾಗರದಲ್ಲಿ ಜನ ಗುರುತಿಸುವ ಕೆಲಸ ಮಾಡಿದ್ದಾರೆ-ದೇವೇಂದ್ರಪ್ಪ ಯುಕುಂದ್ಲಿ

ಗ್ರಾಮ ಪಂಚಾಯತಿ ಮೀಸಲಾತಿಯಲ್ಲಿ ಮೂಲ ಕಾಂಗ್ರೇಸ್ ಮತ್ತು ಕಾಗೋಡು ಬೆಂಬಲಿಗರೇ ನಿಲ್ಲದಂತೆ ಮಾಡುವ ತಂತ್ರಗಾರಿಕೆ ಶಾಸಕರು ಮತ್ತು ಹಿಂಬಾಲಕರಿಂದ ನಡೆದಿದೆ-ರತ್ನಾಕರ ಹೋನಗೋಡು

ಕಾಂಗ್ರೇಸ್'ನವರು ದಾಖಲೆ ಹಿಡಿದುಕೊಂಡು ಬಹಿರಂಗ ಚರ್ಚೆಗೆ ಬರಲಿ-ಕೆ.ಆರ್. ಗಣೇಶ್'ಪ್ರಸಾದ್

ಸಾಗರ : ಟೀಕೆಯನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳುವ ಸಂಸ್ಕೃತಿ ಕಾಂಗ್ರೇಸ್ಸಿಗರು ಬೆಳೆಸಿಕೊಳ್ಳಬೇಕು. ಬಿಜೆಪಿ ಸಮಾಜಮುಖಿಯಾಗಿ ಮಾಡುವ ಟೀಕೆಗಳಿಗೆ ಕೌಂಟರ್ ಕೊಡುವುದನ್ನು ಬಿಟ್ಟು ಕಾಂಗ್ರೇಸ್ ಪಕ್ಷ ಇರುವ ಒಂದು ವರ್ಷದಲ್ಲಿ ಉತ್ತಮ ಕೆಲಸ ಮಾಡಿ ತೋರಿಸಲಿ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ ತಿಳಿಸಿದರು.


ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವರಾದ ಹರತಾಳು ಹಾಲಪ್ಪ, ಬಿಜೆಪಿ ಪ್ರಮುಖರು ಕಾಗೋಡು ತಿಮ್ಮಪ್ಪ ಅವರನ್ನು ಯಾವತ್ತೂ ಟೀಕಿಸುವುದಿಲ್ಲ. ಅವರ ರಾಜಕೀಯ ಹಿರಿತನ, ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ನಾವು ಸದಾ ಸ್ಮರಿಸುತ್ತೇವೆ. ಕಾಂಗ್ರೇಸ್ಸಿಗರು ಕಾಗೋಡು ತಿಮ್ಮಪ್ಪ ಅವರನ್ನು ಬಿಜೆಪಿ ಟೀಕೆ ಮಾಡಿದೆ ಎಂಬ ಹಣೆಪಟ್ಟಿ ಕಟ್ಟುವುದನ್ನು ಮೊದಲು ಬಿಡಲಿ ಎಂದರು. ಹರತಾಳು ಹಾಲಪ್ಪ ಒಂದು ಬಾರಿ ಶಾಸಕರಾಗಿ ಜನ ಗುರುತಿಸುವ ಅನೇಕ ಕೆಲಸಗಳನ್ನು ಕ್ಷೇತ್ರದಲ್ಲಿ ಮಾಡಿದ್ದಾರೆ. ಗೋಪಾಲಕೃಷ್ಣ ಬೇಳೂರು ಮೂರು ಬಾರಿ ಕ್ಷೇತ್ರದ ಶಾಸಕರಾಗಿ ಏನು ಮಾಡಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಟ್ಟು ಬೇರೇನೂ ಸಾಧನೆ ಇದೆ ಎಂದ ಅವರು, ನಾವು ಪ್ರತಿಯೊಂದು ಟೀಕೆ ಮಾಡುವಾಗಲೂ ಅಗತ್ಯ ದಾಖಲೆ ಇರಿಸಿಕೊಂಡಿರುತ್ತೇವೆ.

ಕಾಂಗ್ರೇಸ್ ಮುಖಂಡರು ಮೂರುವರ್ಷದಲ್ಲಿ ಬೇಳೂರು ಮಾಡಿದ ಅಭಿವೃದ್ದಿ ಬಗ್ಗೆ ದಾಖಲೆ ಇರಿಸಿಕೊಂಡು ಮಾತನಾಡಬೇಕು. ನಮ್ಮ ಶಾಸಕರ ಬಗ್ಗೆ ಟೀಕೆ ಮಾಡುವ ಕಾಂಗ್ರೇಸ್ ಮುಖಂಡರು ಗೋಪಾಲಕೃಷ್ಣ ಬೇಳೂರು ಆರು ತಿಂಗಳು ಅನರ್ಹರಾಗಿದ್ದನ್ನು ಏಕೆ ಹೇಳುತ್ತಿಲ್ಲ. ಕಳೆದ ವರ್ಷ ಅತಿವೃಷ್ಟಿ ಸಂದರ್ಭದಲ್ಲಿ ವಿದೇಶದಲ್ಲಿದ್ದರು, ಈ ವರ್ಷ ಬೆಂಗಳೂರಿನಲ್ಲಿ ಇದ್ದಾರೆ. ಇದು ಗೋಪಾಲಕೃಷ್ಣ ಬೇಳೂರು ಅವರ ಸಾಧನೆಯೆ ಎಂದು ಪ್ರಶ್ನೆ ಮಾಡಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ಈ ಬಾರಿ ಗ್ರಾಮ ಪಂಚಾಯ್ತಿ ಮೀಸಲಾತಿ ಮಾಡುವ ಸಂದರ್ಭದಲ್ಲಿ ಶಾಸಕರು ಮತ್ತು ಅವರ ಹಿಂಬಾಲಕರು ಮೂಲ ಕಾಂಗ್ರೇಸ್ಸಿಗರು ಮತ್ತು ಕಾಗೋಡು ತಿಮ್ಮಪ್ಪ ಅವರ ಬೆಂಬಲಿಗರು ಸ್ಪರ್ಧೆ ಮಾಡದಂತೆ ಮೀಸಲಾತಿ ಮಾಡಿಸಿದ್ದಾರೆ. ಎಲ್ಲೆಲ್ಲಿ ಬೇಳೂರು ಅಭಿವೃದ್ದಿ ಶೂನ್ಯ ನಡೆ ಬಗ್ಗೆ ಪಕ್ಷದಲ್ಲಿದ್ದು ವಿರೋಧ ವ್ಯಕ್ತಪಡಿಸುತ್ತಿದ್ದರೋ ಅವರನ್ನೆಲ್ಲಾ ಸ್ಪರ್ಧೆ ಮಾಡದಂತೆ ವ್ಯವಸ್ಥಿತ ತಂತ್ರಗಾರಿಕೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಯಾರು ಎಂದು ಗೊತ್ತಿಲ್ಲ ಎಂದು ಹೇಳಿದ್ದ ಬೇಳೂರಿಗೆ ಕಾಂಗ್ರೇಸ್ ಪಕ್ಷ ಹೇಗೆ ಸಚಿವ ಸ್ಥಾನ ನೀಡುತ್ತಾರೆ. ಬೇಳೂರು ಗೆದ್ದಾಗೆಲ್ಲಾ ಸರ್ಕಾರ ಇತ್ತು. ಆದರೆ ಮಂತ್ರಿಗಿರಿ ಆಸೆಗೆ ಬಿದ್ದು ಕ್ಷೇತ್ರದ ಅಭಿವೃದ್ದಿ ಬೇಳೂರು ಕಡೆಗಣಿಸಿದ್ದಾರೆ. ಸದ್ಯ ಬೇಳೂರು ಅಕ್ಕಪಕ್ಕ ಲಾಭಕ್ಕಾಗಿ ಇರುವ ಇಬ್ಬರು ಇದ್ದಾರೆ ಬಿಟ್ಟರೇ, ಅವರಿಗೆ ಕ್ಷೇತ್ರದ ಅಭಿವೃದ್ದಿ, ಪಕ್ಷದ ಬೆಳವಣಿಗೆ ಬೇಕಾಗಿಲ್ಲ. ಶಾಸಕರ ಅಭಿವೃದ್ದಿ ಶೂನ್ಯ ಆಲೋಚನೆಗೆ ಕ್ಷೇತ್ರದ ಜನರು ತಕ್ಕ ಉತ್ತರ ಮುಂದಿನ ಚುನಾವಣೆಯಲ್ಲಿ ನೀಡುತ್ತಾರೆ ಎಂದರು.


ಬಿಜೆಪಿ ನಗರ ಮಂಡಲ ಅಧ್ಯಕ್ಷ ಗಣೇಶ್ ಪ್ರಸಾದ್ ಮಾತನಾಡಿದರು. ಗೋಷ್ಟಿಯಲ್ಲಿ ಮಧುರಾ ಶಿವಾನಂದ್, ರಮೇಶ್ ಎಚ್.ಎಸ್., ಭರ್ಮಪ್ಪ ಅಂದಾಸುರ, ರವೀಂದ್ರ ಬಿ.ಟಿ., ಜಿ.ಕೆ.ಭೈರಪ್ಪ, ಸಂತೋಷ್ ರಾಯಲ್, ಶ್ರೀನಿವಾಸ್ ಮೇಸ್ತಿ ಗಿರೀಶ್ ಗುಳ್ಳಳ್ಳಿ ಹಾಜರಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ


Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ