ತೀ.ನ. ಶ್ರೀನಿವಾಸ್ ವಿರುದ್ಧದ ಕೇಸ್ ವಜಾ, ಪ್ರಮುಖ ವಕೀಲರಾಗಿ ವಾದಿಸಿದ್ದ ಸಾಗರದ ಎಚ್.ಬಿ. ರಾಘವೇಂದ್ರ

ತೀ.ನ. ಶ್ರೀನಿವಾಸ್ ವಿರುದ್ಧದ ಕೇಸ್ ವಜಾ, ಪ್ರಮುಖ ವಕೀಲರಾಗಿ ವಾದಿಸಿದ್ದ ಸಾಗರದ ಎಚ್.ಬಿ. ರಾಘವೇಂದ್ರ

ಸಾಗರ ; ಸಾಗರ ನಗರ ಠಾಣೆ ನೀಡಿದ ಪಿರ್ಯಾದಿಯ ಆಧಾರದ ಮೇಲೆ ಸಾಗರದ ತಹಶಿಲ್ದಾರ್ ಮತ್ತು ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಸಾಮಾಜಿಕ ಕಾರ್ಯಕರ್ತ ತೀ.ನ. ಶ್ರೀನಿವಾಸ್ ವಿರುದ್ದ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ(BNSS)ಸೆಕ್ಷನ್ 129(e)129(g) ಪ್ರಕಾರ ರೂಢಿಗತ ಅಪರಾಧಿ, ಪದೇ ಪದೇ ಕ್ರಿಮಿನಲ್  ಪ್ರಕರಣದಲ್ಲಿ ಭಾಗಿಯಾಗಿ ಸಮಾಜದ ಸ್ವಾಸ್ತ್ಯವನ್ನು ಹಾಳುಮಾಡಿ ಸಾರ್ವಜನಿಕ ನೆಮ್ಮದಿಗೆ ತೊಂದರೆ ಉಂಟು ಮಾಡುವ ಉದ್ದೇಶದಿಂದ ದುಷ್ಪ್ರೇರಣೆ ನೀಡಿದ್ದಿರಿ ಎಂದು ದಾಖಲಾದ ಕೇಸ್'ಗೆ ನ್ಯಾಯಾಲಯಕ್ಕೆ ಹಾಜರಾಗಿ ಒಂದು ವರ್ಷದ ಅವಧಿಗೆ ಶಾಂತಿ ಪಾಲನೆ ಮಾಡುವುದಕ್ಕೆ ಎರಡು ಲಕ್ಷ ರೂ.ಗಳಿಗೆ ಮುಚ್ಚಳಿಕೆ ಹಾಗೂ ಅಷ್ಟೇ ಮೊತ್ತದ ಪಹಣಿ ಹೊಂದಿರುವವರಿಂದ ಜಾಮೀನು ಕೊಡಬೇಕು ಎಂದು ಆದೇಶ ಹೊರಡಿಸಿದ್ದರು.

ತೀ.ನ. ಶ್ರೀನಿವಾಸ್ ಅವರು ಈ ಆದೇಶವನ್ನು ಮಾನ್ಯ 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ತೀ.ನ. ಶ್ರೀನಿವಾಸ್ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲನೆ ಮಾಡಿದ ಹೆಚ್ಚುವರಿ ಜಿಲ್ಲಾ ನ್ಯಾಯದೀಶರಾದ ರವೀಂದ್ರ ಆರ್. ಅವರು ತಾಲೂಕು ದಂಡಾಧಿಕಾರಿಗಳು ಆದೇಶ ಹೊರಡಿಸುವಾಗ BNSS ಕಾಯಿದೆಯ ಮ್ಯಾಂಡೆಟರಿ ಪ್ರಾವಿಸನ್ಸ್ 130,129(e)129(g) ಕಾನೂನು ಬದ್ದವಾಗಿಲ್ಲ ಹಾಗೂ ತಾಲೂಕು ದಂಡಾಧಿಕಾರಿಗಳು ತಮ್ಮ ಪ್ರಾಥಮಿಕ ಆದೇಶದಲ್ಲಿ ಜುಡಿಸಿಯಲ್ ಮೈಂಡ್ ಅನ್ನು ಅಪ್ಲೆ ಮಾಡಿಲ್ಲ ಎಂದು ಅಭಿಪ್ರಾಯಿಸಿ ತೀ.ನ. ಶ್ರೀನಿವಾಸ್ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿ ತಾಲೂಕು ದಂಡಾಧಿಕಾರಿಗಳು ಮಾಡಿದ  ಆದೇಶವನ್ನು ರದ್ದು ಮಾಡಿ ಜುಲೈ 31 ರಂದು ಆದೇಶ ಹೊರಡಿಸಿದ್ದಾರೆ.

ತೀ.ನ. ಶ್ರೀನಿವಾಸ್ ಪರವಾಗಿ ವಕೀಲರಾದ ಎಚ್.ಬಿ. ರಾಘವೇಂದ್ರ, ಸರೋಜ ಎಂ.ಎಸ್. ಅಬ್ದುಲ್ ರಶೀದ್ ಮತ್ತು ವೈ.ಎಂ. ನವೀನ್ ಕುಮಾರ್ ಅವರ ತಂಡ ವಾದಿಸಿತ್ತು. 

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ