ಕುಟುಂಬ ಪರಂಪರೆಯಲ್ಲಿ ಯಕ್ಷಗಾನ ಪರಂಪರೆಯನ್ನು ಸಂರಕ್ಷಿಸಿ, ಬೆಳೆಸಿ ಮುಂದಿನ ತಲೆಮಾರಿನಲ್ಲಿಯೂ ಮುಂದುವರಿಯುವಂತೆ ಮಾಡಬೇಕಿದೆ-ಎಂ.ಎಲ್. ಹೆಗಡೆ
ಕುಟುಂಬ ಪರಂಪರೆಯಲ್ಲಿ ಯಕ್ಷಗಾನ ಪರಂಪರೆಯನ್ನು ಸಂರಕ್ಷಿಸಿ, ಬೆಳೆಸಿ ಮುಂದಿನ ತಲೆಮಾರಿನಲ್ಲಿಯೂ ಮುಂದುವರಿಯುವಂತೆ ಮಾಡಬೇಕಿದೆ-ಎಂ.ಎಲ್. ಹೆಗಡೆ
ಸಾಗರ : ಕುಟುಂಬ ಪರಂಪರೆಯಲ್ಲಿ ಯಕ್ಷಗಾನ ಪರಂಪರೆಯನ್ನು ಸಂರಕ್ಷಿಸಿ, ಬೆಳೆಸಿ ಮುಂದಿನ ತಲೆಮಾರಿನಲ್ಲಿಯೂ ಮುಂದುವರಿಯುವಂತೆ ಮಾಡುವ ಕಾರ್ಯವಸುಲಭದಲ್ಲ, ಅದನ್ನು ಮಾಡಿತೋರಿಸಿರುವ ವಂಶವಾಹಿನಿ ಕಾರ್ಯ ಇತಿಹಾಸ ಪುಟಗಳಲ್ಲಿ ದಾಖಲಾಗಬೇಕಿದೆ ಎಂದು ನಿವೃತ್ತ ಕನ್ನಡ ಉಪನ್ಯಾಸಕ ಎಲ್.ಎಂ. ಹೆಗಡೆ ಹೇಳಿದರು.
ಇಲ್ಲಿನ ಕುಡುಪಲಿ ಸದಾನಂದ ಸ್ವರಾಲಯದಲ್ಲಿ ಭಾನುವಾರ ಶ್ರೀರಾಜರಾಜೇಶ್ವರಿ ಕೃಪಾಪೋಷಿತ ವಂಶವಾಹಿನಿ ಯಕ್ಷಮೇಳ ಗುಂಡೂಮನೆಯವರು ನಡೆಸುತ್ತಿರುವ ಸರಣಿ ತಾಳಮದ್ದಲೆಯ ಎರಡನೇ ಕಾರ‍್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅದೆಷ್ಟೊ ಕುಟುಂಬದಲ್ಲಿ ಪೀಳಿಗೆಯ ಕಲಾವಿದರನ್ನು ಗಮನಿಸಬಹುದು. ಆದರೆ ವೃತ್ತಿ ಅಲ್ಲದೆ ಕುಟುಂಬವೊAದು ಯಕ್ಷ ಪರಂಪರೆಯ ಸಂಘಟನೆಯ ಹೊಣೆಯನ್ನು ಹೊತ್ತು ಸಾಗುವುದು ಕಷ್ಟ ಎಂದ ಅವರು, ಪರಂಪರೆಗಳ ಅಧ್ಯಾಯನ, ಸಂಶೋಧನೆಗಳನ್ನು ಓದಿ ಅರ್ಥ ಮಾಡಿಕೊಳ್ಳುವುದು ಬೇರೆ, ಸ್ವತಃ ಇದನ್ನು ಹತ್ತಿರದಲ್ಲಿ ಗಮನಿಸುವುದು ವಿಶೇಷ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಕಲಾಪೋಷಕರಾದ ಸುಬ್ಬರಾವ್ ಕಟ್ಟಿನಕೆರೆ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಒಂದು ಕಾರ್ಯಕ್ರಮದ ಸಂಘಟನೆಯನ್ಬು ಮಾಡುವುದೇ ಕಷ್ಟ. ಹಾಗಿರುವಾಗ ಸರಣಿ ಕಾರ್ಯಕ್ರಮಗಳನ್ನು ಅದು ಪ್ರತಿ ವರ್ಷ ಮಾಡುತ್ತಿರುವುದು ನಿಜಕ್ಕೂ ಸಾಹಸದ ಕೆಲಸ ಎಂದರು.
ಸಂಸ್ಥೆಯ ಗೌರವಾಧ್ಯಕ್ಷ ಸುಬ್ರಾಯ ಹೆಗಡೆ ಗುಂಡೂಮನೆ ಅಧ್ಯಕ್ಷತೆ ವಹಿಸಿದ್ದರು. ಕೆಳದಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ ಹಾರೆಗೊಪ್ಪ, ಅಧ್ಯಕ್ಷ ರಮೇಶ್ ಹೆಗಡೆ ಗುಂಡೂಮನೆ, ಶ್ರೀಧರ ಹೆಗಡೆ, ಅಶೋಕಹೆಗಡೆ, ಸಂಜನಾ ಹೆಗಡೆ ಮತ್ತಿತರರು ಇದ್ದರು.
ನಂತರ ರಮೇಶ್ ಹೆಗಡೆ ಗುಂಡೂಮನೆ ರಚಿಸಿರುವ ವಿಭು ಗೋವಂಶಿ ಭಾಗ 2 ರ ತಾಳಮದ್ದಲೆ ನಡೆಯಿತು. ಭಾಗವತರಾಗಿ ಸರ‍್ಯನಾರಾಯಣ, ಸೃಜನ್‌ಗಣೇಶ್ ಹೆಗಡೆ, ಮದ್ದಳೆಯಲ್ಲಿ ಶ್ರೀವತ್ಸ ಗುಡ್ಡೆದಿಂಬ, ಚಂಡೆಯಲ್ಲಿ ಸ್ವರೂಪ ಬೆಳೆಯೂರು ಪಾಲ್ಗೊಂಡಿದ್ದರು. ಅರ್ಥದಾರಿಗಳಾಗಿ ಅರುಣ್ ಬೆಂಕಟವಳ್ಳಿ, ರವಿಶಂಕರ್ ಭಟ್ ಇದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment