ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ನಾಗಯಕ್ಷಿ ಚೌಡೇಶ್ವರಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದೇಣಿಗೆ ಹಸ್ತಾಂತರ
ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ನಾಗಯಕ್ಷಿ ಚೌಡೇಶ್ವರಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದೇಣಿಗೆ ಹಸ್ತಾಂತರ
ಸಾಗರ ತಾಲ್ಲೂಕಿನ ಜಂಬಗಾರುವಿನಲ್ಲಿ ನೂತನವಾಗಿ ನಿರ್ಮಾಣ ಗೊಳ್ಳುತ್ತಿರುವ ಶ್ರೀ ನಾಗಯಕ್ಷಿ ಚೌಡೇಶ್ವರಿ ದೇವಸ್ಥಾನದ ಕಾಮಗಾರಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ || ಡಿ. ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಲಾದ ರೂ 100000 ದೇಣಿಗೆಯನ್ನು ಸಾಗರ ತಾಲ್ಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿಗಳಾದ ಶ್ರೀ ದಯಾನಂದ್ ಪೂಜಾರಿ ಯವರು ಶ್ರೀ ನಾಗಯಕ್ಷಿ ಚೌಡೇಶ್ವರಿ ದೇವಸ್ಥಾನದ ಪಧಾಧಿಕಾರಿಗಳಿಗೆ ಹಸ್ಥಾಂತರಿಸಿದರು.
ಶ್ರೀ ಕ್ಷೇತ್ರದ ದೇಣಿಗೆಯನ್ನು ಬಳಸಿಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಈ ಸಂಧರ್ಭದಲ್ಲಿ ಸಲಹೆ ನೀಡಿದರು ದೇವಸ್ಥಾನದ ಸಮಿತಿಯ ಸದಸ್ಯರಾದ ಗಿರೀಶ್ ರವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಮಿತಿಯ ಪಧಾಧಿಕಾರಿಗಳು ಭೇಟಿ ನೀಡಿ ಪೂಜ್ಯರಲ್ಲಿ ವಿನಂತಿಸಿಕೊಂಡ ಮೇರೆಗೆ ದೇಣಿಗೆಯನ್ನು ಮಂಜೂರು ಮಾಡಿರುವ ಬಗ್ಗೆ ಹರ್ಷವನ್ನು ವ್ಯಕ್ತ ಪಡಿಸಿ ಪೂಜ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಪೂಜ್ಯರು ಧಾರ್ಮಿಕ ಶ್ರದ್ದಾ ಕೇಂದ್ರಗಳಿಗೆ ದೇಣಿಗೆಯನ್ನು ನೀಡುತ್ತಿರುವ ಪರಿಣಾಮ ದೇವಸ್ಥಾನಗಳ ನಿರ್ಮಾಣ ಕಾರ್ಯಗಳು ಯಶಸ್ವಿಯಾಗಿ ನಿರ್ಮಾಣಗೊಳ್ಳುತ್ತಿವೆ ಎಂದರು. ಶ್ರೀಧರನಗರ ವಲಯ ಮೇಲ್ವಿಚಾರಕರಾದ ಶ್ರೀ ಕಲ್ಲೇಶ್ , ಗಾಂಧಿನಗರ ಸೇವಾಪ್ರತಿನಿಧಿಯಾದ ಶ್ರೀಮತಿ ಶ್ವೇತಾ, ಶ್ರೀ ನಾಗ ಯಕ್ಷಿ ಚೌಡೇಶ್ವರಿ ಸೇವಾ ಟ್ರಸ್ಟನ ಅಧ್ಯಕ್ಷರಾದ ಶ್ರೀ ಯೋಗಿಶ, ಉಪಾಧ್ಯಕ್ಷರಾದ ಶ್ರೀಮತಿ ನಾಗರತ್ನ, ಕಾರ್ಯದರ್ಶಿಗಳಾದ ಶ್ರೀಮತಿ ಮಾಲಾ ರಾಘವೇಂದ್ರ, ಸಮಿತಿಯ ಸದಸ್ಯರಾದ ಅರುಣ ಕುಮಾರ, ತಿಪ್ಪೇಶ್, ನಾಗರಾಜ, ಗಿರೀಶ, ಮಹೇಶ, ಉಮೇಶ, ಹರೀಶ್, ರೇಣುಕಾ ಪೈ, ನೀತಿನ, ಅಕ್ಷಯ ಇತರರು ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment