ಕೋಮುವಾದಿಗಳ ಪ್ರಯತ್ನದಿಂದ ಭಾರತ ಹಿಂದೂ ರಾಷ್ಟ್ರವಾದರೆ ಜಾತಿ ಹೆಸರಲ್ಲಿ ಶೋಷಣೆ ; ಸಚಿವ ಯತೀಂದ್ರ


ಬೀದರ್‌: ಒಂದುವೇಳೆ ಕೋಮುವಾದಿಗಳ ಪ್ರಯತ್ನದಿಂದ ಭಾರತ ಹಿಂದೂ ರಾಷ್ಟ್ರವಾದರೆ ಮತ್ತೆ ಜಾತಿಯ ಹೆಸರಿನಲ್ಲಿ ಶೋಷಣೆ ಆರಂಭವಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಬೀದರ್ ನಲ್ಲಿ ಶೋಷಿತ ಸಮುದಾಯಗಳ (ಅಹಿಂದ) ಮುಖಂಡರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅಹಿಂದ ವರ್ಗದ ದೊಡ್ಡ ಶತ್ರು ಮನುವಾದಿಗಳು ಮತ್ತು ಕೋಮುವಾದಿಗಳು. ಇವರು ಈ ದೇಶದ ಸಂವಿಧಾನವನ್ನು ವಿರೋಧಿಸುತ್ತಾರೆ.

ಭಾರತ ಹಿಂದೂ ರಾಷ್ಟ್ರದ ಆದ್ರೆ ಅದಕ್ಕಿಂತ ದೊಡ್ಡ ಅಪಾಯ ಮೊತ್ತೊಂದಿಲ್ಲಾ ಎಂದು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವ್ರೇ ಹೇಳಿದ್ದಾರೆ. ಸಂವಿಧಾನ ಉಳಿದರೆ ನಾವೆಲ್ಲ ಉಳಿಯಲು ಸಾಧ್ಯವಾಗಿದ್ದು, ಜಾತಿ ವ್ಯವಸ್ಥೆ ವಿರುದ್ಧ ಬಸವಣ್ಣ, ದಾಸರು, ಶರಣರು ಹೋರಾಡಿದರೂ ಅದು ಹೋಗುತ್ತಿಲ್ಲ ಇದಕ್ಕೆ ಕಾರಣ ಹಿಂದೂ ಧರ್ಮ, ಜಾತಿ ವ್ಯವಸ್ಥೆಗೆ ಕೊಟ್ಟಿರುವ ಒಪ್ಪಿಗೆಯ ಮುದ್ರೆ ಎಂದು ಹೇಳಿದ್ದಾರೆ.

ಶತಮಾನಗಳಿಂದ ಶೋಷಿತರು ಶೋಷಣೆಗೆ ಒಳಗಾಗುತ್ತಿದ್ದೇವೆ. ಕೆಲವರು ಧರ್ಮದ ಕಟ್ಟುಪಾಡುಗಳನ್ನು ಹೇಳುತ್ತ ನಮ್ಮನ್ನು ಶೋಷಿಸುತ್ತಿದ್ದಾರೆ. ಆ ಶೋಷಣೆಯಿಂದ ನಾವು ಹೊರಬರುವ ಸಮಯ ಬಂದಿದೆ. ಬೀದರ್‌ನ ಈ ನೆಲ ಶೋಷಣೆ ವಿರುದ್ಧ ಹೋರಾಡಿದ ಮಹಾನ್ ವ್ಯಕ್ತಿ ಬಸವಣ್ಣನವರು ನಡೆದಾಡಿದ ನೆಲ. ಬಸವಣ್ಣನವರು ಇದೇ ನೆಲದಿಂದ ಜಗತ್ತಿನಲ್ಲೇ ಅತಿದೊಡ್ಡ ಕ್ರಾಂತಿ ಮಾಡಿದರು. ಆದರೆ, ಪಟ್ಟಭದ್ರ ಹಿತಾಸಕ್ತಿಗಳು ಮತ್ತೆ ನಮ್ಮನ್ನು ಶೋಷಣೆಗೆ ದೂಡುತ್ತಿದ್ದಾರೆ ಎಂದು ಹೇಳಿದರು.

ಬಾಬಾಸಾಹೇಬರು ಸಂವಿಧಾನದ ಮೂಲಕ ಎಲ್ಲರಿಗೂ ಸಮಾನತೆಯನ್ನು ಕೊಟ್ಟರು. ದೇವರಾಜ ಅರಸು ಅವರು ಹಿಂದುಳಿದ ವರ್ಗಗಳಿಗಾಗಿ ತಮ್ಮ ಇಡೀ ಜೀವನವನ್ನು ಮೀಸಲಿಟ್ಟರು. ವಿ.ಪಿ. ಸಿಂಗ್ ಅವರು ಹಿಂದುಳಿದ ವರ್ಗದವರಿಗೆ ಮೀಸಲಾತಿ ಕಲ್ಪಿಸಲು ತಮ್ಮ ಸರ್ಕಾರವನ್ನೇ ತ್ಯಾಗ ಮಾಡಿದರು.

ಸಿದ್ದರಾಮಯ್ಯನವರು ಶೋಷಿತರಿಗಾಗಿ ಅಹಿಂದ ಸಂಘಟನೆ ಕಟ್ಟಿದರು ಎಂದು ನೆನಪಿಸಿದರು. ಅಹಿಂದ ನಾಯಕರು ಹೋರಾಟ ಮಾಡಿದ್ರೆ ಮಾತ್ರ ನಾವು ನಮ್ಮ ಪ್ರಾತಿನಿಧ್ಯಗಳನ್ನ ಪಡೆಯೋಕೆ ಸಾಧ್ಯ ಎಂದು ಎಚ್ಚರಿಸಿದ್ದಾರೆ.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ