ಸಂಘ ಪರಿವಾರದವರಿಗೆ ನಮ್ಮ ಶಾಸಕರು ಕರೆ ಮಾಡಿದ್ದರು ಎನ್ನುವುದನ್ನು ಸಾಬೀತುಪಡಿಸಿ-ಸಾಗರ ಯೋಜನಾ ಪ್ರಾಧಿಕಾರದ ಸದಸ್ಯ ಮತ್ತು ಮಾಜಿ ತಾಪಂ ಸದಸ್ಯ ಸೋಮಶೇಖರ ಲ್ಯಾವಿಗೆರೆ

ಸಂಘ ಪರಿವಾರದವರಿಗೆ ನಮ್ಮ ಶಾಸಕರು ಕರೆ ಮಾಡಿದ್ದರು ಎನ್ನುವುದನ್ನು ಸಾಬೀತುಪಡಿಸಿ-ಸಾಗರ ಯೋಜನಾ ಪ್ರಾಧಿಕಾರದ ಸದಸ್ಯ ಮತ್ತು ಮಾಜಿ ತಾಪಂ ಸದಸ್ಯ ಸೋಮಶೇಖರ ಲ್ಯಾವಿಗೆರೆ


ಸಾಗರ : ಮಾಜಿ ಶಾಸಕ ಹರತಾಳು ಹಾಲಪ್ಪ ಅವರಿಗೆ ನಮ್ಮ ಶಾಸಕರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಂಘ ಪರಿವಾರದವರಿಗೆ ನಮ್ಮ ಶಾಸಕರು ಕರೆ ಮಾಡಿದ್ದರು ಎನ್ನುವುದನ್ನು ಸಾಬೀತುಪಡಿಸಿ ಎಂದು ಸಾಗರ ನಗರ ಪ್ರಾಧಿಕಾರ ಸದಸ್ಯ ಸೋಮಶೇಖರ್ ಲ್ಯಾವಿಗೆರೆ ಸವಾಲು ಹಾಕಿದ್ದಾರೆ.

ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಶಾಸಕರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ. ಸಚಿವ ಸ್ಥಾನ ಸಿಕ್ಕರೆ ಕ್ಷೇತ್ರವನ್ನು ಅಭಿವೃದ್ದಿಪಡಿಸಬಹುದು ಎಂಬ ಆಶಯ ಬೇಳೂರು ಅವರದ್ದಾಗಿತ್ತು. ಆದರಿಂದ ಮೂರು ತಿಂಗಳು ಬೆಂಗಳೂರಿನಲ್ಲಿದ್ದರು. ಹರತಾಳು ಹಾಲಪ್ಪ ಸಚಿವರಾಗಿದ್ದ ಸಂದರ್ಭದಲ್ಲಿ ಆರು ತಿಂಗಳು ಯಾವ ಪ್ರಕರಣದಲ್ಲಿ ಸಿಲುಕಿ ಜೈಲಿನಲ್ಲಿದ್ದು ಎನ್ನುವುದನ್ನು ಸಾರ್ವಜನಿಕಗೊಳಿಸಲಿ ಎಂದು ಹೇಳಿದರು.



ಆಡಳಿತ ವೈಫಲ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ ಮಾಡುವುದನ್ನು ನಾವು ಸ್ವಾಗತಿತ್ತೇವೆ. ಆದರೆ ಹೋರಾಟದ ನೆಪದಲ್ಲಿ ಶಾಸಕರ ತೇಜೋವಧೆಯನ್ನು ಸಹಿಸುವುದಿಲ್ಲ. ಗ್ರಾಮ ಪಂಚಾಯ್ತಿ ಮೀಸಲಾತಿಯಲ್ಲಿ ಶಾಸಕರ, ನಮ್ಮ ಹಸ್ತಕ್ಷೇಪ ಇಲ್ಲ. ನಿಮ್ಮ ಅಧಿಕಾರ ಅವಧಿಯಲ್ಲಿ ಸರ್ವಪಕ್ಷದ ಸಭೆಯನ್ನು ಎಷ್ಟು ಬಾರಿ ಕರೆದು ಚರ್ಚೆ ಮಾಡಿದ್ದೀರಿ. ಮೀಸಲಾತಿ ನಿಗಧಿ ಪಡಿಸುವುದು ಚುನಾವಣಾ ಆಯೋಗದ ಕೆಲಸ ಎಂದ ಅವರು, ತಾಲ್ಲೂಕಿನಲ್ಲಿ ಹಾಳಾಗಿದ್ದ ಮಳೆಮಾಪನಾ ಯಂತ್ರವನ್ನು ರಿಪೇರಿ ಮಾಡಿಸುವಲ್ಲಿ ಶಾಸಕರು ವಿಶೇಷ ಆಸ್ಥೆ ವಹಿಸಿದ್ದರಿಂದ ಇವತ್ತು ಬಹುತೇಕ ಮಳೆಮಾಪನಾ ಯಂತ್ರ ಸರಿಯಾಗಿ ಕೆಲಸ ಮಾಡುತ್ತಿದೆ. ನಿಮ್ಮದೇ ಶಾಸಕರಾದ ಶಿಕಾರಿಪುರದಲ್ಲೂ ಇದೇ ಸ್ಥಿತಿ ಇರುವ ಬಗ್ಗೆ ಬಿಜೆಪಿಯವರು ಏನು ಹೇಳುತ್ತಾರೆ ಎಂದು ಹೇಳಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಮಾತನಾಡಿ, ಗ್ರಾಮ ಪಂಚಾಯ್ತಿ ಮೀಸಲಾತಿ ಗಾಂಧಿಮಂದಿರದಲ್ಲಿ, ಪ್ರವಾಸಿ ಮಂದಿರದಲ್ಲಿ ಮಾಡಿದ್ದೇವೆ ಎಂದು ಆರೋಪಿಸಿರುವ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಹೇಗೆ ನಿಭಾಯಿಸಿದ್ದರು. ಕ್ಷೇತ್ರದ ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಕೈಬಿಡಿ. ಮೀಸಲಾತಿಗೂ ಕಾಂಗ್ರೇಸ್ ಪಕ್ಷಕ್ಕೂ ಯಾವುದೇ ಸಂಬAಧವಿಲ್ಲ. ಶಾಸಕರು ಈಚೆಗೆ ಕಂದಾಯ ಸಚಿವರನ್ನು ಭೇಟಿ ಮಾಡಿ ಮಳೆಮಾಪನಾ ಯಂತ್ರ ರಿಪೇರಿ ಬಗ್ಗೆ ಮನವಿ ಮಾಡಿದ್ದಕ್ಕೆ 20 ಮಳೆಮಾಪನಾ ಯಂತ್ರ ಮAಜೂರು ಮಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ಅಳವಡಿಸಲಾಗಿದೆ. ಮಾಜಿ ಶಾಸಕ ಹರತಾಳು ಹಾಲಪ್ಪ ಅವರಿಗೆ ಕ್ರೆಡಿಟ್ ಫೋಬಿಯಾ. ಯಾರೋ ಕೆಲಸ ಮಾಡಿದ್ದನ್ನು ನಾನೇ ಮಾಡಿಸಿದ್ದು ಎಂದು ಪ್ರಚಾರ ಪಡೆಯುವ ಹುಚ್ಚು ಅವರಿಗಿದ್ದು, ಇದೀಗ ತಮ್ಮ ಪ್ರತಿಭಟನೆಯಿಂದಲೇ ಮಳೆಮಾಪನಾ ಯಂತ್ರ ರಿಪೇರಿ ಆಯಿತು ಎಂದು ಹೇಳಿದರೂ ಅಚ್ಚರಿಯಿಲ್ಲ ಎಂದು ತಿಳಿಸಿದರು.

ಕಾಂಗ್ರೇಸ್ ಹಿಂದುಳಿದ ವರ್ಗದ ಘಟಕ ಗಣಪತಿ ಮಂಡಗಳಲೆ ಹಾಜರಿದ್ದರು.

ಸಂಘ ಪರಿವಾರದವರಿಗೆ ನಮ್ಮ ಶಾಸಕರು ಕರೆ ಮಾಡಿದ್ದರು ಎನ್ನುವುದನ್ನು ಸಾಬೀತುಪಡಿಸಿ-ಸಾಗರ ಯೋಜನಾ ಪ್ರಾಧಿಕಾರದ ಸದಸ್ಯ ಮತ್ತು ಮಾಜಿ ತಾಪಂ ಸದಸ್ಯ ಸೋಮಶೇಖರ ಲ್ಯಾವಿಗೆರೆ

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ


Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ