ಲಾಗಾಯ್ತಿನಿಂದಲೂ ಮುದ್ರಣ ಮಾಧ್ಯಮದ ಪ್ರಭಾವ ಪರಿಣಾಮಕಾರಿಯಾದದ್ದು-ಸಾಗರ ನಗರಸಭಾ ಪೌರಾಯಕ್ತ ಎಚ್‌.ಕೆ. ನಾಗಪ್ಪ

ಲಾಗಾಯ್ತಿನಿಂದಲೂ ಮುದ್ರಣ ಮಾಧ್ಯಮದ ಪ್ರಭಾವ ಪರಿಣಾಮಕಾರಿಯಾದದ್ದು-ಸಾಗರ ನಗರಸಭಾ ಪೌರಾಯಕ್ತ ಎಚ್‌.ಕೆ. ನಾಗಪ್ಪ 

ಹಿರಿಯ ಪತ್ರಕರ್ತರಾದ ರವಿನಾಯ್ಡು ಸಾಗರ, ಜಾವಗಲ್ ಚಂದ್ರಶೇಖರ ಭಟ್ ಜೋಗಫಾಲ್ಸ್, ಉದ್ಯಮಿ ಮಹೇಶ್ ಡಿ., (RBD) ರಾಜ್ಯಮಟ್ಟದ ಸಮಾಜಸೇವೆ ಪ್ರಶಸ್ತಿ ಪುರಸ್ಕೃತ ಜಿ.ನಾಗೇಶ್, ಪತ್ರಕರ್ತರ ಸಂಘದ ರಾಜ್ಯ ಪ್ರಶಸ್ತಿ ಪುರಸ್ಕೃತ ಮಹೇಶ್ ಹೆಗಡೆ ಅವರಿಗೆ ಸನ್ಮಾನ

ಸಾಗರ : ಲಾಗಾಯ್ತಿನಿಂದಲೂ ಮುದ್ರಣ ಮಾಧ್ಯಮದ ಪ್ರಭಾವ ಪರಿಣಾಮಕಾರಿಯಾದದ್ದು. ಸ್ವಾತಂತ್ರö್ಯ ಸಂಗ್ರಾಮ, ಸ್ವಾತಂತ್ರö್ಯ ನಂತರದ ದಿನಗಳಲ್ಲೂ ಮುದ್ರಣ ಮಾಧ್ಯಮ ಸಮೂಹ ಜಾಗೃತಿಗೊಳಿಸುವಲ್ಲಿ ವಹಿಸಿದ ಪಾತ್ರ ಸ್ಮರಣೀಯವಾದದ್ದು ಎಂದು ಪೌರಾಯುಕ್ತ ಎಚ್.ಕೆ.ನಾಗಪ್ಪ ತಿಳಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ಹಿರಿಯ ಹಾಗೂ ಸಾಧಕ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 

ಶಾಸಕಾಂಗ, ಕಾರ್ಯಾಂಗದ ತಪ್ಪುಗಳನ್ನು ಎತ್ತಿ ಹಿಡಿದು ಅದನ್ನು ತಿದ್ದಿತೀಡುವ ಮಾಧ್ಯಮದ ಮೂಲಕ ಪ್ರಚುರಪಡಿಸಿ ಸಮಾಜ ಜಾಗೃತಿಯಲ್ಲಿ ಪತ್ರಕರ್ತರು ವಹಿಸುತ್ತಿರುವ ಪಾತ್ರ ಗಮನಾರ್ಹವಾದದ್ದು. ಹಿಂದಿನಿAದಲೂ ಪತ್ರಿಕಾ ರಂಗ ತನ್ನ ಶ್ರೇಷ್ಟತೆಯನ್ನು ಕಾಯ್ದುಕೊಂಡು ಬಂದಿದೆ. ಬದಲಾದ ದಿನಮಾನಗಳಲ್ಲಿ ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳು ವಿವಿಧ ಹಂತದಲ್ಲಿ ಕೆಲಸ ಮಾಡುತ್ತಿವೆ. ಹೊಗಳುವವರ ಹಿಂದೆ ಹೋದರೆ ಹೊಳೆಗೆ ಹಾಕುತ್ತಾರೆ, ತಮ್ಮ ತಪ್ಪುಗಳನ್ನು ತಿಳಿಸಿ ಎಚ್ಚರಿಸುವವರು ಜೊತೆ ಇದ್ದರೆ ನಮಗೆ ಉತ್ತಮ ಮಾರ್ಗ ತೋರಿಸುತ್ತಾರೆ ಎಂದು ಹೇಳಿದರು.

ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ವೈದ್ಯನಾಥ್, ಜಿಲ್ಲಾ ಪತ್ರಕರ್ತರ ಸಂಘ ಜಿಲ್ಲಾದ್ಯಂತ ಪತ್ರಕರ್ತರ ಹಿತಕಾಯುವ ಕೆಲಸ ಮಾಡುತ್ತಿದೆ. ಪತ್ರಿಕಾ ದಿನಾಚರಣೆಯನ್ನು ಎಲ್ಲಾ ತಾಲ್ಲೂಕುಗಳಲ್ಲೂ ವಿಭಿನ್ನವಾಗಿ ನಡೆಸುವ ಮೂಲಕ ಮಾದರಿಯಾಗಿದೆ. ನಮ್ಮನ್ನು ನಾವು ಅವಲೋಕಿಸಿಕೊಳ್ಳಲು ಪತ್ರಿಕಾ ದಿನಾಚರಣೆ ಪೂರಕವಾಗಿದೆ. ಬದಲಾದ ದಿನಮಾನಗಳಲ್ಲಿ ಬ್ಲಾಕ್‌'ಮೇಲ್ ಪತ್ರಕರ್ತರ ಬಗ್ಗೆ ಸಂಘ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದೆ. ಪತ್ರಕರ್ತರು ಹೆಚ್ಚು ಎಚ್ಚರಿಕೆಯಿಂದ ಸಮಾಜ ಜಾಗೃತಿಗೊಳಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ರಾಜ್ಯ ಸಮಿತಿ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ದೇಶದಲ್ಲಿ ಅತ್ಯಂತ ಸಂಕಷ್ಟದಲ್ಲಿ ಇರುವ ವರ್ಗಗಳಲ್ಲಿ ಪತ್ರಕರ್ತರ ವರ್ಗ ಪ್ರಮುಖವಾಗಿದೆ. ಪ್ರಭುತ್ವ ನಮ್ಮನ್ನು ವಿರೋಧ ಪಕ್ಷದಂತೆ ನೋಡುತ್ತಿದ್ದು, ನಮಗೆ ಸೌಲಭ್ಯ ಕೊಡುವ ವಿಷಯ ಬಂದಾಗ ಅಂತರ ಕಾಯ್ದುಕೊಳ್ಳುವ ಸ್ಥಿತಿ ಹಿಂದಿನಿಂದಲೂ ಜಾರಿಯಲ್ಲಿದೆ. ವೈಯಕ್ತಿಕ ನೋವನ್ನು ಬದಿಗಿಟ್ಟು ಸಮಾಜದ ನೋವು ತಮ್ಮ ನೋವೆಂದು ಪರಿಗಣಿಸಿ ಕಾರ್ಯನಿರ್ವಹಿಸುವ ಪತ್ರಕರ್ತರು ಪ್ರಜಾಪ್ರಭುತ್ವದ ಕಣ್ಗಾವಲಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ರವಿನಾಯ್ಡು ಸಾಗರ, ಜಾವಗಲ್ ಚಂದ್ರಶೇಖರ ಭಟ್ ಜೋಗಫಾಲ್ಸ್, ಉದ್ಯಮಿ ಮಹೇಶ್ ಡಿ., ರಾಜ್ಯಮಟ್ಟದ ಸಮಾಜಸೇವೆ ಪ್ರಶಸ್ತಿ ಪುರಸ್ಕೃತ ಜಿ.ನಾಗೇಶ್, ಪತ್ರಕರ್ತರ ಸಂಘದ ರಾಜ್ಯ ಪ್ರಶಸ್ತಿ ಪುರಸ್ಕೃತ ಮಹೇಶ್ ಹೆಗಡೆ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹಾಲಸ್ವಾಮಿ, ಉಪಾಧ್ಯಕ್ಷ ಹುಚ್ಚರಾಯಪ್ಪ, ಪ್ರಮುಖರಾದ ಆರುಂಡಿ ಶ್ರೀನಿವಾಸ್, ನಾಗರಾಜ ಜೈನ್ ಉಪಸ್ಥಿತರಿದ್ದರು. ಸತ್ಯನಾರಾಯಣ ಕೆ.ಬಿ. ಪ್ರಾರ್ಥಿಸಿದರು. ಎಂ.ಜಿ.ರಾಘವನ್ ಸ್ವಾಗತಿಸಿದರು.

ಸಂಘದ ಅಧ್ಯಕ್ಷ ಮಹೇಶ್ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಎಂ.ರಾಘವೇಂದ್ರ,ಪ್ರ ಕಾಶ್ ಕುಗ್ವೆ, ಲೋಕೇಶ್ ಕುಮಾರ್, ಮಲ್ಲಿಕಾರ್ಜುನ, ನಾಗರಾಜ್ ಮೂರನೇಕಣ್ಣು ಅಭಿನಂದನಾ ಪತ್ರ ವಾಚನ ಮಾಡಿದರು. ವಸಂತ್ ವಂದಿಸಿದರು. ದೀಪಕ್ ಸಾಗರ್ ನಿರೂಪಿಸಿದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ