ಸಂಯುಕ್ತ ರೈತ ಸಂಘದಿಂದ ಸರಕಾರದ ವಿವಿಧ ವೇತನಗಳು ನೀಡುವಂತೆ ಮನವಿ
ಸಂಯುಕ್ತ ರೈತ ಸಂಘದಿಂದ ಸರಕಾರದ ವಿವಿಧ ವೇತನಗಳು ನೀಡುವಂತೆ ಮನವಿ
ಸಾಗರ ; ರಾಜ್ಯದಲ್ಲಿ ವಯೋವೃದ್ಧರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ನೀಡುತ್ತಿರುವ ವಿರಾಮ ವೇತನಕ್ಕೆ ಯಾವುದೇ ಆದಾಯ ಕೇಳದೇ ನೀಡುವಂತೆ ಕೋರಿ ಇಙದು ರೈತ ಸಂಘದಿಂದ ಸಾಗರ ತಹಶಿಲ್ದಾರರ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು.
ಸಂಘಟನೆಯ ವತಿಯಿಂದ ಮನವಿ ಮಾಡಿಕೊಳ್ಳುವುದೇನೆಂದರೇ, ರಾಜ್ಯ ಸರ್ಕಾರವು ವಯೋವೃದ್ಧರಿಗೆ ಅಂಗವಿಕಲರಿಗೆ ವಿಧವಾ ವೇತನ, ಇವುಗಳಿಗೆ ಆದಾಯ ಕೇಳುತ್ತಿರುವ ಸರ್ಕಾರದ ಕ್ರಮ ಅವೈಜ್ಞಾನಿಕವಾಗಿದೆ. ವಯೋವೃದ್ಧರು ಈಗಿನ ಕಾಲದಲ್ಲಿ ಒಂದು ರೀತಿಯಲ್ಲಿ ನಿರ್ಗತಿಕರು, ಯಾಕೆಂದರೆ ಅವರನ್ನು ಮನೆಯಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಅವರ ಮಾತ್ರೆ, ಔಷದಿ. ಇನ್ನಿತರ ಅತ್ಯಗತ್ಯ ಸೌಲತ್ತುಗಳನ್ನು ಪಡೆಯಲು ಅವರಿಗೆ ಹಣದ ಅವಶ್ಯ ತೀರಾ ಅಗತ್ಯ, ಇದೇ ರೀತಿಯಲ್ಲಿ ವಿಧವಾ ವೇತನ, ಅಂಗವಿಕಲ ವೇತನಗಳಿಗೂ ರಾಜ್ಯ ಸರ್ಕಾರ ಆದಾಯದ ಮಿತಿ ಕೇಳ ಬಾರದು (ಅಥವಾ ಅವರ ಆದಾಯ ಮಿತಿ 1,25,000 ವನ್ನಾದರೂ ನಿಗಧಿಪಡಿಸಬೇಕು) ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಆದಾಯ ಮಿತಿ ಕೇಳುವುದನ್ನು ಕೈ ಬಿಡಬೇಕಾಗಿ ಸಮಸ್ತ ರಾಜ್ಯ ಹಿರಿಯರು, ಅಂಗವಿಕಲರು, ವಿಧವೆಯರ ಪರವಾಗಿ ತಮ್ಮಲ್ಲಿ ಈ ಮೂಲಕ ವಿನಂತಿಸುತ್ತಾ ಸರ್ಕಾರವನ್ನು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಎಂ.ಬಿ. ಮಂಜಪ್ಪ,ದೇವು ಆಲಳ್ಳಿ, ನಾಗರಾಜ, ಶಿವಪ್ಪ ಗುಡ್ಡೇಕೌತಿ, ಸುರೇಶ, ವೆಂಕಟೇಶ, ನಾರಾಯಣ ಅರಮನೆಕೇರಿ, ರಾಮಪ್ಪ ಶಿರವಾಳ, ಜಿನೇಶ ಕುಮಾರ್, ಮಂಜುನಾಥ ಗಾಂಧಿನಗರ ಇನ್ನಿತರರು ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment