ಸಾಗರದಿಂದ ನೇರಲಿಗೆ ಇದ್ದ ಸರಕಾರಿ ಬಸ್ ಕಳೆದ ನಾಲ್ಕು ತಿಂಗಳಿನಿಂದ ಸ್ಟಾಪ್-ಮರು ಚಾಲನೆ ಮಾಡಲು ಕರವೇ ಯುವ ಘಟಕದ ಅಧ್ಯಕ್ಷ‌ ಶರತ್ ನೇರಲಿಗೆ ಆಗ್ರಹ

ಸಾಗರದಿಂದ ನೇರಲಿಗೆ ಇದ್ದ ಸರಕಾರಿ ಬಸ್ ಕಳೆದ ನಾಲ್ಕು ತಿಂಗಳಿನಿಂದ ಸ್ಟಾಪ್-ಮರು ಚಾಲನೆ ಮಾಡಲು ಕರವೇ ಯುವ ಘಟಕದ ಅಧ್ಯಕ್ಷ‌ ಶರತ್ ನೇರಲಿಗೆ ಆಗ್ರಹ

ಸಾಗರ ; ಸಾಗರದಿಂದ ನೇರಲಿಗೆಗೆ ಸಂಚಾರವಾಗುತ್ತಿದ್ದ ಸರಕಾರಿ ಬಸ್ ಕಳೆದ ನಾಲ್ಕು ತಿಂಗಳಿನಿಂದ ನಿಲುಗಡೆ ಆಗಿದೆ. ಸಾಗರ ತಾಲ್ಲೂಕಿನ ನೇರಲಿಗೆಯಲ್ಲಿ ಸರಕಾರಿ ಕಾಲೇಜಿಗೆ ಮತ್ತು ಖಾಸಗೀ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳಿಗೆ ಅತೀ ಹೆಚ್ಚಿನ ತೊಂದರೆ ಆಗುತ್ತದೆ.‌

ಸಾರ್ವಜನಿಕರಿಗೂ ಸಹ ಇದರ ಬಗ್ಗೆ ಅತೀ ಅವಶ್ಯಕತೆ ಇದೆ‌. ಇದರ ಬಗ್ಗೆ ಈ ಹಿಂದೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಮನವಿ ಮಾಡಿದಾಗ ಅವರ ಸೂಚನೆಯಂತೆ ನೇರಲಿಗೆ ಗ್ರಾಮಕ್ಕೆ ಬಸ್ ಸಂಚಾರವಿತ್ತು.

ಆದರೆ ಇತ್ತಿಚೆಗೆ ಬಸ್ 'ಸ್ಟಾಪ್" ಆಗಿದ್ದು, ಇದರ ಬಗ್ಗೆ ಯಾರೂ ಸಹ ಏಕೆ ಬಸ್ ನಿಲ್ಲಿಸಲಾಯಿತು ಎಂದು ಹೇಳಿಲ್ಲ.

ಈ ಬಗ್ಗೆ ನೇರಲಿಗೆ ಗ್ರಾಮಕ್ಕೆ ಕೂಡಲೇ ಬಸ್ ಬಿಡಬೇಕು. ಇಲ್ಲದಿದ್ದರೆ ನೇರಲಿಗೆ ಗ್ರಾಮದಿಂದ ಸಾಗರದ ಕೆಎಸ್'ಆರ್'ಟಿಸಿ ಡಿಪೋವರೆಗೆ ಗ್ರಾಮಸ್ಥರ ಸಹಕಾರದಿಂದ ಎಲ್ಲರೂ ಕೂಡಿ ಪಾದಯಾತ್ರೆ ಮಾಡಲಾಗುವುದೆಂದು ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕದ ಅಧ್ಯಕ್ಷ ಶರತ್ ನೇರಲಿಗೆ ಪ್ರಕಟಣೆ ನೀಡಿದ್ದಾರೆ.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ