ಸರಳತೆಯ 'ಶ್ರೀಮಂತ-ಸಾಹುಕಾರ' ನಮ್ಮ ನಡುವಿನ ಪರೋಪಕಾರಿ ನಾಗಪ್ಪಣ್ಣ ನಮ್ಮನೆ ಆಶ್ರಮದ ಮಕ್ಕಳ ಭವಿಷ್ಯಕ್ಕೆ ಸಹಾಯ ಹಸ್ತ ನೀಡಿದ ಉದ್ಯಮಿ ಬೇಳೂರು ನಾಗಪ್ಪನವರು

ಕೂಡಿಟ್ಟವನು ಶ್ರೀಮಂತನೋ-ಕೈ ಎತ್ತಿ ಕೊಟ್ಟವನು ಶ್ರೀಮಂತನೋ...

ಸರಳತೆಯ 'ಶ್ರೀಮಂತ-ಸಾಹುಕಾರ' ನಮ್ಮ ನಡುವಿನ ಪರೋಪಕಾರಿ ನಾಗಪ್ಪಣ್ಣ

ನಮ್ಮನೆ ಆಶ್ರಮದ ಮಕ್ಕಳ ಭವಿಷ್ಯಕ್ಕೆ ಸಹಾಯ ಹಸ್ತ ನೀಡಿದ ಉದ್ಯಮಿ ಬೇಳೂರು ನಾಗಪ್ಪನವರು

ತನ್ನ ತಮ್ಮನೇ ಕ್ಷೇತ್ರದ ಶಾಸಕನಾದರೂ ನಿರ್ಗವಿ, ನಿರುಪದ್ರವಿ, ನೈಸರ್ಗಿಕ ನ್ಯಾಯದ ಧೀಮಂತ ವ್ಯಕ್ತಿ ನಮ್ಮ ಸಾಗರ ತಾಲ್ಲೂಕಿನ ಬೇಳೂರು ನಾಗಪ್ಪನವರು ತಮ್ಮ ಸರಳತೆಯ ಮೂಲಕ ಎಲ್ಲರಿಗೂ ಗೊತ್ತಿರುವ ಜನ-ರಾಜಕಾರಣದ ಉಸಾಬರಿಗೆ ಬರುವುದೇ ಇಲ್ಲ. ಸ್ವತಃ ತಮ್ಮನೇ ಕ್ಷೇತ್ರದ ಶಾಸಕನಾದರೂ ನನ್ನ ತಮ್ಮ ಒಬ್ಬ ಎಂಎಲ್'ಎ ಎಂದೂ ಎಲ್ಲೂ ಹೇಳಿಕೊಂಡಿಲ್ಲ. ಮತ್ತು ಏನಾದರೂ ಕೆಲಸ ಅಧಿಕಾರಿಗಳಿಂದ ಮಾಡಿಸಿಕೊಂಡಿಲ್ಲ.‌ ನಾಗಪ್ಪಣ್ಣನ ವ್ಯಕ್ತಿತ್ವ ಹೇಗೆಂದರೆ, ತಾವುಗಳು ಸರಿಯಾಗಿ ಗಮನಿಸಿದ ನಂತರವೇ ಸಹಾಯ ಮಾಡುವ ಗುಣ ಹೊಂದಿರುವವರು....

ಇಂದಿಗೂ ನಿರ್ಗತಿಕರನ್ನು ನೋಡಿದ ಕೂಡಲೇ ಯಾವುದಾರೂ ಹತ್ತಿರದ ಹೋಟೇಲುಗಳಿಂದ ಅವರು ಊಟ-ತಿಂಡಿ ಫಿಕ್ಸ್, ಆದರೆ ಪ್ರಚಾರಕ್ಕೆ ಒಲ್ಲದ ಮನಸ್ಸು ಇವರದ್ದು. 

ಇಂತಹ ವ್ಯಕ್ತಿ ಅಪರೂಪ, ಇತ್ತೀಚೆಗೆ ಅವರ ಮನೆಗೆ ಒಬ್ಬರು ಅನಾರೋಗ್ಯ ನಿಮಿತ್ತ ಹೋಗಿದ್ದರಂತೆ ಅವರಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಅದು ವಿಷಯದ ಅಂತರಾಳ ಅರಿತ ನಂತರ,....

ಸುಮ್ಮನೆ ಸಹಾಯ ಕೇಳಿ ಹೋಗುವ, ನೈಜತೆ ಇಲ್ಲದೇ ಕ್ರೋಢಿಕರಣಕ್ಕೆ ಮುಂದಾಗುವ ಜನರೇ ಇಂದು ಹೆಚ್ಚಾಗುತ್ತಿದ್ದಾರೆ ಎಂಬ ಲೋಕಾರೂಢಿಯ ವಮಾತಿನ ನಡುವೆ ನಾಗಪ್ಪನವರು ಮಾಡುವ ಸಹಕಾರ ಅರ್ಹರಿಗೆ ಸಿಗಲೆಂದು ಆಶೀಸೋಣ.

ಇತ್ತಿಚೆಗೆ ನಮ್ಮನೆ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸಂತೋಷ್ ಲಿಂಗನಮಕ್ಕಿ ನಡೆಸುತ್ತಿರುವ ನಮ್ಮನೆ ಆಶ್ರಮದಲ್ಲಿ, ಮೇಘಾನೆ, ನಾಗವಳ್ಳಿ, ಕಾರ್ಗಲ್ ಹೀಗೆ ಅನೇಕ ದೂರದ ಊರಿಲ್ಲಿರುವ ಗುಡ್ಡಗಾಡು ಮಕ್ಕಳ ಅಭಿವೃದ್ಧಿಗೆ, ಶಿಕ್ಷಣ ವಂಚಿತರಾದ ಮಕ್ಕಳಿಗೆ ತಮ್ಮ ಆಶ್ರಮದ ಮೂಲಕ ಶಿಕ್ಷಣ ವನ್ನು ಕಲ್ಪಿಸುತ್ತಿದ್ದು ಅಂತ ಸಂಸ್ಥೆಗೆ ಬೇಳೂರು ನಾಗಪ್ಪಾಜಿ ಯವರು ಧನ ಸಹಾಯ ಮಾಡಿರುತ್ತಾರೆ. ಇವರಿಗೆ ಮೀನಿನಹೆಜ್ಜೆ ಮಾಧ್ಯಮದ ದ ಮೂಲಕ ಸಂಸ್ಥೆಯ ಪರವಾಗಿ ಧನ್ಯವಾದಗಳು.

ಈ ಸಂದರ್ಭದಲ್ಲಿ ಉದ್ಯಮಿ ಸುಧೀರ್ ಗೋಪಾಲ ಶೆಟ್ಟಿ ಹಕ್ಲಾಡಿ ಹಾಗೂ ಟಿ. ಜಿ. ಸದಾನಂದ, ನಮ್ಮನೆ ಸಂಸ್ಥೆಯ ಮಾನಸ ಉಪಸ್ಥಿತರಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ