ಡಾ।। ಬಿ.ಆರ್. ಅಂಬೇಡ್ಕರ್ ಗುತ್ತಿಗೆ ಪೌರಕಾರ್ಮಿಕರ ಸಂಘ (ರಿ.) ಸಾಗರ ಇವರಿಂದ ಕಾರ್ಮಿಕ ಇಲಾಖೆಯಿಂದ ಬಿಡುಗಡೆಯಾದ ಕನಿಷ್ಠವೇತನ ನೀಡದಿರುವುದರಿಂದ ಮುಷ್ಕರ

ಡಾ।। ಬಿ.ಆರ್. ಅಂಬೇಡ್ಕರ್ ಗುತ್ತಿಗೆ ಪೌರಕಾರ್ಮಿಕರ ಸಂಘ (ರಿ.) ಸಾಗರ ಇವರಿಂದ ಕಾರ್ಮಿಕ ಇಲಾಖೆಯಿಂದ ಬಿಡುಗಡೆಯಾದ ಕನಿಷ್ಠವೇತನ ನೀಡದಿರುವುದರಿಂದ ಮುಷ್ಕರ


ಸಾಗರ ನಗರಸಭೆಯ ಮುಂಭಾಗದಲ್ಲಿ ನಗರಸಭಾ ಹೊರಗುತ್ತಿಗೆ ನೌಕರರಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಬೆಂಬಲಿಸಿ ಮುಷ್ಕರ

ಸಾಗರ ; ಸಾಗರ ನಗರ ಸಭೆಯಲ್ಲಿ ಹಲವಾರು ವರ್ಷಗಳಿಂದ ಹೊರಗುತ್ತಿಗೆ ಪೌರಕಾರ್ಮಿಕರು, ಚಾಲಕರು, ಲೋರ್ಡ್ರ, ಕ್ಲೀನರ್ಸ್ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದು, ಸದರಿ ಕಾರ್ಮಿಕ ಇಲಾಖೆಯಿಂದ ದಿನಾಂಕ : 22.05.2026ರಂದು ಕನಿಷ್ಠ ವೇತನ ಹೆಚ್ಚಳದ ಪಟ್ಟಿಯನ್ನು ಸರ್ಕಾರದಿಂದ ಬಿಡುಗಡೆ ಮಾಡಿರುತ್ತಾರೆ. ಪ್ರಯುಕ್ತ ಈಗಿನ ರಾಜ್ಯ ಸರ್ಕಾರ ಹಣಕಾಸು ಇಲಾಖೆಯ ಜೊತೆಗೆ ಚರ್ಚೆಮಾಡಿ ಕನಿಷ್ಠ ವೇತನ ಮಾಡಲು ಆಗುವುದಿಲ್ಲವೆಂದು ತೀರ್ಮಾನಿಸಿರುತ್ತಾರೆ. ಅದರ ಪ್ರಯುಕ್ತ ಕರ್ನಾಟಕದಾದ್ಯಂತ ಹೊರಗುತ್ತಿಗೆ ಪೌರಕಾರ್ಮಿಕರು, ಚಾಲಕರು, ಲೋರ್ಡ್ರ, ಕ್ಲೀರ್ನಗಳು ದಿನಾಂಕ : 13.08.2026ರಂದು ಫ್ರೀಡಂಪಾರ್ಕ್ ಬೆಂಗಳೂರು ಈ ಸ್ಥಳದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸದರಿ ಸಾಗರ ನಗರಸಭೆ ಕಛೇರಿಯ ಹೊರಗುತ್ತಿಗೆ ಎಲ್ಲಾ ಕಾರ್ಮಿಕರು ದಿನಾಂಕ : 13.08.2026ರ ಗುರುವಾರದಂದು ಸಾಗರ ನಗರ ಸಭೆಯ ಕಛೇರಿಯ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಸಂದೀಪ್‌ ಮತ್ತು ಗುರು ಹೇಳಿದರು.

ಗೌರವಾಧ್ಯಕ್ಷರು ಗುರು, ಅಧ್ಯಕ್ಷರು‌ ಮಂಜುನಾಥ ಟಿ., ಉಪಾಧ್ಯಕ್ಷರು ರಾಜಶೇಖರ, ಕಾರ್ಯದರ್ಶಿ ರಾಘವೇಂದ್ರ, ಸಂಘಟನಾ ಕಾರ್ಯದರ್ಶಿ ರಾಜೇಶ, ಖಜಾಂಚಿ ಜಯಶಂಕರ, ಸಂದೀಪ, ಕಿರಣ ಜಿ., ಮಂಜುನಾಥ ಸಿ., ಸುರೇಖಾ, ಶೋಭಾ, ಕನ್ನಮ್ಮ, ಪ್ರದೀಪ, ಕಮಲಾಕರ, ಮಹೇಶ, ಬಲರಾಮ, ಜೋಸೆಫ್ ಇನ್ನಿತರ ನಗರಸಭಾ ಹೊರಗುತ್ತಿಗೆ ನೌಕರರು ಹಾಜರಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ