ಸರ್ಕಾರಿ ಶಾಲೆ ಜಾಗವನ್ನು ಒತ್ತುವರಿ ಮಾಡಿರುವ ಜಾಗವನ್ನು ತೆರವುಗೊಳಿಸುವಂತೆ ಕೋರಿ ಸಂಯುಕ್ತ ರೈತ ಸಂಘದಿಂದ ಆಗ್ರಹ
ಸರ್ಕಾರಿ ಶಾಲೆ ಜಾಗವನ್ನು ಒತ್ತುವರಿ ಮಾಡಿರುವ ಜಾಗವನ್ನು ತೆರವುಗೊಳಿಸುವಂತೆ ಕೋರಿ ಸಂಯುಕ್ತ ರೈತ ಸಂಘದಿಂದ ಆಗ್ರಹ
ಸಾಗರ ತಾಲ್ಲೂಕಿನಾಧ್ಯಂತ ಸರ್ಕಾರಿ ಶಾಲೆಗಳ ಜಾಗವನ್ನು ಅನೇಕರು ಒತ್ತುವರಿ ಮಾಡಿಕೊಂಡಿರುತ್ತಾರೆ. ಆ ಜಾಗಗಳನ್ನು ತೆರವುಗೊಳಿಸುವಂತೆ ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ. ಉದಾಹರಣೆಗೆ
1) ಸಾಗರ ನಗರದಲ್ಲಿರುವ ಸಿದ್ದೇಶ್ವರ ಪ್ರೌಢಶಾಲೆ ಜಾಗ.3.5 ಎಕರೆ ಜಾಗ ಶಾಲೆ ಮಂಜೂರಾಗಿದ್ದು, ಅಳತೆ ಮಾಡಿದಾಗ ಕೇವಲ 2 ಎಕರೆ ಮಾತ್ರ ಇರುತ್ತದೆ. ಅದರ ಮಾರುಕಟ್ಟೆ ಬೆಲೆ ಸುಮಾರು 10 ಕೋಟಿ
2) ಎಸ್.ಎನ್.ನಗರ ಶಾಲೆ ಸರ್ವೆ ನಂಬರ್ 63ರ ಮಾರ್ಕೇಟ್ ಶಾಲೆಯ 1 ಎಕರೆ ಇದ್ದು, ಅದರ ಜಾಗವನ್ನು ಒತ್ತುವರಿ ಮಾಡಿ ಖಾಸಗಿಯವರ ಕಟ್ಟಡಗಳನ್ನು ಕಟ್ಟಿರುತ್ತಾರೆ, ಇದೇ ರೀತಿ ಸಾಗರ ಪಟ್ಟಣದಲ್ಲಿ 10ಕ್ಕೂ ಹೆಚ್ಚು ಶಾಲೆಗಳ ಜಾಗ ಒತ್ತುವರಿಯಾಗಿರುತ್ತದೆ. ಅದಲ್ಲದೇ ಸಾಗರ ತಾಲ್ಲೂಕಿನಾದ್ಯಂತ ಪ್ರಭಾವಿಗಳು ಸರ್ಕಾರಿ ಶಾಲೆಗಳ ಜಾಗ ಒತ್ತುವರಿ ಮಾಡಿರುತ್ತಾರೆ. ಈ ಬಗ್ಗೆ ತಾಲ್ಲೂಕು ಆಡಳಿತ ಸೂಕ್ತ ಕ್ರಮ ಕೈಗೊಂಡು ಪ್ರಭಾವಿಗಳು ಒತ್ತುವರಿ ಮಾಡಿರುವ ಜಾಗವನ್ನು ತನ್ನ ವಶಕ್ಕೆ ಪಡೆಯುವಂತೆ ಈ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಎಂ.ಬಿ. ಮಂಜಪ್ಪ,ದೇವು ಆಲಳ್ಳಿ, ನಾಗರಾಜ, ಶಿವಪ್ಪ ಗುಡ್ಡೇಕೌತಿ, ಸುರೇಶ, ವೆಂಕಟೇಶ, ನಾರಾಯಣ ಅರಮನೆಕೇರಿ ಇನ್ನಿತರರು ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment