ಸಾಗರ ಹೋಟೆಲ್ ವೃತ್ತಕ್ಕೆ ಮಾರಿಕಾಂಬಾ ವೃತ್ತ ಎಂದು ಮರು ನಾಮಕರಣ-ಶಾಸಕ ಮತ್ತು ಶ್ರೀಮಾದೇನ್ಯಾಪ್ರ ಗೌರವಾಧ್ಯಕ್ಷ ಗೋಪಾಲಕೃಷ್ಣ ಬೇಳೂರು

ಸಾಗರ ಹೋಟೆಲ್ ವೃತ್ತಕ್ಕೆ ಮಾರಿಕಾಂಬಾ ವೃತ್ತ ಎಂದು ಮರು ನಾಮಕರಣ-ಶಾಸಕ ಮತ್ತು ಶ್ರೀಮಾದೇನ್ಯಾಪ್ರ ಗೌರವಾಧ್ಯಕ್ಷ ಗೋಪಾಲಕೃಷ್ಣ ಬೇಳೂರು


ಸಾಗರ : ಸಾಗರ ಹೋಟೆಲ್ ವೃತ್ತಕ್ಕೆ ಮಾರಿಕಾಂಬಾ ವೃತ್ತ ಎಂದು ಮರು ನಾಮಕರಣ ಮಾಡಲಾಗುತ್ತದೆ. ನಗರದ ಹೃದಯ ಭಾಗದಲ್ಲಿರುವ ಮಾರಿಕಾಂಬಾ ದೇವಸ್ಥಾನದ ಅಭಿವೃದ್ದಿಗೆ ಅಗತ್ಯ ಸಹಕಾರ ನೀಡುವುದಾಗಿ ಶಾಸಕ ಹಾಗೂ ಅಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಲ್ಲಿನ ಭದ್ರಕಾಳಿ ಸಭಾಭವನದಲ್ಲಿ ಭಾನುವಾರ ಕರೆಯಲಾಗಿದ್ದ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನದ ಸರ್ವಸದಸ್ಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ದೇವಸ್ಥಾನಕ್ಕೆ ಸಂಬಂಧಿಸಿದಂತೆ ಗಣಪತಿ ಕೆರೆ ಪಕ್ಕದ ಜಾಗದಲ್ಲಿ ಸಭಾಭವನ ಹಾಗೂ ಶೈಕ್ಷಣಿಕ ಸಂಕೀರ್ಣ ನಿರ್ಮಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಇದಕ್ಕೆ ಸರ್ಕಾರದ ಕಡೆಯಿಂದ ಅಗತ್ಯ ಅನುದಾನ ಕೊಡಿಸಲಾಗುತ್ತದೆ. ಇದರ ಜೊತೆಗೆ ನಗರದ ಪ್ರವೇಶ ಸ್ಥಳದಲ್ಲಿ ಮಾರಿಕಾಂಬಾ ಮಹಾದ್ವಾರ ನಿರ್ಮಿಸುವ ಬಗ್ಗೆ ಗಮನ ಹರಿಸುತ್ತೇವೆ ಎಂದರು.

ಎಲ್ಲರಿಗೂ ದೇವಿಯ ಸೇವೆ ಮಾಡುವ ಅವಕಾಶ ಸಿಗುವುದಿಲ್ಲ. ಪ್ರತಿಷ್ಟಾನದ ಸದಸ್ಯರು ನಿಮಗೆ ಮತ ನೀಡಿ ಸೇವೆಯ ಅವಕಾಶ ಕಲ್ಪಿಸಿದ್ದಾರೆ. ಇದರ ಸದುಪಯೋಗಪಡಿಸಿಕೊಳ್ಳಿ. ಉತ್ತಮ ಕೆಲಸ ಮಾಡುವ ಮೂಲಕ ದೇವಸ್ಥಾನವನ್ನು ಮಾದರಿಯಾಗಿ ನಿರ್ಮಿಸುವತ್ತ ನಿಮ್ಮೆಲ್ಲರ ಗಮನ ಇರಲಿ ಎಂದು ತಿಳಿಸಿದರು.


ಶ್ರೀಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಟಾನ ಗೊಫುರ ಸಮಿತಿಯ ಸಂಚಾಲಕ ಬಿ. ಪುರುಷೋತ್ತಮ ಅವರು ನಗುನಗುತ್ತಲೇ ತಮ್ಮ ಸಮಿತಿಯ ಲೆಕ್ಕಾಚಾರ ಮುಗಿಸಿದರು.

ಅವರು ಈಗಿನ ಸಮಿತಿಯಲ್ಲಿ ಕಾರ್ಯದರ್ಶಿಗಳು

ಪ್ರತಿಷ್ಟಾನದ ಅಧ್ಯಕ್ಷ ಎಂ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನಕಾರ್ಯದರ್ಶಿ ಎಂ.ಡಿ.ಆನAದ್, ಪ್ರಮುಖರಾದ ರಾಮಪ್ಪ, ಶ್ರೀನಿವಾಸ್ ಮೇಸ್ತ್ರಿ, ವಿ.ಶಂಕರ್, ಟಿ.ವಿ.ಪಾಂಡುರಂಗ, ಶ್ರೀನಾಥ್, ನಾಗೇಂದ್ರ ಕೆ.ಎನ್., ನಾಗೇಂದ್ರ ಕುಮಟಾ, ಶರಾವತಿ ಸಿ.ರಾವ್ ಇನ್ನಿತರರು ಹಾಜರಿದ್ದರು.

ಸಭೆ ಆರಂಭದಿಂದಲೂ ಹಿಂದಿನ ಸಮಿತಿ ಜಾತ್ರೆ ಸಂದರ್ಭದಲ್ಲಿ ನಿರ್ವಹಿಸಿದ ಲೆಕ್ಕಪತ್ರ ಕುರಿತು ಸದಸ್ಯರು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಾ ಬಂದರು. ಧ್ವನಿವರ್ಧಕ ಅಳವಡಿಕೆ, ಹರಾಜು ಸಮಿತಿ, 3ಲಕ್ಷ ರೂ. ದೇವಸ್ಥಾನ ಸಮಿತಿ ಹೆಸರಿನಲ್ಲಿ ನೀಡಿದ್ದ ಚೆಕ್ ಬೌನ್ಸ್ ಆದ  ಬಗ್ಗೆ ಗಂಭೀರ ಚರ್ಚೆ ನಡೆಯಿತು. ವಸ್ತು ಪ್ರದರ್ಶನ ಸಮಿತಿ ಸಂಚಾಲಕವತಾರಾಮೂರ್ತಿ ಈ ಕುರಿತು ಸ್ಪಷ್ಟನೆ ನೀಡಿದರೂ ಸದಸ್ಯರು ತೃಪ್ತಿಯಾಗದೆ ಗೊಂದಲ ಉಂಟು ಮಾಡಿದರು. ಅಂತಿಮವಾಗಿ ಪೊಲೀಸರಿಗೆ ದೂರು ನೀಡಲು ಸದಸ್ಯರು ಒತ್ತಾಯಿಸಿದರು. ಹಲವು ಸದಸ್ಯರು ಸಂಬಂಧಿತರನ್ನು ಸಮಸ್ಯೆ ಬಗೆ ಹರಿಯುವವರೆಗೆ ಸದಸ್ಯತ್ವದಿಂದ ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ