ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಸಂಯುಕ್ತ ರೈತ ಸಂಘ ಸಾಗರ ತಾಲ್ಲೂಕು ಇವರಿಂದ ಹನೂರು ಶೂಟೌಟ್ ಮತ್ತು ಕಸ್ತೂರಿರಂಗನ್ ವರದಿ ವಿರೋಧಿಸಿ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಕರ್ನಾಟಕ ಸರಕಾರಕ್ಕೆ ಮನವಿ
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಸಂಯುಕ್ತ ರೈತ ಸಂಘ ಸಾಗರ ತಾಲ್ಲೂಕು ಇವರಿಂದ ಹನೂರು ಶೂಟೌಟ್ ಮತ್ತು ಕಸ್ತೂರಿರಂಗನ್ ವರದಿ ವಿರೋಧಿಸಿ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಕರ್ನಾಟಕ ಸರಕಾರಕ್ಕೆ ಮನವಿ
ಹನೂರು ಶುಟೌಟ್ ತನಿಖೆಯಾಗಬೇಕು, ಕಸ್ತೂರಿ ರಂಗನ್ ವರದಿಯನ್ನು ಜಾರಿಗೆ ತರಬಾರದು-ಶಿವಾನಂದ ಕುಗ್ವೆ
ಕಾಂಗ್ರೇಸ್ ಸರಕಾರದಲ್ಲಿ ಶೂಟೌಟ್ ಆಗಿರುವುದು ಖೇದಕರ, ಸೂಕ್ತ ತನಿಖೆ ಆಗಲಿ, ಕಸ್ತೂರಿ ರಂಗನ್ ವರದಿ ಕೇರಳಂ ರಾಜ್ಯದಂತೆ ಇಲ್ಲಿನ ಶಾಸಕ, ಸಂಸದ ಮತ್ತು ಉಸ್ತುವಾರಿ ಸಚಿವರು ಒಂದಾಗಿ ವಿರೋಧಿಸಬೇಕು-ಪತ್ರಕರ್ತ ಎಚ್.ಬಿ. ರಾಘವೇಂದ್ರ
ಉಪವಿಭಾಗಾಧಿಕಾರಿಗಳಿಗೆ ಮನವಿಯನ್ನು ಓದಿ ನೀಡಿದ ಸಂಯುಕ್ತ ರೈತ ಸಂಘದ ಅಧ್ಯಕ್ಷ ಎಂ.ಬಿ.ಮಂಜಪ್ಪ ಹಿರೇನೆಲ್ಲೂರು
ಸಾಗರ ; ಏಳನೆಕರಡು ತಿದ್ದುಪಡಿಯ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣ ತಿರಸ್ಕರಿಸಲು ಒತ್ತಾಯಿಸಿ ಮತ್ತುವಚಾಮರಾಜ ನಗರ ಹನೂರು ತಾಲ್ಲೂಕು ಸಾಕ್ಯಾ ಗ್ರಾಮದ ರೈತರ ಮೇಲೆ ಅರಣ್ಯ ಸಿಬ್ಬಂಧಿ ನಡೆಸಿರುವ ಅಮಾನುಷ ಎನ್ ಕೌಂಟರ್ ಬಗ್ಗೆ ನ್ಯಾಯಂಗ ತನಿಖೆ ಯಾಗಲಿ ಸೂಕ್ತ ಪರಿಹಾರ ನೀಡಬೇಕು. ಚಾಮರಾಜನಗರ ಹನೂರು ತಾಲ್ಲೂಕಿನಲ್ಲಿ ವನ್ಯ ಜೀವಿ ಅರಣ್ಯ ಇಲಾಖೆ ಸಿಬ್ಬಂಧಿ ಇತ್ತೀಚಿಗೆ ತಮ್ಮ ಹೊಲ ಕಾಯಲು ಹೋದ ರೈತರನ್ನು ಏಕಾಏಕಿ ಎನ್ ಕೌಂಟರ ಮಾಡಿರುವುದು ಅತ್ಯಂತ ಅಮಾನುಷ ಘಟನೆ ಯಾಗಿರುತ್ತದೆ. ಇಲ್ಲಿ ಅರಣ್ಯ ಸಿಬ್ಬಂಧಿಗಳು ನಡೆಸಿರುವ ಕೃತ್ಯ ನ್ಯಾಯಂಗ ತನಿಖೆ ಯಾಗಬೇಕು. ಮತ್ತು ಮಡಿದ ರೈತರ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಈ ಮೂಲಕ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಕಸ್ತೂರಿರಂಗನ ವರದಿ ಪರಿಷ್ಕೃತ ವರದಿಯನ್ನು ತಿರಸ್ಕರಿಸಬೇಕು, ಏಕೆಂದರೆ ಪಶ್ಚಿಮ ಘಟ್ಟದ -ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 446 ಜನವಸತಿ ಯುಳ್ಳ ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಸೇರ್ಪಡೆ ಮಾಡಿ ಪರಿಷ್ಕೃತ ವರದಿ ಸರ್ಕಾರದ ಮುಂದಿದೆ ಎಂದು ತಿಳಿದು ಬಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯ ಅದಕ್ಕಿಂತ ಹೆಚ್ಚು ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳಾಗಿ ಸೇರಿಸಲಾಗಿದೆ ಈ ವರದಿ ಬಂದದೇ ಅದರೆ ಜನರು, ರೈತಾಪಿ ಬದುಕಿನ ಮೇಲೆ ಅವಲಂಬನೆ ಮಾಡಿಕೊಂಡಿರುವ ರೈತ ಸಮುದಾಯದ ಬದುಕಿನ ಮೇಲೆ ಕಸ್ತೂರಿರಂಗನ ಗಾಯದ ಮೇಲೆ ಬರೆ ಎಳೆದಂತೆ ಆಗುವುದು ಖಚಿತವಾಗಿದೆ. ಆದ್ದರಿಂದ ವರದಿಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಣನೆಯ ಕೈ ಗೊಳ್ಳಬೇಕೆಂದು ಈ ಮೂಲಕ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಸಂಯುಕ್ತ ರೈತ ಸಂಘ ಸಾಗರ ತಾಲ್ಲೂಕು ಅವರು ಜಂಟಿಯಾಗಿ ಒತ್ತಾಯಿಸಿವೆ.
ಈ ಸಂದರ್ಭದಲ್ಲಿ ಎನ್. ಡಿ. ವಸಂತಕುಮಾರ್, ಸತೀಶ ಅಂಗಡಿ, ಜಿನೇಶಕುಮಾರ್, ದೇವು ಆಲಳ್ಳಿ, ರಮೇಶ ಐಗಿನಬೈಲು, ರವೀಂದ್ರ ಕಾನ್ಲೆ, ಶಿರವಾಳ ರಾಮಪ್ಪ, ಹೊಯ್ಸಳ, ಬೇಬಿ ಗೋಳಗೋಡು, ಸುರೇಶ ಬೆಳಂದೂರು, ಮಂಜು ಡಿ.ಎಂ., ಸುಂದರ ಸಿಂಗ್ ಇನ್ನಿತರರು ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204642701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment