ಬ್ಯಾಂಕ್ ಸದಾ ಠೇವಣಿದಾರರ ಹಾಗೂ ಸಾಲಗಾರರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ-ಗಣಪತಿ ಬ್ಯಾಂಕಿನ ಅಧ್ಯಕ್ಷೆ ಸರಸ್ವತಿ ನಾಗರಾಜ್
ಸಾಗರದ ಗಣಪತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ 111ನೇ ವಾರ್ಷಿಕ ಸರ್ವಸದಸ್ಯರ ಸಭೆ ಯಶಸ್ವಿ— ₹3.87 ಕೋಟಿ ದಾಖಲೆಯ ಲಾಭ*
ಬ್ಯಾಂಕ್ ಸದಾ ಠೇವಣಿದಾರರ ಹಾಗೂ ಸಾಲಗಾರರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ-ಅಧ್ಯಕ್ಷೆ ಸರಸ್ವತಿ ನಾಗರಾಜ್
ಬ್ಯಾಂಕು ಸಂಪೂರ್ಣ ಗಣಕೀಕೃತವಾಗಿದ್ದು, UPI ವ್ಯವಸ್ಥೆ ಜಾರಿಯಾಗಿದೆ-ಉಪಾಧ್ಯಕ್ಷ ಮೋಹನ ವೈ.
ಸಾಗರ : ಇಂದು ಭಾನುವಾರ ನಗರದ ಈಡಿಗರ ಸಮುದಾಯ ಭವನದಲ್ಲಿ ಸಾಗರದ ಶ್ರೀ ಗಣಪತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ 111ನೇ ವರ್ಷದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಸಭೆಯ ನಂತರದಲ್ಲಿ ಮಾತನಾಡಿದ ಬ್ಯಾಂಕ್‌ನ ಅಧ್ಯಕ್ಷೆ ಶ್ರೀಮತಿ ಸರಸ್ವತಿ ನಾಗರಾಜ್ ರವರು, "ಬ್ಯಾಂಕ್ ಸದಾ ಠೇವಣಿದಾರರು ಹಾಗೂ ಸಾಲಗಾರರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಸರ್ವ ಸದಸ್ಯರ ಮತ್ತು ಗ್ರಾಹಕರ ನಿರಂತರ ಸಹಕಾರದಿಂದ ಸಂಸ್ಥೆಯು ಅಭಿವೃದ್ಧಿಯತ್ತ ಸಾಗುತ್ತಿದೆ"ಎಂದು ತಿಳಿಸಿದರು.
ಬ್ಯಾಂಕ್‌ನ ಆರ್ಥಿಕ ಸಾಧನೆ ಮತ್ತು ಕಾರ್ಯವೈಖರಿ ಯ ಕುರಿತು ವಿವರಣೆ ನೀಡಿದ ಅಧ್ಯಕ್ಷರು, "ಈ ಬಾರಿ ಬ್ಯಾಂಕ್ ₹3 ಕೋಟಿ 87 ಲಕ್ಷಗಳಷ್ಟು ದಾಖಲೆ ಪ್ರಮಾಣದ ಲಾಭವನ್ನು ಗಳಿಸಿದೆ. ಇದು ಬ್ಯಾಂಕ್‌ನ ಇತಿಹಾಸದಲ್ಲೇ ಅಭೂತಪೂರ್ವ ಸಾಧನೆಯಾಗಿದೆ ಎಂದರು. ಬ್ಯಾಂಕ್ ತನ್ನ ಸದಸ್ಯರಿಗೆ ಅತ್ಯುತ್ತಮ ರೀತಿಯಲ್ಲಿ ಅಂದರೆ ಶೇಕಡಾ 11 ರಷ್ಟು ಲಾಭಾಂಶವನ್ನು (ಡಿವಿಡೆಂಡ್) ಘೋಷಿಸಿದೆ. ಅಲ್ಲದೆ, ಬ್ಯಾಂಕ್‌ನ ನಿಷ್ಕ್ರಿಯ ಆಸ್ತಿ (NPA) ಪ್ರಮಾಣವನ್ನು ಶೇ. 4 ಕ್ಕೆ ಇಳಿಸುವ ಮೂಲಕ ಆರ್ಥಿಕವಾಗಿ ಮತ್ತಷ್ಟು ಸದೃಢವಾಗಿ ಹೊರಹೊಮ್ಮಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
ಕೊನೆಯಲ್ಲಿ, ಬ್ಯಾಂಕ್ ಇಷ್ಟೊಂದು ಎತ್ತರಕ್ಕೆ ಬೆಳೆಯ ಲು ಆಡಳಿತ ಮಂಡಳಿಯ ಉತ್ತಮ ನಿರ್ಧಾರಗಳು, ಬ್ಯಾಂಕ್ ಸಿಬ್ಬಂದಿ ವರ್ಗದ ಪ್ರಾಮಾಣಿಕ ಸೇವೆ ಮತ್ತು ಪ್ರತಿಯೊಬ್ಬ ಸದಸ್ಯರು ನೀಡಿರುವ ಸಹಕಾರವೇ ಮುಖ್ಯ ಕಾರಣ ಎಂದು ಶ್ಲಾಘಿಸಿದ ಅವರು. ಮುಂದಿನ ದಿನಗಳಲ್ಲಿಯೂ ಪ್ರತಿಯೊಬ್ಬರ ಬೆಂಬಲದೊಂದಿಗೆ ಬ್ಯಾಂಕ್ ಅನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯು ವ ಭರವಸೆ ನೀಡಿ, ಸಭೆಗೆ ಆಗಮಿಸಿ ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮೋಹನ ವೈ., ನೂತನ ಸಿಎಓ ಸುಧಾ, ಆರ್, ಶ್ರೀನಿವಾಸ್ ಮೇಸ್ತ್ರಿ, ಕೃಷ್ಣಮೂರ್ತಿ ಭಂಡಾರಿ. V. ಗುರು. (ಡಿಶ್ ಗುರು), ಆರ್, ವಿಜಯಕುಮಾರ್. N. ನಾರಾಯಣ ಅರಮನೆಕೇರಿ, .V. ಶಂಕರ್. ರಮೇಶ್ ಚಂದ್ರಗುತ್ತಿ, ದಳವಾಯಿ ಬಸಲಿಂಗಪ್ಪ, ವಿನಾಯಕರಾವ್ ರಂಗಧೋಳ್, S.V. ಕೃಷ್ಣಮೂರ್ತಿ. ಹೆರಾಲ್ಡ್ ರೋಡ್ರಿಗಸ್,
ಶ್ರೀರಾಮ್, ತೇಜಸ್ವಿರಾಜ್. ಮೊದಲಾದವರು ಇದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment