ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅದ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ ಸ್ಥಳವನ್ನು ಬಿಜೆಪಿಯ ಅಂಗಸಂಸ್ಥೆಗಳು ಶುದ್ಧಿಕರಿಸಿದ್ದಕ್ಕೆ ಸಾಗರ ತಾಲ್ಲೂಕು ಬ್ಲಾಕ್ ಕಾಂಗ್ರೇಸ್ ಖಂಡನೆ
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅದ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ ಸ್ಥಳವನ್ನು ಬಿಜೆಪಿಯ ಅಂಗಸಂಸ್ಥೆಗಳು ಶುದ್ಧಿಕರಿಸಿದ್ದಕ್ಕೆ ಸಾಗರ ತಾಲ್ಲೂಕು ಬ್ಲಾಕ್ ಕಾಂಗ್ರೇಸ್ ಖಂಡನೆ
ಸಾಗರ ; ಉತ್ತರಾಖಂಡದ ಹಲ್ಮಾನಿಯ ರಾಮಲೀಲಾ ಮೈದಾನದಲ್ಲಿ ನಮ್ಮ ಪಕ್ಷದ ರಾಷ್ಟ್ರೀಯ ಅದ್ಯಕ್ಷರು ಹಾಗೂ ರಾಜ್ಯ ಸಭೆ ವಿರೋಧ ಪಕ್ಷದ ನಾಯಕರದ ಮಲ್ಲಿಕಾರ್ಜುನ ಖರ್ಗೆ ಅವರು ದಿನಾಂಕ:08/08/2026 ರಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಭಾಷಣ ಮಾಡಿದ ಸ್ಥಳವನ್ನು ಬಳಿಕ (ಆಗಸ್ಟ್ 10ರಂದು), ಅಪವಿತ್ರತೆ ಆಯಿತೆಂದು ಗಂಗಾ ಜಲ ಸಿಂಪಡಿಸಿ, ಹೋಮ-ಹವನದ ಮೂಲಕ "ಶುದ್ಧಿಕರಣ " ಮಾಡಿಲಾಯಿತು ಎನ್ನುವ ವರದಿ ಅತ್ಯಂತ ಆಘಾತಕಾರಿ ಮತ್ತು ಖಂಡನೀಯ, ಘಟನೆ ಆಗಿದೆ.
ಮಲ್ಲಿಕಾರ್ಜುನ ಖರ್ಗೆಯವರು ಅನುಭವಿಸಿದ ಅಪಮಾನ ಮಾತ್ರವಲ್ಲ. ಈ ಘಟನೆ ಇಡೀ ದೇಶದ ದಲಿತ ಸಮುದಯಕ್ಕೆ ಅಪಮಾನವಾಗಿದೆ. ಪ್ರಜಾಪ್ರಭುತ್ವದ ಮೌಲ್ಯ, ಸಂವಿಧಾನದ ಆದರ್ಶಗಳನ್ನು ಈ ಮೂಲಕ ತುಳಿಯಲಾಗಿದೆ. ಸಂವಿಧಾನದ ವಿರೋಧಿಗಳೇ ಜನ ದ್ರೋಹಿಗಳು ಮತ್ತು ದೇಶ ದ್ರೋಹಿಗಳು. ಆದ್ದರಿಂದ ಈ ಪ್ರಕರಣವನ್ನು ಸಂವಿಧಾನ ವಿರೋದಿ, ದೇಶದ್ರೋಹಿ ಪ್ರಕರಣವೆಂದು ಪರಿಗಣಿಸಿ, ಅಲ್ಲಿ ಭಾಗಿಯಾದವರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿ, ಜೈಲಿಗೆ ಅಟ್ಟ ಬೇಕೆಂದು ಈ ಮೂಲಕ ಸಾಗರ ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಒತ್ತಾಯಿಸಲಾಗಿದೆ.
ಸಾಗರ ತಾ. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಎಲ್. ಚಂದ್ರಪ್ಪ ಮತ್ತು ಬಿ.ಆರ್. ಜಯಂತ್'ರವರು ಮಾತನಾಡಿದರು.
ಅನ್ವರ್'ಭಾಷಾ ಮತ್ತು ಸದ್ದಾಂ ದೊಡ್ಮನೆ ಘೋಷಣೆಗಳನ್ನು ಕೂಗಿದರು.
ಮನವಿಯನ್ನು ಸಾಗರ ನಗರಸಭಾ ಮಾಜಿ ಸದಸ್ಯರಾದ ಎಲ್. ಚಂದ್ರಪ್ಪನವರು ಓದಿ ಸಾಗರದ ಉಪವಿಭಾಗಾಧಿಕಾರಿಗಳಿಗೆ ನೀಡಿದರು.
ಬಿ.ಆರ್. ಜಯಂತ್, ಕಲಸೆ ಚಂದ್ರಪ್ಪ, ಎಲ್.ಚಂದ್ರಪ್ಪ, ಗಣಪತಿ ಮಂಡಗಳಲೆ, ಐ.ಎನ್. ಸುರೇಶಬಾಬು, ಮಹಮ್ಮದ್ ಜಿಕ್ರಿಯಾ, ನಾಗರಾಜ ಗುಡ್ಡೇಮನೆ, ಸೈಯ್ಯದ್ ಜಾಕೀರ್, ಅನ್ವರ್ ಭಾಷಾ, ಆನಂದ ಭೀಮನೇರಿ, ಎಂ. ತಬರೇಜ್, ಗಿರೀಶಕೋವಿ, ರಾಮನಗರ ಚಂದ್ರು, ಸೋಮಶೇಖರ ಅರಮನೆಕೇರಿ, ರೇಖಾ, ಜ್ಯೋತಿ ಕೋವಿ, ಶ್ರೀಧರನಗರ ಕೃಷ್ಣಮೂರ್ತಿ, ಕೇಶವ, ಕಿರಣ್ ದೊಡ್ಮನೆ, ಗಲ್ಲಿ ವೆಂಕಟೇಶ, ಪ್ರಭಾಕರ ಕೋಣನಕಟ್ಟೆ, ಲಿಂಗರಾಜು, ಮಹಾಬಲಕೌತಿ, ಹೊಳೆಯಪ್ಪ, ವೆಂಕಟೇಶ ಕಲಾಲ್, ಶ್ರೀಧರ ಪಟೇಲ್ ಇನ್ನಿತರ ಹಲವಾರು ಕಾಂಗ್ರೇಸ್ ಕಾರ್ಯಕರ್ತರು ಸಾಗರ ಕಾಂಗ್ರೇಸ್ ಆಫೀಸಿನಿಂದ ಹಳೇ ಬಸ್ಟ್ಯಾಂಡ್ ಮಾರ್ಗವಾಗಿ ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿಗೆ ಮೆರವಣಿಗೆ ಮೂಲಕ ಬಂದು ಪ್ರತಿಭಟಿಸಿ 'ಶುದ್ದೀಕರಣ' ವಿಷಯವನ್ನು ಒಕ್ಕೊರಲಿನಿಂದ ಖಂಡಿಸಿದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ



Comments
Post a Comment