ತಾಯಿಗೊಂದು ಪತ್ರ ಶೀರ್ಷಿಕೆಯಡಿ ವಿಬಿಜಿ ರಾಮ್-ಜಿ ಕಾರ್ಯಕ್ರಮದ ಅರಿವು
ತಾಯಿಗೊಂದು ಪತ್ರ ಶೀರ್ಷಿಕೆಯಡಿ ವಿಬಿಜಿ ರಾಮ್-ಜಿ ಕಾರ್ಯಕ್ರಮದ ಅರಿವು
ಸಾಗರ ; ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ 35 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಕಸಿತ ಭಾರತ ಗ್ಯಾರಂಟಿ ಪಾರ್ ರೋಜಗಾರ್ ಎಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆ ಜಾರಿಗೆ ಕುರಿತಂತೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಚಾರ ಮಾಡುವ ಉದ್ದೇಶದಿಂದ ವಿಬಿನ್ನ ಪ್ರಯತ್ನ ಮಾಡುತ್ತಿದ್ದು ಅ ನಿಟ್ಟಿನಲ್ಲಿ ಇಂದು ಅಂದರೆ ದಿನಾಂಕ:20-08-2026 ರಿಂದ ಶಾಲೆಗಳಲ್ಲಿ ಮಕ್ಕಳಿಂದ ತಾಯಂದಿರಿಗೆ “ತಾಯಿಗೊಂದು ಪತ್ರ“ ಎಂಬ ಶಿರ್ಷಿಕೆಯಡಿ ಪತ್ರ ಬರೆದು ಯೋಜನೆ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ.
ಅ ಸಂಬಂದ ತಾಲ್ಲೂಕಿನ ಉಳ್ಳೂರು ಗ್ರಾ.ಪಂ ನಂದಿತಳೆ, ಹಿರೇಬಿಲಗುಂಜಿ, ಗ್ರಾ.ಪಂ, ನೀಚಡಿ ಮತ್ತು ಅಡ್ಡೆರಿ ಶಾಲೆ, ಪಡವಗೋಡು ಗ್ರಾ,ಪಂನ ಲಿಂಗದಹಳ್ಳಿ ಶಾಲೆ, ಗೌತಮಪುರ ಗ್ರಾ.ಪಂ ವ್ಯಾಪ್ತಿಯ ಕಣ್ಣೂರು ಶಾಲೆ, ಗೌತಮಪುರ ಶಾಲೆ, ಮಲ್ನಾಡು ಹೈಸ್ಕೂಲ್, ಹೀಗೇ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ವಿಕಸಿತ ಭಾರತ ಗ್ಯಾರಂಟಿ ಪಾರ್ ರೋಜಗಾರ್ ಎಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಗ್ರಾಮ ಪಂಚಾಯಿತಿ ಹಂತದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ. ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗ ಹಾಗೂ ಶಾಲಾ ಶಿಕ್ಷಕರು ಮತ್ತು ಮಕ್ಕಳು
ಹಾಗೂ ತಾಲ್ಲೂಕಿನಿಂದ ಸಹಾಯಕ ನಿರ್ದೇಶಕರು ಹಾಗೂ ವಿವಿಧ ವರ್ಗದ ವಿಬಿಜಿ ರಾಮ್ ಜಿ ಯೋಜನೆ ಅಧಿಕಾರಿಗಳು ಭಾಗವಹಿಸಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ






Comments
Post a Comment