ವಿದ್ಯಾರ್ಥಿಗಳು ಓದಿನ ಸಂದರ್ಭದಲ್ಲಿ ಭವಿಷ್ಯದ ಬದುಕಿಗೆ ಬೇಕಾದ ಕೌಶಲ್ಯ ರೂಢಿಸಿಕೊಳ್ಳಿ-ಡಾ. ಎಚ್.ಎಂ.ಶಿವಕುಮಾರ್
ವಿದ್ಯಾರ್ಥಿಗಳು ಓದಿನ ಸಂದರ್ಭದಲ್ಲಿ ಭವಿಷ್ಯದ ಬದುಕಿಗೆ ಬೇಕಾದ ಕೌಶಲ್ಯ ರೂಢಿಸಿಕೊಳ್ಳಿ-ಡಾ. ಎಚ್.ಎಂ.ಶಿವಕುಮಾರ್
ಸಾಗರ : ಶೈಕ್ಷಣಿಕ ಸಾಧನೆ ಜೊತೆಗೆ ಉತ್ತಮ ಸಮಾಜ ನಿರ್ಮಾಣ ಮಾಡುವ ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆಗಳು ರೂಪಿಸಬೇಕು. ಉತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳು ಓದಿನ ಸಂದರ್ಭದಲ್ಲಿ ಭವಿಷ್ಯದ ಬದುಕಿಗೆ ಬೇಕಾದ ಕೌಶಲ್ಯ ರೂಢಿಸಿಕೊಳ್ಳಿ ಎಂದು ಮಲೆನಾಡು ಅಭಿವೃದ್ದಿ ಪ್ರತಿಷ್ಟಾನದ ಪ್ರಧಾನ ಕಾರ್ಯದರ್ಶಿ ಡಾ. ಎಚ್.ಎಂ.ಶಿವಕುಮಾರ್ ತಿಳಿಸಿದರು.
ಇಲ್ಲಿನ ದೇವರಾಜ ಅರಸು ಕಲಾಭವನದಲ್ಲಿ ಶನಿವಾರ ಮಲೆನಾಡು ಅಭಿವೃದ್ದಿ ಪ್ರತಿಷ್ಟಾನದ ಎಂಡಿಎಫ್ ಸ್ವತಂತ್ರ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಕಲಿಕೆ ಮತ್ತು ಸಾಧನೆಗೆ ಅಡ್ಡಿಯಾಗುವ ಅನೇಕ ಅಂಶಗಳು ಘಟಿಸುತ್ತಿರುತ್ತದೆ. ಸಮಯದ ಸದುಪಯೋಗ ಪಡಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ಇರುತ್ತದೆ.
ವಿದ್ಯಾರ್ಥಿಗಳು ರೀಲ್ಸ್ ಹುಚ್ಚಿನಿಂದ ಹೊರಗೆ ಬಂದು ತಾವು ಕಲಿಯುತ್ತಿರುವ ವಿಷಯಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಸಮಯ ಪಾಲನೆ, ಶಿಸ್ತು, ದೈಹಿಕ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು. ಕಳೆದ ಆರು ದಶಕಗಳಿಂದ ಮಲೆನಾಡು ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕೆಲಸವನ್ನು ಮಲೆನಾಡು ಅಭಿವೃದ್ದಿ ಪ್ರತಿಷ್ಟಾನ ಮಾಡಿಕೊಂಡು ಬರುತ್ತಿದೆ. ಸದ್ಯದಲ್ಲಿಯೆ ಐದು ವರ್ಷಗಳ ಕಾನೂನು ಪದವಿ ನೀಡುವ ಕಾಲೇಜು ಪ್ರಾರಂಭಿಸುವ ಉದ್ದೇಶವಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಲೆನಾಡು ಅಭಿವೃದ್ದಿ ಪ್ರತಿಷ್ಟಾನದ ಅಧ್ಯಕ್ಷ ಬಿ.ಆರ್.ಜಯಂತ್, ಪೋಷಕರು ತಮ್ಮ ಮಕ್ಕಳ ಕಲಿಕೆಯ ಬಗ್ಗೆ ನಿಗಾವಹಿಸಬೇಕು. ವಿದ್ಯಾರ್ಥಿಗಳು ಕೇವಲ ಪರೀಕ್ಷಾ ದೃಷ್ಟಿಯಿಂದ ಕ ಲಲಿತುಕೊಳ್ಳುವುದಲ್ಲದೇ ಬದ್ದತೆಯಿಂದ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಕಾಲೇಜಿನ ಶೈಕ್ಷಣಿಕ ವಾತಾವರಣ ಕಾಪಾಡಿಕೊಳ್ಳುವ ಜೊತೆಗೆ ಉತ್ತಮ ಫಲಿತಾಂಶ ತರುವ ಮೂಲಕ ಪೋಷಕರಿಗೆ, ಸಂಸ್ಥೆಗೆ ಹೆಸರು ತನ್ನಿ ಎಂದು ಹೇಳಿದರು.
ಪ್ರಾಚಾರ್ಯ ಡಾ. ಜಗದೀಶ್ ಎಂ. ಭಂಡಾರಿ, ದ್ವಿತಾ, ಸುಪ್ತಿಯಾ, ಅರ್ಪಿತಾ, ಲಿಭಿನ್ ಇನ್ನಿತರರು ಮಾತನಾಡಿದರು. ನೇಹಾರಾವ್ ಪ್ರಾರ್ಥಿಸಿದರು. ಶ್ರೀಪಾದ ಜಿ.ಪಿ. ಸ್ವಾಗತಿಸಿದರು. ತ್ರಿಶಾವಂದಿಸಿದರು. ತಯಾಬಾ ಮತ್ತು ಸಾನ್ವಿ ನಾಯರ್ ನಿರೂಪಿಸಿದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ



Comments
Post a Comment