ಭೂದಾಹಿಗಳಿಂದ ಮಲಂದೂರು ಗ್ರಾಮದ ಭೂಮಿ ಅಕ್ರಮ ಕಬಳಿಗೆ ಹುನ್ನಾರ ; ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ ಹೋನಗೋಡು ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ
ಭೂದಾಹಿಗಳಿಂದ ಮಲಂದೂರು ಗ್ರಾಮದ ಭೂಮಿ ಅಕ್ರಮ ಕಬಳಿಗೆ ಹುನ್ನಾರ ; ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ ಹೋನಗೋಡು ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ
ಪಿಡಿಓ ವಾಣಿಶ್ರೀಗೆ ತಾಲೂಕು ಪಂಚಾಯಿತಿ ನಿಯೋಜನೆ ; ರದ್ದು ಮಾಡಲು ಆಗ್ರಹ
ಸಾಗರ ತಾಲ್ಲೂಕು ಡಿಎಸ್'ಎಸ್ ಸಂಚಾಲಕ ರೇವಪ್ಪ ಹೊಸಕೊಪ್ಪ ಅವರ ಸಂಘಟನೆಯೂ ಭಾಗಿ
ಶಿವಮೊಗ್ಗ ; ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕಚೇರಿ ಎದುರಿಗೆ ಆನಂದಪುರ ಗ್ರಾಮ ಪಂಚಾಯತಿಯ ಮಲಂದೂರು ಗ್ರಾಮದ ಸರ್ವೆ ನಂಬರ್ 148ರ ಗ್ರಾಮ ಠಾಣಾ ಜಾಗವನ್ನು ಕೆಲವು ಭೂದಾಹಿಗಳು ಕಬಳಿಸುತ್ತಿರುವವರ ವಿರುದ್ಧ ಕ್ರಮಗೊಳ್ಳುವಂತೆ ಹಾಗೂ ಗ್ರಾಮ ಪಂಚಾಯಿತಿ ಪಿಡಿಓ ವಾಣಿಶ್ರೀ ಅವರನ್ನು ತಾಲೂಕು ಪಂಚಾಯಿತಿಗೆ ನಿಯೋಜನೆ ಮಾಡಿರುವುದನ್ನು ರದ್ದು ಮಾಡುವಂತೆ ಇಂದು ಆನಂದಪುರದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ ಹೊನಗೋಡು ಇವರ ನಾಯಕತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನೆಯಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರವಿಕುಗ್ವೆ, ಡಿಎಸ್'ಎಸ್ ಸಂಘಟನೆಯ ಜಿಲ್ಲಾ ಸಂಚಾಲಕರಾದ ರಂಗಪ್ಪ ಹರಮಘಟ್ಟ, ಸಾಗರ ತಾಲೂಕು ಸಂಚಾಲಕರಾದ ರೇವಪ್ಪ ಹೊಸಕೊಪ್ಪ, ರಾಜ್ಯ ಸಂಘಟನಾ ಸಂಚಾಲಕರಾದ ಭರ್ಮಪ್ಪ ಅಂದಾಸುರ, ಜಗನ್ನಾಥ ಭೀಮನೇರಿ, ರವಿಕುಮಾರ್ ಬೆಳೆಯೂರು, ಪ್ರಶಾಂತ್ ಹೊನ್ನೇಸರ, ರವಿಕುಮಾರ್ ಬಿಳಿಸಿರಿ ಸಾಗರ ನಗರ ಸಂಚಾಲಕರಾದ ಮಹಮದ್ ಎಸ್. ಎನ್. ನಗರ, ಆನಂದ್ ಮೇಸ್ತ್ರಿ, ಮಾಸೂರು, ಚಂದ್ರಪ್ಪ ಸೊರಗುಂದ ಹಾಗೂ ಆನಂದಪುರದ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರು ಭಾಗವಹಿಸಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ



Comments
Post a Comment