ಕಸ್ತೂರಿ ರಂಗನ್ ಕರಡು ಅಧಿಸೂಚನೆ ವಿರುದ್ದ ಹೋರಾಟ : ಸಿಎಂ ಭೇಟಿ ಮಾಡಿ ಮನವಿಗೆ ನಿರ್ಧಾರ
ಕಸ್ತೂರಿ ರಂಗನ್ ಕರಡು ಅಧಿಸೂಚನೆ ವಿರುದ್ದ ಹೋರಾಟ : ಸಿಎಂ ಭೇಟಿ ಮಾಡಿ ಮನವಿಗೆ ನಿರ್ಧಾರ
ಚೇತನರಾಜ್ ಕಣ್ಣೂರು, ಬಿ.ಎ.ಇಂದೂಧರ ಬೇಸೂರು, ದಿನೇಶ್ ಬರದವಳ್ಳಿ, ವ.ಶಂ.ರಾಮಚಂದ್ರ ಭಟ್, ಅಮೃತೇಶ್ವರ, ರವಿಕುಮಾರ್ ಎಚ್.ಎಂ., ಸೋಮಶೇಖರ್ ಲ್ಯಾವಿಗೆರೆಯವರು ಸೇರಿದಂತೆ ಪಕ್ಷಾತೀತ ಬೆಂಬಲ
ಸಾಗರ : ಕಸ್ತೂರಿ ರಂಗನ್ 7ನೇ ಕರಡು ಅಧಿಸೂಚನೆ ವಿರುದ್ಧ ಬೃಹತ್ ಹೋರಾಟ ಹಾಗೂ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಲು ಒತ್ತಾಯಿಸಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಮಂಗಳವಾರ ನಡೆದ ಶಿವಮೊಗ್ಗ ಜಿಲ್ಲಾ ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆಯ ಸಮಾಲೋಚನಾ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಕಸ್ತೂರಿ ರಂಗನ್ ವರದಿ ಅನುಷ್ಠಾನ ಬೇಡ ಎಂದು ಹಿಂದಿನ ಎಲ್ಲ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸುತ್ತಾ ಬಂದಿದ್ದು, ಮತ್ತೆಮತ್ತೆ ಅದನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಸಲಾಗುತ್ತಿದೆ. ಈ ಬಾರಿ ಆಕ್ಷೇಪಣೆ ಸಲ್ಲಿಸಲು ಸೆ. 25 ಕೊನೆ ದಿನವಾಗಿದ್ದು ಇದರೆ ವಿರುದ್ಧ ಪಕ್ಷಾತೀತವಾಗಿ ಹೋರಾಟ ರೂಪಿಸಲಾಗುತ್ತಿದೆ. ಈಗಾಗಲೆ ಸಾಗರ ತಾಲ್ಲೂಕು ಮೂರು ಬಾರಿ, ಹೊಸನಗರ ತಾಲ್ಲೂಕು ಆರು ಬಾರಿ ಮುಳುಗಡೆಯಿಂದ ಹೈರಾಣಾಗಿ ಹೋಗಿದ್ದು, ಕಳೆದ 65 ವರ್ಷಗಳಿಂದ ಮುಳುಗಡೆ ಸಂತ್ರಸ್ತರಿಗೆ ನಾಗರೀಕ ಸೌಲಭ್ಯ ಕೊಟ್ಟಿಲ್ಲ. ಮತ್ತೆ ಕಸ್ತೂರಿ ರಂಗನ್ ವರದಿ ಹೇರುವ ಮೂಲಕ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುವ ಪ್ರಯತ್ನ ನಡೆಸಲಾಗುತ್ತಿದೆ. ಅಭಯಾರಣ್ಯ ಕಾಯ್ದೆಯಿಂದಲೇ ಮಲೆನಾಡು ಹಳ್ಳಿಗಾಡಿನ ಜನರು ಬದುಕಲು ಆಗುತ್ತಿಲ್ಲ. ಇನ್ನು ಕಸ್ತೂರಿ ರಂಗನ್ ವರದಿ ಜಾರಿಗೆ
ಸಿಎಂ ಭೇಟಿ ಮಾಡಿ ಮನವಿಗೆ ನಿರ್ಧಾರ ಮಾಡಲಾಯಿತು.
ಜಾರಿಗೆ ಬಂದರೆ ನೇರವಾಗಿ ನಮ್ಮನ್ನು ಒಕ್ಕಲೆಬ್ಬಿಸದೆ ಇದ್ದರೂ ಪ್ರತಿದಿನ ಕಠಿಣ ಕಾನೂನು ಹೇರಿ ನಾವೇ ಅಲ್ಲಿಂದ ಓಡಿ ಹೋಗುವಂತೆ ಮಾಡುವ ತಂತ್ರಗಾರಿಕೆ ಅಡಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಆರ್.ಜಯಂತ್ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಯಾದರೆ ಗ್ರಾಮ ಮತ್ತು ಅದರ ಹತ್ತು ಕಿ.ಮೀ. ಸುತ್ತಳತೆಯ ಪ್ರದೇಶ ಬಯಲು ಜೈಲಾಗಿ ಮಾರ್ಪಾಡು ಆಗುತ್ತದೆ. ಶಿವಮೊಗ್ಗ ಜಿಲ್ಲೆಯ 473 ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಲ್ಲಿ ಸೇರಿದೆ. ಇದರ ವಿರುದ್ಧ ಪಕ್ಷಾತೀತ ಹೋರಾಟ ಅತ್ಯಾಗತ್ಯ. ಆರ್.ಎಂ.ಮಂಜುನಾಥ ಗೌಡ ಅವರ ನೇತೃತ್ವದಲ್ಲಿ ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆ ಅಸ್ತಿತ್ವಕ್ಕೆ ತಂದಿದ್ದು ಇದರ ಮೂಲಕವೇ ಸಮಗ್ರ ಹೋರಾಟ ನಡೆಯಲಿದೆ. ಈಗಾಗಲೆ ಕೇರಳದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಟಾನ ವಿರೋಧಿಸಿ ನಡೆದ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ನಮ್ಮ ರಾಜ್ಯದಲ್ಲಿ ಸಹ ಅಂತಹದ್ದೇ ಹೋರಾಟ ರೂಪಿಸಬೇಕು. ಕಾಯ್ದೆ ಜಾರಿಗೆ ಬಂದರೆ ಕಾಡು ಪ್ರಾಣಿಗಳು ಹೋಗುತ್ತಿದ್ದರೆ ಕೈಮುಗಿದು ನಿಂತು ಕೊಳ್ಳಬೇಕಾಗುತ್ತದೆ. ಅದೃಷ್ಟ ಇದ್ದವರು ಮಾತ್ರ ಬದುಕುತ್ತಾರೆ. ವರದಿಯ ಗಂಭೀರತೆಯನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಆಕ್ಷೇಪಣೆ ಸಲ್ಲಿಸುವ ಜೊತೆಗೆ ವೇದಿಕೆ ನಡೆಸುವ ಹೋರಾಟಕ್ಕೆ ಎಲ್ಲರೂ ಸಹಕಾರ ನೀಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚೇತನರಾಜ್ ಕಣ್ಣೂರು, ಬಿ.ಎ.ಇಂದೂಧರ ಬೇಸೂರು, ದಿನೇಶ್ ಬರದವಳ್ಳಿ, ವ.ಶಂ.ರಾಮಚಂದ್ರ ಭಟ್, ಅಮೃತೇಶ್ವರ, ರವಿಕುಮಾರ್ ಎಚ್.ಎಂ., ಸೋಮಶೇಖರ್ ಲ್ಯಾವಿಗೆರೆ ಇನ್ನಿತರರು ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment