ಷೇರುದಾರರೇ ಸಹಕಾರಿ ಸಂಸ್ಥೆಗಳ ತಾಯಿಬೇರು-ಶಿವಾನಂದ ಭಂಡಾರ್ಕರ್
ಷೇರುದಾರರೇ ಸಹಕಾರಿ ಸಂಸ್ಥೆಗಳ ತಾಯಿಬೇರು-ಶಿವಾನಂದ ಭಂಡಾರ್ಕರ್
ಪರಸ್ಪರ ಕೈಜೋಡಿಸುವುದೇ ಸಹಕಾರ-K.H. ಸುಧೀಂದ್ರ
ಸಾಗರ : ಸಹಕಾರಿಸಂಘಟನೆಗಳು ಸದೃಢವಾಗಿ ಕೆಲಸ ಮಾಡಲು ಷೇರುದಾರರ ಸಹಕಾರವೇ ಮುಖ್ಯ. ಷೇರುದಾರರೇ ಸಹಕಾರಿ ಸಂಸ್ಥೆಗಳ ತಾಯಿಬೇರು ಎಂದು ಅಂಭ್ರೀಣಿ ವಿದ್ಯೇಶ ಸೌಹಾರ್ದ ಸಹಕಾರಿ ಸಂಸ್ಥೆ ಅಧ್ಯಕ್ಷ ಯು. ಶಿವಾನಂದ ಭಂಡಾರ್‌ಕರ್ ತಿಳಿಸಿದರು.
ಇಲ್ಲಿನ ಶೃಂಗೇರಿ ಶಂಕರಮಠದಲ್ಲಿ ಮಂಗಳವಾರ ಅಂಭ್ರಿಣಿ ವಿದ್ಯೇಶ ಸೌಹಾರ್ದ ಸಹಕಾರಿಯ 22ನೇ ವರ್ಷದ ಷೇರುದಾರರ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಂಭ್ರಿಣಿ ಸೌಹಾರ್ದ ಸಹಕಾರಿ ಅತಿಹೆಚ್ಚಿನ ಆರ್ಥಿಕ ವಹಿವಾಟು ನಡೆಸುವುದರ ಜೊತೆಗೆ ತನ್ನದೇ ಆದ ಸಾಮಾಜಿಕ ಚಟುವಟಿಕೆಗಳ ಮೂಲಕ ಜನಮಾನಸದಲ್ಲಿ ನೆಲೆಯೂರಿದೆ. ಕಳೆದ 22 ವರ್ಷಗಳಿಂದ ಒಂದೂ ಕಪ್ಪುಚುಕ್ಕೆ ಇಲ್ಲದಂತೆ ನಮ್ಮ ಆಡಳಿತ ಮಂಡಳಿ ಪಾರದರ್ಶಕವಾಗಿ ಆರ್ಥಿಕ ವಹಿವಾಟು ನಡೆಸಿಕೊಂಡು ಬರುತ್ತಿದೆ. ಆಡಳಿತ ಮಂಡಳಿ ಕ್ರಿಯಾಶೀಲವಾಗಿದ್ದರೆ ಸಂಸ್ಥೆ ಉನ್ನತ ಸ್ಥಾನಕ್ಕೆ ಬೆಳೆಯುತ್ತದೆ ಎನ್ನುವುದಕ್ಕೆ ನಮ್ಮ ಸಂಸ್ಥೆಯೆ ಸಾಕ್ಷಿಯಾಗಿದೆ. ಸಂಸ್ಥೆಯ ಬೆಳ್ಳಿಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ನಡೆಸಲು ಈಗಿನಿಂದಲೇ ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಈ ವರ್ಷ ಸಹ ಸಂಸ್ಥೆಯ ಷೇರುದಾರರಿಗೆ ಶೇ. 10 ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಹೇಳಿದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಚ್.ಸುಧೀಂದ್ರ ಮಾತನಾಡಿ, ಪರಸ್ಪರ ಕೈಜೋಡಿಸುವುದೇ ಸಹಕಾರ. ದೇಶದಲ್ಲಿ ಸಹಕಾರ ಚಳುವಳಿ ಅತ್ಯಂತ ಪ್ರಬುದ್ದವಾಗಿ ಬೆಳೆಯುತ್ತಿದೆ. ಸಹಕಾರಿ ಕ್ಷೇತ್ರದ ಅಭಿವೃದ್ದಿಗೆ ನಮ್ಮ ಕೊಡುಗೆ ಸಣ್ಣ ಪ್ರಮಾಣದಲ್ಲಿದೆ. ಸಂಸ್ಥೆಯು 25 ವರ್ಷ ಪೂರೈಸುವ ಹೊಸ್ತಿಲಿನಲ್ಲಿ ಇರುವುದರಿಂದ ಗಣಪತಿ ದೇವಸ್ಥಾನ ರಸ್ತೆಯಲ್ಲಿ ವಿಶಾಲವಾದ ಜಾಗ ಖರೀದಿಸಿ ಅಂಭ್ರಿಣಿ ರಜತ ಭವನ ನಿರ್ಮಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಕಾರ್ಯಪ್ರವೃತ್ತವಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಸಂಸ್ಥೆಯ ಏಳಿಗೆಗೆ ಸಹಕಾರ ನೀಡುತ್ತಿರುವ ಎಲ್ಲ ಷೇರುದಾರರನ್ನು ನಾವು ಗೌರವಪೂರ್ವಕವಾಗಿ ಸ್ಮರಿಸುತ್ತೇವೆ ಎಂದರು.
ಉಪಾಧ್ಯಕ್ಷ ರಾಘವೇಂದ್ರ ಜಿ.ಆರ್., ಲೆಕ್ಕಪರಿಶೋಧಕ ರಾಘವೇಂದ್ರ, ಟಿ.ವಿ. ಪಾಂಡುರಂಗ, ಶಿವಪ್ರಕಾಶ್, ಕಾರ್ತಿಕ್ ಎಸ್. ಭಂಡಾರ್‌ಕರ್, ಕರಿಬಸಪ್ಪ ಶಿವಳ್ಳಿ, ಪಿಯಾಂಕ ಎಸ್.ಪಿ., ರಶ್ಮಿ ಎಚ್.ಎಸ್., ಉಮಾ ಎಸ್.ಬಿ., ಜಿ.ಆರ್.ವಿಜಯಲಕ್ಷ್ಮಿ, ಸುಮಾ ಎಸ್.ಡಿ., ಕೃಷ್ಣಮೂರ್ತಿ ಕೆ.ಎಚ್. ಪ್ರಾರ್ಥಿಸಿದರು. ಡಾ. ಪದ್ಮಜಾ ಶೆಣೈ ಸ್ವಾಗತಿಸಿದರು. ವಿ.ಟಿ.ಸ್ವಾಮಿ ನಿರೂಪಿಸಿದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ



Comments
Post a Comment