ಕರವೇ ನಾರಾಯಣಗೌಡ ಬಣದಿಂದ 'ಟಾಕ್ಸಿಕ್' ಚಲನಚಿತ್ರದಲ್ಲಿನ ಅಶ್ಲೀಲ ದೃಶ್ಯಗಳನ್ನು ಕಟ್ ಮಾಡಿ ಪ್ರದರ್ಶಿಸಲು ಅಥವಾ ಪ್ರದರ್ಶನ ತಡೆಯಲು ಮನವಿ ಸಾಗರದ ಶ್ರೀಚಿತ್ರಮಂದಿರದ ವ್ಯವಸ್ಥಾಪಕರಿಂದ ಮನವಿ ಸ್ವೀಕಾರ-ಚಿತ್ರ ನಿರ್ಮಾಪಕರಿಗೆ ರವಾನಿಸುವುದಾಗಿ ಮನವಿ
ಕರವೇ ನಾರಾಯಣಗೌಡ ಬಣದಿಂದ 'ಟಾಕ್ಸಿಕ್' ಚಲನಚಿತ್ರದಲ್ಲಿನ ಅಶ್ಲೀಲ ದೃಶ್ಯಗಳನ್ನು ಕಟ್ ಮಾಡಿ ಪ್ರದರ್ಶಿಸಲು ಅಥವಾ ಪ್ರದರ್ಶನ ತಡೆಯಲು ಮನವಿ
ಸಾಗರದ ಶ್ರೀಚಿತ್ರಮಂದಿರದ ವ್ಯವಸ್ಥಾಪಕರಿಂದ ಮನವಿ ಸ್ವೀಕಾರ-ಚಿತ್ರ ನಿರ್ಮಾಪಕರಿಗೆ ರವಾನಿಸುವುದಾಗಿ ಮನವಿ
ಸಾಗರ ; ನಮ್ಮ ಸಾಗರ ನಗರವು ಸಾಂಸ್ಕೃತಿಕ ಹಾಗೂ ಗೌರವಾನ್ವಿತ ಜನಜೀವನಕ್ಕೆ ಹೆಸರಾಗಿದೆ. ಪ್ರಸ್ತುತ ನಿಮ್ಮ 'ಶ್ರೀ ಟಾಕೀಸ್' ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ 'ಟಾಕ್ಸಿಕ್' ಚಲನಚಿತ್ರದಲ್ಲಿ ಕೆಲವು ಅತಿಯಾದ ಅಶ್ಲೀಲ ಹಾಗೂ ಕೌಟುಂಬಿಕ ಮೌಲ್ಯಗಳಿಗೆ ಧಕ್ಕೆ, ತರುವಂತಹ ದೃಶ್ಯಗಳಿವೆ ಎಂಬುದು ಸಾರ್ವಜನಿಕರ ಗಮನಕ್ಕೆ ಬಂದಿದೆ.
ಕುಟುಂಬ ಸಮೇತ, ವಿಶೇಷವಾಗಿ ತಂದೆ-ಮಕ್ಕಳು ಅಥವಾ ಮಹಿಳೆಯರೊಂದಿಗೆ ಚಿತ್ರಮಂದಿರಕ್ಕೆ, ಬರುವ ಪ್ರೇಕ್ಷಕರಿಗೆ ಈ ದೃಶ್ಯಗಳಿಂದ ತೀವ್ರ ಮುಜುಗರ ಮತ್ತು ಮುಜುಗರದ ಸನ್ನಿವೇಶ ಉಂಟಾಗುತ್ತಿದೆ. ಸಾರ್ವಜನಿಕರ ಗೌರವ ಹಾಗೂ ಕೌಟುಂಬಿಕ ವಾತಾವರಣವನ್ನು ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ, ಚಿತ್ರದಲ್ಲಿರುವ ಅಶ್ಲೀಲ ದೃಶ್ಯಗಳನ್ನು ಕೂಡಲೇ ತೆಗೆದುಹಾಕಿ (ಕಟ್ ಮಾಡಿ) ಪ್ರದರ್ಶಿಸಬೇಕಾಗಿ ಮನವಿಯಲ್ಲಿ ವಿನಂತಿಸಲಾಗಿದೆ.
ಒಂದು ವೇಳೆ ಈ ದೃಶ್ಯಗಳನ್ನು ತೆರವುಗೊಳಿಸದೆ ಹಾಗೆಯೇ ಪ್ರದರ್ಶನ ಮುಂದುವರಿಸಿದ್ದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಚಿತ್ರಮಂದಿರದ ಮುಂದೆ ಪ್ರತಿಭಟನೆ ನಡೆಸಿ, ಪ್ರದರ್ಶನವನ್ನು ತಡೆಯಬೇಕಾಗುತ್ತದೆ ಎಂದು ಈ ಮೂಲಕ ತಿಳಿಸಲಾಗಿದೆ.
ಆದ್ದರಿಂದ, ತಾವು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥೈಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲು ಕರವೇ ವಿನಂತಿಸಿದೆ.
ಈ ಸಂದರ್ಭದಲ್ಲಿ ಕರವೇ ಸಾ.ತಾ. ಅಧ್ಯಕ್ಷ ಮನೋಜ್'ಕುಗ್ವೆ, ನಾಗರಾಜ್ ಮೂರನೇಕಣ್ಣು, ನಾಗಭೂಷಣ, ಹರೀಶ ದೊಡ್ಡೇರಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷರು ಶ್ಯಾಮಲಾ, ಸದಸ್ಯರಾದ ಹರಿಶ್ ದೊಡ್ಡೇರಿ, ನಾಗಭೂಷಣ, ಶರತ್ ನೆರಲಿಗೆ, ಜಯಂತ್ ಹಕ್ರೆ, ಹರೀಶ್ ಎಲ್.ಬಿ.ನಗರ, ಮಂಜುನಾಥ, ಷಣ್ಮುಖ, ಶಿವು, ಮನುದ್ರೋಣ, ಪ್ರಭು, ಪ್ರಭು ಕನಾವಳಿ, ಅಮೀತ್, ಮಧು, ಪುನೀತ್ ಕಾಗೋಡು ಮತ್ತಿತರರು ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment