ಸುಳ್ಳು ಶಾಸಕ ಸುಳ್ಳು ಶಾಸಕ ಬೇಳೂರು ಮನೆ ದೇವರು. ಮಂತ್ರಿ ಆಗಲೂ ನಗರಸಭೆ ಬಾವಿ ಮುಚ್ಚಿಸಿರುವ ಶಾಸಕ ಬೇಳೂರು ಸತ್ಯಕ್ಕಿಂತ ಸುಳ್ಳು ಹೇಳುವುದೇ ಜಾಸ್ತಿ-ಹಾಲಪ್ಪ ಹರತಾಳು ಮನೆ ದೇವರು. ಮಂತ್ರಿ ಆಗಲೂ ನಗರಸಭೆ ಬಾವಿ ಮುಚ್ಚಿಸಿರುವ ಶಾಸಕ ಬೇಳೂರು ಸತ್ಯಕ್ಕಿಂತ ಸುಳ್ಳು ಹೇಳುವುದೇ ಜಾಸ್ತಿ-ಹಾಲಪ್ಪ ಹರತಾಳು

ಸುಳ್ಳು ಶಾಸಕ ಬೇಳೂರು ಮನೆ ದೇವರು. ಮಂತ್ರಿ ಆಗಲೂ ನಗರಸಭೆ  ಬಾವಿ ಮುಚ್ಚಿಸಿರುವ ಶಾಸಕ ಬೇಳೂರು ಸತ್ಯಕ್ಕಿಂತ ಸುಳ್ಳು ಹೇಳುವುದೇ ಜಾಸ್ತಿ-ಹಾಲಪ್ಪ ಹರತಾಳು


ಸಾಗರ : ಸುಳ್ಳು ಶಾಸಕ ಬೇಳೂರು ಮನೆ ದೇವರು. ಮಂತ್ರಿ ಆಗಲೂ ನಗರಸಭೆ ಬಾವಿ ಮುಚ್ಚಿಸಿರುವ ಶಾಸಕ ಬೇಳೂರು ಸತ್ಯಕ್ಕಿಂತ ಸುಳ್ಳು ಹೇಳುವುದೇ ಜಾಸ್ತಿ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ತಿಳಿಸಿದ್ದಾರೆ.

ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಗುರುವಾರ ಬಿಜೆಪಿ ವತಿಯಿಂದ ಅವೈಜ್ಞಾನಿಕ ಗ್ರಾಮ ಪಂಚಾಯ್ತಿ ಮೀಸಲಾತಿ, ಬೆಳೆವಿಮೆ ಹಾಗೂ ಮಳೆಮಾಪನಾ ಯಂತ್ರ ರಿಪೇರಿಗೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ಉದ್ದೇಶಿಸ ಅವರು ಮಾತನಾಡುತ್ತಾ, ಎರಡು ವರ್ಷದ ಹಿಂದೆ ಆಸ್ಪತ್ರೆ ಅಭಿವೃದ್ದಿಗೆ 70 ಕೋಟಿ ರೂ. ಮಂಜೂರು ಆಗಿದೆ ಎಂದು ಶಾಸಕರು ಹೇಳಿದ್ದರು. ಆ ಹಣ ಎಲ್ಲಿದೆ ಎಂದು ಸಾರ್ವಜನಿಕರಿಗೆ ತಿಳಿಸಿ ಎಂದು ಸವಾಲು ಹಾಕಿದರು.

ತಾಲ್ಲೂಕಿನಲ್ಲಿ ಆಡಳಿತ ಅವ್ಯವಸ್ಥೆಯತ್ತ ಜಾರಿದೆ. ತಾಲ್ಲೂಕಿನ 37 ಮಳೆಮಾಪನಾ ಕೇಂದ್ರವಿದ್ದು 13 ಕೇಂದ್ರ ಹಾಳಾಗಿದೆ. ಈತನಕ ಅದರ ರಿಪೇರಿಯಾಗಿಲ್ಲ. ಇದರಿಂದ ರೈತರಿಗೆ ಬೆಳೆಹಾನಿಯಾದರೂ ಪರಿಹಾರ ಸಿಗುತ್ತಿಲ್ಲ. ಕಳೆದ ವರ್ಷ ಮಳೆ ಹೆಚ್ಚಾಗಿ ಬೆಳೆ ಹಾಳಾಗಿದೆ. ಈ ವರ್ಷ ಮೊದಲು ಮಳೆ ಇರಲಿಲ್ಲ, ಈಗ ಹೆಚ್ಚು ಮಳೆಯಾಗಿದ್ದು, ಇದನ್ನು ಅಳತೆ ಮಾಡಬೇಕಾದ ಮಳೆಮಾಪನಾವೇ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತೆ ಅವರೇ ಆಗಿದ್ದಾರೆ. ಅವರಿಗೂ ಇದರ ಅರಿವಿಲ್ಲ. ಒಬ್ಬ ನಾನು ಬಂಗಾರಪ್ಪ ಮಗ ಎಂದರೇ, ಇನ್ನೊಬ್ಬ ಬಂಗಾರಪ್ಪ ಶಿಷ್ಯ ಎನ್ನುತ್ತಾರೆ. ಇಬ್ಬರೂ ಅಭಿವೃದ್ದಿ ಮೂಲಕ ಬಂಗಾರಪ್ಪ ಹೆಸರು ಉಳಿಸಬೇಕಲ್ಲ ಎಂದ ಅವರು, ಬಂಗಾರಪ್ಪ ತಮ್ಮ ಗುರು ಎನ್ನುವವರು ಅವರವಮಗನಿಗೆ ಸಚಿವ ಸ್ಥಾನ ಕೊಟ್ಟರೇ ಅವನೇ ಆಗಬೇಕಾ ಎಂದು ಪ್ರಶ್ನಿಸುವ ಬೇಳೂರಿಗೆ ನಮ್ಮ ನಾಯಕರ ಮಕ್ಕಳು ಮಂತ್ರಿಯಾಗಿದ್ದಕ್ಕೆ ಸಂತೋಷಪಡುವ ಸ್ವಭಾವ ಇಲ್ಲವೇ ಎಂದು ಪ್ರಶ್ನಿಸಿದರು.

ಗ್ರಾಮ ಪಂಚಾಯ್ತಿ ಮೀಸಲಾತಿ ಕಾಂಗ್ರೇಸ್ ಪಕ್ಷದ ಕೆಲವರ ಅಣತಿಯಂತೆ ಸಿದ್ದವಾಗಿದೆ. ಅರ್ಹರು ಚುನಾವಣೆಗೆ ಸ್ಪರ್ಧಿಸದ ಸ್ಥಿತಿ ನಿರ್ಮಾಣವಾಗಿದೆ. ಬೆಳೆವಿಮೆ ಪರಿಹಾರ ಅತಿ ಕಡಿಮೆ ಇದ್ದು, ಒಂದು ಅಡಿಕೆ ಸಸಿ ಖರೀದಿ ಮಾಡಲು 70 ರೂ. ಇದ್ದು, ಗಾಳಿಮಳೆಯಿಂದ ಅಡಿಕೆ ಮರ ಮುರಿದು ಬಿದ್ದರೆ 16 ರೂ. ಪರಿಹಾರ ನೀಡುತ್ತಿದ್ದಾರೆ. ಇದರ ಬಗ್ಗೆ ಶಾಸಕರು ವಿಧಾನಸೌಧದಲ್ಲಿ ಮಾತನಾಡಬೇಕಲ್ಲ. ಸಚಿವಗಿರಿ ಪಡೆಯಲು 20 ಕೋಟಿ ರೂ. ಕೊಟ್ಟಿದ್ದಾರೆ ಎನ್ನುವ ಊಹಾಪೋಹ ಇದ್ದು, ಬಿ.ಕೆ.ಹರಿಪ್ರಸಾದ್ ಸಾಗರಕ್ಕೆ ಬಂದಾಗ ಸಾಗರದಲ್ಲಿ ಇದ್ದರೂ ಕನಿಷ್ಟ ಅವರನ್ನು ಭೇಟಿ ಮಾಡಿರಲಿಲ್ಲ. ಇವರಿಗೆ ಯಾವ ಹಿನ್ನೆಲೆ ಇರಿಸಿಕೊಂಡು ಸಚಿವ ಸ್ಥಾನ ನೀಡುತ್ತಾರೆ. ಇನ್ನಾದರೂ ಸಚಿವಗಿರಿಗಾಗಿ ಓಡಾಟ ಬಿಟ್ಟು ಕ್ಷೇತ್ರದ ಅಭಿವೃದ್ದಿ ಬಗ್ಗೆ ಗಮನ ಹರಿಸಲಿ. ಬೆಳೆವಿಮೆ ಸಮರ್ಪಕ ವಿತರಣೆ ಮಾಡುವ ಜೊತೆಗೆ ಮಳೆಮಾಪಕ ಯಂತ್ರ ತಕ್ಷಣ ರಿಪೇರಿ ಮಾಡಬೇಕು. ಗ್ರಾಮ ಪಂಚಾಯ್ತಿ ಮೀಸಲಾತಿ ಸರಿಪಡಿಸದೆ ಹೋದಲ್ಲಿ ಪ್ರತಿಭಟನೆ ಜೊತೆಗೆ ಕಾನೂನು ಹೋರಾಟಕ್ಕೂ ಚಿಂತನೆ ನಡೆಸಲಾಗಿದೆ ಎಂದರು.


ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಕಳೆದ ವರ್ಷ ನೆರೆ ಬಂದಾಗ ಶಾಸಕರು ವಿದೇಶ ಪ್ರವಾಸದಲ್ಲಿದ್ದರು. ಈ ವರ್ಷ ನೆರೆ ಬಂದಾಗ ಸಚಿವ ಸ್ಥಾನಕ್ಕೆ ಲಾಬಿ ಮಾಡಲು ಮೂರು ತಿಂಗಳಿನಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ.

ತಾವು ಗೆದ್ದು ಬಂದ ಕ್ಷೇತ್ರದ ಜನರ ಹಿತಕಾಯುವ ಕೆಲಸ ಶಾಸಕರು ಮಾಡದೆ ಇರುವುದು ದುರದೃಷ್ಟಕರ. ಗ್ರಾಮ ಪಂಚಾಯ್ತಿ ಮೀಸಲಾತಿ ವ್ಯತ್ಯಯ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಕಾಂಗ್ರೇಸ್‌ನ ಕೆಲವರು ಹಣ ಕೊಟ್ಟು ಮೀಸಲಾತಿ ತಮಗೆ ಬೇಕಾದಂತೆ ಹಾಕಿಸಿದ್ದಾರೆ ಎನ್ನುವ ದೂರುಗಳಿವೆ. ಮೀಸಲಾತಿ ಸರಿಪಡಿಸುವವರೆಗೂ ಬಿಜೆಪಿ ಹೋರಾಟ ಕೈಗೆತ್ತಿಕೊಳ್ಳುತ್ತಿದೆ. ಬೆಳೆವಿಮೆ ಸಮರ್ಪಕ ವಿತರಣೆ ಸೇರಿದಂತೆ ಮಳೆಮಾಪನ ಯಂತ್ರ ರಿಪೇರಿ, ಗ್ರಾಮ ಪಂಚಾಯ್ತಿ ಮೀಸಲಾತಿವಅವೈಜ್ಞಾನಿಕ ಹಂಚಿಕೆ ಕುರಿತು ಶಾಸಕರು ಸದನದಲ್ಲಿ ಮಾತನಾಡಲಿ ಎಂದು ಹೇಳಿದರು.

ಕೇಂದ್ರ ಸಾಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ, ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ರತ್ನಾಕರಹೊನಗೋಡು, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಧುರಾ ಶಿವಾನಂದ್, ದಿಶಾ ಸಮಿತಿ ಸದಸ್ಯೆ ಸುವರ್ಣ ಟೀಕಪ್ಪ ಮಾತನಾಡಿದರು.

ಈ ಸಂದರ್ಭದಲ್ಲಿ ದೇವೇಂದ್ರಪ್ಪ ಯಲಕುಂದ್ಲಿ, ಗಣೇಶ್ ಪ್ರಸಾದ್, ಗಾಯತ್ರಿ ಮಲ್ಲೇಶಪ್ಪ, ರೂಪ, ಮೈತ್ರಿ ಪಾಟೀಲ್, ಸವಿತಾ ವಾಸು,ಶ್ರೀನಿವಾಸ್ ಮೇಸ್ತಿç, ಹರೀಶ್ ಮೂಡಳ್ಳಿ, ಅರುಣ ಕುಗ್ವೆ, ಬಿ.ಟಿ.ರವೀಂದ್ರ, ಪರಶುರಾಮ್, ಸತೀಶ್ ಕೆ., ಪ್ರಶಾಂತ್ ಕೆ.ಎಸ್., ರಾಯಲ್ ಸಂತೋಷ್, ಕೃಷ್ಣ ಶೇಟ್ ಇನ್ನಿತರರು ಇದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ