ಶಿಕ್ಷಕರ ಋಣ ತೀರಿಸುವ ಸೇವಕನಾಗಿ ಕೆಲಸ ಮಾಡುವೆ: ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶಪ್ಪ ಈ.
ಶಿಕ್ಷಕರ ಋಣ ತೀರಿಸುವ ಸೇವಕನಾಗಿ ಕೆಲಸ ಮಾಡುವೆ: ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶಪ್ಪ ಈ.
ಸಾಗರ : ನಾನು ವಿಜೇತ ನಾಯಕನಾಗಿ ಇಲ್ಲಿ ಬಂದು ನಿಂತಿಲ್ಲ, ಬದಲಿಗೆ ಶಿಕ್ಷಕರ ಋಣಭಾರ ತೀರಿಸುವ ವಿನಮ್ರ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಾಗರ ಶಾಖೆಯ ನೂತನ ಅಧ್ಯಕ್ಷ ಮಾಲತೇಶಪ್ಪ ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಬ್ರಾಸಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ನಿವೃತ್ತ/ಸಾಧಕ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.
ಹೋಬಳಿ ಮಟ್ಟಕ್ಕೂ ಮಾದರಿ ಸೇವಾ ಕೇಂದ್ರ ವಿಸ್ತರಣೆ
ಶಿಕ್ಷಕರು ವೇತನ ಬಟವಾಡೆ, ಫಾರಂ-16, ಆದಾಯ ತೆರಿಗೆ ಸಲ್ಲಿಕೆ ಹಾಗೂ ಟೈಮ್ ಬಾಂಡ್‌ನಂತಹ ಇಲಾಖಾ ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಆಗಸ್ಟ್ 5 ರಿಂದಲೇ 'ಶ್ರೀ ಸದ್ಗುರು ಕಾರ್ನರ್' ಸ್ಥಾಪಿಸಿ ಉಚಿತ ಸೇವೆ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಲ್ಲೂ ಇಂತಹ ಡೆಸ್ಕ್‌ಟಾಪ್ ಸೇವಾ ಕೇಂದ್ರಗಳನ್ನು ಆರಂಭಿಸಿ ಶಿಕ್ಷಕರಿಗೆ ನೆರವಾಗುವುದಾಗಿ ಅವರು ಘೋಷಿಸಿದರು.
₹2 ಕೋಟಿ ವೆಚ್ಚದಲ್ಲಿ ಗುರುಭವನ ಉನ್ನತೀಕರಣ
ಸಾಗರದ ಹೃದಯಭಾಗದಲ್ಲಿರುವ ಗುರುಭವನದ ಮೇಲಿನ ಮಹಡಿ ನಿರ್ಮಾಣಕ್ಕೆ ಮಹತ್ವದ ಯೋಜನೆ ರೂಪಿಸಲಾಗಿದೆ. ಶಾಸಕರ ಅನುದಾನದಿಂದ ₹50 ಲಕ್ಷ, ದಾನಿಗಳಿಂದ ₹50 ಲಕ್ಷ ಹಾಗೂ ಶಿಕ್ಷಕರ ಕಲ್ಯಾಣ ನಿಧಿಯಿಂದ (DWF) ಮ್ಯಾಚಿಂಗ್ ಅನುದಾನ ಸೇರಿಸಿ ಒಟ್ಟು ₹2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸಭಾಂಗಣ ನಿರ್ಮಿಸಿ, ಶಿಕ್ಷಕರ ಮಕ್ಕಳ ಮದುವೆ ಹಾಗೂ ಸಮಾರಂಭಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಬೋಧಕೇತರ ಕೆಲಸಗಳ ಹೊರೆ ಇಳಿಕೆಗೆ ಒತ್ತಾಯ
ಶಿಕ್ಷಕರು ಕೇವಲ ಬೋಧನೆಗೆ ಸೀಮಿತವಾಗದೆ ಎಸ್‌ಐಆರ್, ಬಿಎಲ್‌ಒ ಸೇರಿದಂತೆ ಗುಮಾಸ್ತಗಿರಿ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವುದು ಶಾಲೆಗಳ ಗುಣಮಟ್ಟ ಹಾಗೂ ಮಕ್ಕಳ ಹಾಜರಾತಿ ಮೇಲೆ ಪರಿಣಾಮ ಬೀರುತ್ತಿದೆ. ಈ ಬೋಧಕೇತರ ಹೊರೆ ಇಳಿಕೆಗೆ ಸಂಘದಿಂದ ಸರ್ಕಾರದ ಮಟ್ಟದಲ್ಲಿ ನಿರಂತರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಮಕ್ಕಳ ಮೊಟ್ಟೆ ದರ ಹೆಚ್ಚಳಕ್ಕೆ ಬೇಡಿಕೆ
ಮಾರುಕಟ್ಟೆಯಲ್ಲಿ ಮೊಟ್ಟೆ ದರ ₹7 ರಿಂದ ₹8 ಇದ್ದರೂ ಸರ್ಕಾರದಿಂದ ಕೇವಲ ₹5.20 ಬಿಡುಗಡೆಯಾಗುತ್ತಿದ್ದು, ಮುಖ್ಯಶಿಕ್ಷಕರೇ ಕೈಯಿಂದ ಹಣ ಭರಿಸಬೇಕಾದ ಅನಿವಾರ್ಯತೆ ಇದೆ. ಈ ದರವನ್ನು ತಕ್ಷಣ ಹೆಚ್ಚಿಸುವಂತೆ ರಾಜ್ಯ ಸಂಘದ ಮೂಲಕ ಸರ್ಕಾರಕ್ಕೆ ಪ್ರಬಲ ಬೇಡಿಕೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಕ್ಷೇತ್ರ ಪ್ರಭಾರಿ ಶಿಕ್ಷಣಾಧಿಕಾರಿಗಳಾದ ಓಂಕಾರಪ್ಪ ಮಾತನಾಡಿ, ಶಿಕ್ಷಕರು ಪಾಠ ಮಾಡುವುದು ಮತ್ತು ಆಟೋಟಗಳನ್ನು ಆಡಿಸುವುದು ದೊಡ್ಡ ವಿಚಾರ ಎಂದು ಭಾವಿಸಿದಂತಿದೆ. ಆದರೆ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ಹೆಚ್ಚಿಸಿದಾಗ ಮಾತ್ರ ನಮ್ಮ ಬೋಧನೆ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮುನ್ನಡೆಯಬೇಕಿದೆ ಇಲ್ಲದಿದ್ದಲ್ಲಿ ನಮ್ಮ ಪಾಠಗಳು ಪುಸ್ತಕದಲ್ಲಿದ್ದ ವಿಚಾರ ತಿಳಿಸಿದರೆ ಅವುಗಳು ಪರೀಕ್ಷೆಗಳನ್ನು ಎದುರಿಸಲು ನೀಡಿದ ಶಕ್ತಿಯಾಗುತ್ತದೆ ಬಿಟ್ಟರೆ ಜೀವನದ ಮೌಲ್ಯಗಳನ್ನು ತಿಳಿಸುವ ಬೋಧನೆ ಆಗಲಾರದು ಎಂದು ಹೇಳಿದರು.
ಬಿಸಿಯೂಟ ಯೋಜನೆಯ ಸಂಪನ್ಮೂಲ ಮತ್ತು ಮುಖ್ಯ ಅಧಿಕಾರಿ ಭೂಮೇಶ್ ಮಾತನಾಡಿ, ಸಂಗವು ಒಗ್ಗಟ್ಟಾಗಿರಬೇಕು ಅದು ಮುತ್ತಿನಂತೆ ಅಂದರೆ ಮಾತು ಆಡಿದರೆ ಆಯಿತು ಮುತ್ತು ಒಡೆದರೆ ಹೋಯಿತು ಆ ರೀತಿ ಸಂಘ ಆಗಬಾರದು ಇಂದು ನಮಗೂ ಸಹ ಒತ್ತಡಗಳಿವೆ. ಆ ಒತ್ತಡದ ನಡುವೆ ನಮಗೆ ಸಿಕ್ಕಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರು ಉತ್ತಮವಾದ ಕೆಲಸವನ್ನು ಮಾಡಿ ತೋರಿಸುವವರು ಇವರಿಗೆ ನಾವುಗಳು ಸಾಥ್ ನೀಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಗರ ನಗರಸಭೆಯ ಮಾಜಿ ನಗರಸಭಾ ಸದಸ್ಯರು ಆದ ಪ್ರಾನ್ಸಿಸ್ ಗೊಮ್ಸ್ ಮತ್ತು ಸಂಗಡಿಗರು ಅಧ್ಯಕ್ಷ ಮಾಲತೇಶ್ ಅವರನ್ನ ಗೌರವಿಸದರು
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಎನ್‌ಎಂಎಂಎಸ್ ಪರೀಕ್ಷೆಗಳಲ್ಲಿ ಸಾಗರ ತಾಲೂಕು ರಾಜ್ಯದಲ್ಲೇ ಮುಂಚೂಣಿ ಸ್ಥಾನ ಪಡೆಯಲು ಕಾರಣರಾದ ಪ್ರಾಥಮಿಕ ಶಿಕ್ಷಕರ ಶ್ರಮವನ್ನು ಶ್ಲಾಘಿಸಲಾಯಿತು. ನಿವೃತ್ತ ಶಿಕ್ಷಕರಿಗೆ ಹಾಗೂ ರಾಜ್ಯ-ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತ ಸಾಧಕ ಶಿಕ್ಷಕರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು.
ಗಣ್ಯರ ಉಪಸ್ಥಿತಿ
ಈ ವೇಳೆ ಸಾಗರ ತಾಲ್ಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ರಾಜಶೇಖರ್ ಶೆಟ್ಟಿ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಪದಾಧಿಕಾರಿ ಭೋಕೇಶ್ವರಪ್ಪ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಓಂಕಾರಪ್ಪ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಭೂಮೇಶ್, ಸಾಗರ ಕ್ಷೇತ್ರ ಸಮನ್ವಯಾಧಿಕಾರಿ ಡಾ.ಅನ್ನಪೂರ್ಣ, ದೈಹಿಕ ಶಿಕ್ಷಣ ಪರಿವೀಕ್ಷಕರಾದಂತ ರಮೇಶ್, ಸಾಗರ ತಾಲ್ಲೂಕು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದಂತ ರಮೇಶ್.ಜೆ, ಚಂದ್ರಕಲಾ, ಲಕ್ಷ್ಮಣ, ಗೌರವಾಧ್ಯಕ್ಷ ರಾಮಚಂದ್ರಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದಂತ ಲಕ್ಷಣ್ ಆರ್ ನಾಯಕ್, ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷರಾದಂತ ವಿಕ್ಟರ್, ಸಾವಿತ್ರಿ ಬಾಯಿಪುಲೆ ಸಂಘದ ಅಧ್ಯಕ್ಷೆ ವಿಕ್ಟೋರಿಯಾ, ವಿವಿಧೋದ್ದೇಶಿತ ಸಹಕಾರ ಸಂಘದ ಅಧ್ಯಕ್ಷರಾದಂತ ಚಂದ್ರಪ್ಪ, ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷರಾದಂತ ಕವಿರಾಜ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷೆ ವಿಜಯ ಕುಮಾರಿ, ಸಿಆರ್ ಪಿ ಸಂಘದ ಅಧ್ಯಕ್ಷರಾದಂತ ರಾಜಾ ನಾಯಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತರಾದ ಶಿಕ್ಷಕರನ್ನು ಗೌರವಿಸಲಾಯಿತು. ಹಾಗೆಯೇ ಅನೇಕ ಕ್ರೀಡೆಗಳಲ್ಲಿ ಸ್ಥಾನಗಳಿಸಿದ ಶಿಕ್ಷಕರಿಗೂ ಅಭಿನಂದಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಬಿಸಿಯೂಟ ಸಮನ್ವಯಕರಿಗೂ, ಹಾಗೆಯೇ ಶಿಕಾರಿಪುರದಿಂದ ಅಧ್ಯಕ್ಷರನ್ನು ಗೌರವಿಸಲು ಬಂದ ಪದಾಧಿಕಾರಿಗಳನ್ನು ಮತ್ತು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬೆಂಬಲವಾಗಿ ನಿಂತು ಶಿಕ್ಷಕರೆಲ್ಲರನ್ನು ಒಂದೆಡೆ ತರುವ ಪ್ರಯತ್ನ ಮಾಡಿದ ಪ್ರಮುಖರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಸಂಘದ ಉಪಾಧ್ಯಕ್ಷರು, ಮಹಿಳಾ ಪದಾಧಿಕಾರಿಗಳು, ನಿರ್ದೇಶಕರು ಪ್ರಾರ್ಥಿಸಿದರು, ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ್.ಜಿ.ಕೆ ಗಣ್ಯರನ್ನು ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ರಾಜಭಕ್ಷ ರಟ್ಟಿಹಳ್ಳಿ ವಂದಿಸಿದರು.
ಸುದ್ದಿ ಮತ್ತು ಜಾಹೀರಾತು ನೀಡಲು - 7204641701
ಮೀನಿನ ಹೆಜ್ಜೆ ನ್ಯೂಸ್, ಸಾಗರ

















Comments
Post a Comment