ಯುವ ಸಮೂಹವನ್ನು ಎಚ್ಚರಿಸುವ ಕೆಲಸ ಎಲ್ಲರೂ ಸೇರಿ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ-ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ
ಯುವ ಸಮೂಹವನ್ನು ಎಚ್ಚರಿಸುವ ಕೆಲಸ ಎಲ್ಲರೂ ಸೇರಿ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ-ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ
ಸಾಗರ : ಕಳೆದ ಒಂದು ವಾರದಲ್ಲಿ ಮೂರು ಎಳೆಯ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಣ್ಣ ವಯಸ್ಸಿನವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಯುವ ಸಮೂಹವನ್ನು ಎಚ್ಚರಿಸುವ ಕೆಲಸ ಎಲ್ಲರೂ ಸೇರಿ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ತಿಳಿಸಿದ್ದಾರೆ.
ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆರೋಡಿಯ 22 ವರ್ಷದ ಯುವತಿ, ಮಾಸೂರಿನ 17 ವರ್ಷದ ಬಾಲಕಿ, ಸಾಗರ ಶ್ರೀಧರ ನಗರದ ೧೩ ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡರೇ, ಸಾಗರ ಮತ್ತು ತುಮರಿಯಲ್ಲಿ ನಡೆದ ಬೈಕ್ ಅಘಾತದಲ್ಲಿ ಇಬ್ಬರು ಎಳೆಯ ವಯಸ್ಸಿನವರು ಮೃತಪಟ್ಟಿದ್ದು ಮನಸ್ಸಿಗೆ ತೀರ ಬೇಸರ ತಂದಿದೆ ಎಂದರು.
ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಬ್ಲಾಕ್‌ಮೇಲ್ ಮಾಡಿ ಯುವತಿಯರನ್ನು ಖಿನ್ನತೆಗೊಳಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ. ಪೋಷಕರು ಅನೇಕ ಕನಸುಗಳನ್ನು ಹೊತ್ತು ನಿಮಗೆ ವಿದ್ಯೆ ನೀಡಿ ಬೆಳೆಸಿರುತ್ತಾರೆ. ಅವರ ಎದುರು ಮಕ್ಕಳು ವಿಷ ಸೇವಿಸಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದು ಅತ್ಯಂತ ದುಃಖ ತರುವ ಸಂಗತಿ. ಏನೇ ಸಮಸ್ಯೆಗಳಿದ್ದರೂ ಅದಕ್ಕೆ ಪರಿಹಾರವೂ ಇರುತ್ತದೆ. ಈ ಹಿನ್ನೆಲೆಯಲ್ಲಿ ಸಾಗರ ಮಾತ್ರವಲ್ಲದೇ ರಾಜ್ಯದಾದ್ಯಂತ ಹದಿಹರೆಯದ ಮಕ್ಕಳು ಆತ್ಮಹತ್ಯೆಗೆ ಮನಸ್ಸು ಮಾಡುತ್ತಿರುವುದು ಹೆಚ್ಚುತ್ತಿದೆ. ಸರ್ಕಾರ ಈ ಬಗ್ಗೆ ಶಾಲಾಕಾಲೇಜು ಹಂತದಲ್ಲಿಯೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ನಾನು ಹಿಂದೆ ಹೊಸನಗರ ಕ್ಷೇತ್ರದ ಶಾಸಕನಾಗಿದ್ದಾಗ, ಸಾಗರ ಕ್ಷೇತ್ರದ ಶಾಸಕನಾಗಿದ್ದಾಗ ಕೊರೋನಾ ಸಂದರ್ಭದಲ್ಲಿ ಅನೇಕ ಸಮೂಹ ಜಾಗೃತಿ ಕಾರ್ಯಗಳನ್ನು ಸಮೂಹವನ್ನು ಒಳಗೊಂಡು ನಡೆಸಿ ಯಶಸ್ವಿಯಾಗಿದ್ದೇನೆ. ಇದೀಗ ಅಂತಹದ್ದೇ ಕಾಲಘಟ್ಟದಲ್ಲಿ ನಾವಿದ್ದೇವೆ. ನಮ್ಮ ಕಣ್ಣೆದುರು ಸಾವುಗಳು ಸಂಭವಿಸುತ್ತಿದೆ. ಕೈಕೊಟ್ಟಿ ಕುಳಿತುಕೊಳ್ಳುವ ಕಾಲಘಟ್ಟ ಇದಲ್ಲ. ಈ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ, ಸಮಾಜಮುಖಿ ಚಿಂತನೆಯುಳ್ಳುವರು, ಎಲ್ಲ ಜಾತಿ ಧರ್ಮದ ಮಠಾಧೀಶರು ಯುವ ಸಮೂಹದ ಜಾಗೃತಿಗೆ ಮುಂದಾಗಬೇಕು. ತಮ್ಮತಮ್ಮ ಸಮುದಾಯದ ಹಂತದಲ್ಲಿ ಯುವ ಸಮೂಹ ಆತ್ಮಹತ್ಯೆ ನಿರ್ಧಾರ ಕೈಗೊಳ್ಳದಂತೆ ಪೋಷಕರ ಮೂಲಕ ಜಾಗೃತಿ ಮೂಡಿಸಬೇಕು. ಅಗತ್ಯ ಬಿದ್ದಲ್ಲಿ ಆಪ್ತ ಸಮಾಲೋಚನೆಗೆ ಮುಂದಾಗಬೇಕು. ಪೊಲೀಸ್ ಇಲಾಖೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಯುವ ಜನರ ಜಾಗೃತಿ ಮೂಡಿಸಬೇಕು. ಫೋಟೋ, ವಿಡಿಯೋ ಇರಿಸಿಕೊಂಡು ಮಾನಸಿಕ ಹಿಂಸೆ ನೀಡುವುದು, ಕೌಟುಂಬಿಕ ಸಮಸ್ಯೆ, ಆರ್ಥಿಕ ಹಿನ್ನೆಡೆ, ಪ್ರೇಮ ವೈಫಲ್ಯ, ಬ್ಲಾಕ್‌ಮೇಲ್ ಇನ್ನಿತರೆ ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿದ್ದರೇ ಪೋಷಕರು, ಸಂಬಂಧಪಟ್ಟವರು, ಪೊಲೀಸ್ ಇಲಾಖೆ ಗಮನಕ್ಕೆ ತನ್ನಿ. ಕೊನೆಪಕ್ಷ ನನ್ನವಮೊಬೈಲ್‌ಗೆ ಸಂಪರ್ಕ ಮಾಡಿ ಮಾಹಿತಿ ಹಂಚಿಕೊಂಡರೆ ಅಗತ್ಯ ನೆರವು ಕಲ್ಪಿಸುತ್ತೇನೆ. ಯುವ ಸಮೂಹದ ಆತ್ಮಹತ್ಯೆ ಸರಪಳಿ ತುಂಡಾಗಬೇಕು. ಅದಕ್ಕೆ ಎಲ್ಲರೂ ಸೇರಿ ಪ್ರಯತ್ನಿಸೋಣ. ಈ ಜಾಗೃತಿ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಗೋಷ್ಟಿಯಲ್ಲಿ ದೇವೇಂದ್ರಪ್ಪ ಯಲಕುಂದ್ಲಿ, ಗಣೇಶ್ ಪ್ರಸಾದ್, ಟಿ.ಡಿ.ಮೇಘರಾಜ್, ರತ್ನಾಕರ ಹೊನಗೋಡು, ಮಲ್ಲಿಕಾರ್ಜುನ ಹಕ್ರೆ, ಗುಳ್ಳಳ್ಳಿ ಗಿರೀಶ್, ಬಿ.ಟಿ.ರವೀಂದ್ರ ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment