ಜಯಶೀಲಗೌಡ ಅದರಂತೆ ಇನ್ನಿಲ್ಲ

 ಜಯಶೀಲಗೌಡ ಅದರಂತೆ ಇನ್ನಿಲ್ಲ

ಸಾಗರ : ಜಯಶೀಲಗೌಡ ಅದರಂತೆ, ವಯಸ್ಸು 68, ಸಾಗರದ ಪ್ರಸಿದ್ದ ಸಾರಿಗೆ ಸಂಸ್ಥೆಯಾದ  ಶ್ರೀಗಜಾನನ ಸಾರಿಗೆ (SGMT Co.,) ಸಾಗರ ಇದರ ನಿರ್ವಾಹಕರಾಗಿ ಮತ್ತು ಚಿಕ್ಕಿಂಗ್ ಇನ್ಸ್'ಪೆಕ್ಟರ್ ಆಗಿ 33 ವರುಷಗಳಿಂದ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದ ಕಂಪನಿಯ ನಿಷ್ಠಾವಂತ ಉದ್ಯೋಗಿ ಇಂದು ಮಧ್ಯಾಹ್ನ ನಿಧನರಾದರೆಂದು ತಿಳಿಸಲು ವಿಷಾಧಿಸುತ್ತೇವೆ.

ಕಂಪನಿಯಲ್ಲಿ ಕೆಲಸದ ವಿಷಯದಲ್ಲಿ ಪ್ರಸಂಸ್ಥೆಗೆ ಒಳಗಾದವರು. ಕುಟುಂಬದಲ್ಲಿ ಇವರು ಹಿರಿಯವರಾಗಿದ್ದು ಐದು ಜನ ತಮ್ಮಂದಿರೂ ಒಂದೇ ಮನೆಯಲ್ಲಿ ಇವತ್ತಿಗೂ ವಾಸವಾಗಿರುವ ದೊಡ್ಡ ಕುಟುಂಬ. ಪತ್ನಿ ಮತ್ತು ಓರ್ವ ಮಗಳನ್ನು, ಅಳಿಯ ಹಾಗೂ ಕುಟುಂಬವನ್ನು ಇವರು ಬಿಟ್ಟಗಲಿದ್ದಾರೆ. 

ಅವರ ಕುಟುಂಬದವರಿಗೆ ಅವರಿಲ್ಲದ ನೋವನ್ನ ಸಹಿಸಿಕೊಳ್ಳುವ ಶಕ್ತಿಯನ್ನು ಆ ದೇವರು ನೀಡಲಿ.

ಇವರ ನಿಧನಕ್ಕೆ ಶ್ರೀಗಜಾನನ ಸಾರಿಗೆ ಸಂಸ್ಥೆಯ ಆಡಳಿತ ಮಂಡಳಿ, ಸಿಬ್ಬಂದಿಗಳು ಮತ್ತು ಕಾರ್ಮಿಕರು ತಮ್ಮ ಸಂತಾಪವನ್ನು ಸೂಚಿದ್ದಾರೆ ಮತ್ತು ಕುಟುಂಬದವರಿಗೆ ಅವರ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿ ಭಗವಂತನು ನೀಡಲೆಂದು ತಮ್ಮ ಕಂಬನಿ ಮಿಡಿದಿದ್ದಾರೆ.

ಮೂರನೇಕಣ್ಣು ನ್ಯೂಸ್, ಸಾಗರ ಮತ್ರು ಮೀನಿನಹೆಜ್ಜೆ ನ್ಯೂಸ್, ಸಾಗರ ಬಳಗ ಮೃತರ ಅತ್ಮಕ್ಕೆ ಶಾಂತಿ ಸಿಗಲೆಂದು ಕೋರುತ್ತದೆ.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ