ಫೋನು ಇಲ್ಲ ಮೇಸೆಜ್‌ ಇಲ್ಲಾ ನಿಮ್ದು

ಫೋನು ಇಲ್ಲ ಮೇಸೆಜ್‌ ಇಲ್ಲಾ ನಿಮ್ದು

ನಾಳೆ ಸಚಿವ ಸಂಪುಟ ವಿಸ್ತರಣೆ ಆಗುತ್ತಾ, ಇಲ್ವಾ? 'ಕೈ'ಕಮಾಂಡ್ ಕರೆಗಾಗಿ ಕಾಯುತ್ತಿರುವ ಆಕಾಂಕ್ಷಿಗಳು

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗುತ್ತೋ ಇಲ್ವೋ? ಸದ್ಯ ಇದೊಂದು ಮಿಲಿಯನ್ ಡಾಲರ್ ಪ್ರಶ್ನೆ ಎನ್ನುವಂತಾಗಿದೆ! ಸಿಎಂ ಡಿಕೆ ಶಿವಕುಮಾರ್ ಮಾಜಿ ಸಿಎಂ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿದ್ದೂ ಆಯ್ತು, ವಾಪಸ್ ಬಂದಿದ್ದೂ ಆಯ್ತು.

ಇತ್ತ ಸಚಿವ ಸಂಪುಟ ವಿಸ್ತರಣೆ ಪಕ್ಕಾ ಎನ್ನಲಾಗ್ತಿದ್ದು, ಸೋಮವಾರವೇ ನೂತನ ಮಂತ್ರಿಗಳ ಪದಗ್ರಹಣ ಎನ್ನಲಾಗ್ತಿದೆ. ಆದರೆ ದೆಹಲಿಗೆ ಹೋಗಿ, ಹೈಕಮಾಂಡ್‌ ಬಳಿ ಲಾಬಿ ಮಾಡಿ ಬಂದ ನಾಯಕರಿಗೆ, ಸಚಿವಸ್ಥಾನದ ಆಕಾಂಕ್ಷಿಗಳಿಗೆ ಹೈಕಮಾಂಡ್ ಕಡೆಯಿಂದ ಯಾವುದೇ ಸಂದೇಶ ಬಂದಿಲ್ವಂತೆ!



ಸೋಮವಾರ ಸಂಪುಟ ವಿಸ್ತರಣೆ ಪಕ್ಕಾನಾ?

ಡಿಕೆ ಶಿವಕುಮಾರ್‌ರ ಸಚಿವ ಸಂಪುಟ ವಿಸ್ತರಣೆ ಸೋಮವಾರವೇ ಪಕ್ಕಾ ಎನ್ನಲಾಗುತ್ತಿದೆ. ಆದರೆ ಮಂತ್ರಿಸ್ಥಾನದ ಮೇಲೆ ಕಣ್ಣಟ್ಟಿದ್ದ ಆಕಾಂಕ್ಷಿಗಳಲ್ಲಿ ಗೊಂದಲ ಮುಂದುವರೆದಿದೆ. ಸಚಿವ ಸಂಪುಟ ವಿಸ್ತರಣೆ ಆಕಾಂಕ್ಷಿಗಳಿಗೆ ಗೊಂದಲ ಹಾಗೆಯೇ ಇದೆ.

ಡಿಕೆ ಶಿವಕುಮಾರ್ ಸಂಪುಟ ಸೇರುವ ಸಚಿವರು ಯಾರು?

ಸೋಮವಾರ ಅಂದರೆ ನಾಳೆ ಸಂಜೆ ನಾಲ್ಕು ಗಂಟೆಗೆ ನೂತನ ಸಚಿವರ ಪ್ರಮಾಣ ವಚನಕ್ಕೆ ಮುಹೂರ್ತ ನಿಗದಿಯಾಗಿದೆ ಎನ್ನಲಾಗಿದೆ. ಆದರೆ ಇನ್ನು 24 ಗಂಟೆಗಳಿಗಿಂತ ಕಡಿಮೆ ಅವಧಿ ಇದ್ದರೂ ಡಿಕೆ ಶಿವಕುಮಾರ್ ಸಂಪುಟ ಸೇರುವ ನೂತನ ಸಚಿವರು ಯಾರು ಎಂಬ ಗೊಂದಲಕ್ಕೆ ಇನ್ನೂ ತೆರೆ ಬಿದ್ದಿಲ್ಲ.

ಇನ್ನೂ ಪಟ್ಟಿತರದ ವೇಣುಗೋಪಾಲ್, ಸುರ್ಜೇವಾಲ

ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್ ಜೊತೆ ಹೈಕಮಾಂಡ್ ಚರ್ಚೆ ನಡೆಸಿದ್ದು, ನೂತನ ಸಚಿವರ ಪಟ್ಟಿ ದೆಹಲಿಯಲ್ಲೇ ಫೈನಲ್ ಆಗಿದೆ ಎನ್ನಲಾಗುತ್ತಿತ್ತು. ಕೆಸಿ ವೇಣುಗೋಪಾಲ್ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅಂತಿಮ ಪಟ್ಟಿ ತೆಗೆದುಕೊಂಡು ಬರುತ್ತಾರೆ ಎನ್ನಲಾಗಿತ್ತು. ಆದರೆ ಇದವರೆಗೂ ಉಭಯ ನಾಯಕರು ರಾಜ್ಯಕ್ಕೆ ಆಗಮಿಸುವ ಬಗ್ಗೆ ಈತನಕ ಅಧಿಕೃತ ಮಾಹಿತಿಯೇ ಇಲ್ಲ ಎನ್ನಲಾಗಿದೆ.

ಲೋಕಭವನಕ್ಕೂ ಮಾಹಿತಿ ನೀಡದ ಸಿಎಂ ಕಚೇರಿ

ಈ ಎಲ್ಲಾ ಕಾರಣಕ್ಕೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿರೋ ಆಕಾಂಕ್ಷಿಗಳು ಗೊಂದಲದಲ್ಲಿದ್ದಾರೆ. ನಾಳೆಯೇ ಸಚಿವ ಸಂಪುಟ ವಿಸ್ತರಣೆ ಆಗುತ್ತೋ ಇಲ್ವೋ ಎಂಬ ಗೊಂದಲದಲ್ಲಿದ್ದಾರೆ. ಇದರ ನಡುವೆ ನಾಳೆ ಮಂತ್ರಿಗಳ ಪದಗ್ರಹಣದ ಬಗ್ಗೆ ರಾಜ್ಯಪಾಲರು ಅಥವಾ ಲೋಕಭವನಕ್ಕೂ ಇನ್ನೂ ಸಿಎಂ ಕಚೇರಿಯಿಂದ ಲಿಖಿತ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಆದರೆ ಸಿಎಂ ಕಚೇರಿ ಕೇವಲ ಮೌಖಿಕವಾಗಿ ಮಾತ್ರ ಮಾಹಿತಿಯನ್ನು ನೀಡಿದೆ ಎಂದು ಹೇಳಲಾಗುತ್ತಿದೆ.

ಇಂದು ಸಂಜೆಯಾದರೂ ಕರೆ ಬರಬಹುದಾ?

ಸೋಮವಾರ ಸಂಜೆ 4 ಗಂಟೆಗೆ ಪ್ರಮಾಣ ವಚನ ಕಾರ್ಯಕ್ರಮ ಮಾಡ್ತೇವೆ ಎಂದು ಮೌಖಿಕವಾಗಿ ಅಷ್ಟೇ ಮಾಹಿತಿ ನೀಡಲಾಗಿದೆ. ಇಂದು ರಾತ್ರಿ ಹೊತ್ತಿಗಾದರೂ ಹೈಕಮಾಂಡ್‌ನಿಂದ ಕರೆ ಬರಬಹುದು ಎಂದು ಸಚಿವ ಸ್ಥಾನದ ಆಕಾಂಕ್ಷಿಗಳು ಕಾಯುತ್ತಿದ್ದಾರಂತೆ.

ಕುರ್ಚಿ ಮೇಲೆ ಕಣ್ಣಿಟ್ಟ ಹಿರಿಯರಿಗೂ ಆತಂಕ

ಇತ್ತ ಹೈಕಮಾಂಡ್ ಹಂತದಲ್ಲೂ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ಎದುರಾಗಿತ್ತು. ಕೆಸಿವಿ, ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲ ನಡುವೆಯೂ ಕೆಲ ಹೆಸರಿಗೆ ಒಮ್ಮತವಿರಲಿಲ್ವಂತೆ. ಒಂದಷ್ಟು ಅಚ್ಚರಿ ಹೆಸರುಗಳು ಸಂಪುಟಕ್ಕೆ ಸೇರ್ಪಡೆಯಾಗಲಿದ್ದು, ಹೀಗಾಗಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಿರಿಯರಿಗೂ ಆತಂಕ ಶುರುವಾಗಿದೆ ಎನ್ನಲಾಗಿದೆ.

ಇನ್ನೂ ಸಿಗದ ಸ್ಪಷ್ಟತೆ

ಈ ಎಲ್ಲದರ ನಡುವೆ ಕೆಸಿ ವೇಣುಗೋಪಾಲ್ ಅವರೇ ರಾಜ್ಯಕ್ಕೆ ಬಂದು ಅಧಿಕೃತವಾಗಿ ಸಚಿವರ ಪಟ್ಟಿ ಕೊಡ್ತಾರಾ..? ಅಥವಾ ಅಧಿಕೃತವಾಗಿ ಎಐಸಿಸಿಯೇ ಹೆಸರನ್ನು ಘೋಷಣೆ ಮಾಡುತ್ತಾ? ಎಂಬ ಬಗ್ಗೆ ಇನ್ನೂ ಸ್ಷಷ್ಟತೆ ಸಿಕ್ಕಿಲ್ಲ ಎಂಬ ಮಾಹಿತಿ ನ್ಯೂಸ್ 18ಗೆ ಲಭ್ಯವಾಗಿದೆ.

ನಾಳೆ ಆಗುತ್ತೆ ಎಂದ ಪ್ರಿಯಾಂಕ್ ಖರ್ಗೆ

ಇನ್ನು ನಾಳೆ ಸಂಪುಟ ವಿಸ್ತರಣೆ ಆಗುತ್ತೆ, ಆಗುತ್ತೆ ಅಂತ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ನಾಳೆ ಆಗುತ್ತೆ ಅಂತ ಹೇಳಿದ್ದಾರೆ.


ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ