ತಾಲ್ಲೂಕು ವೀರಶೈವ ಯುವ ವೇದಿಕೆಯಿಂದ ಸಾಮೂಹಿಕ ರುದ್ರಾಭಿಷೇಕ, ಇಷ್ಟಲಿಂಗ ಪೂಜೆ ಮತ್ತು ಧರ್ಮಸಭೆ-ಸಾ.ತಾ. ವೀರಶೈವ ಯುವ ವೇದಿಕೆ ಅಧ್ಯಕ್ಷ ಅನಿಲ್ ಬರದವಳ್ಳಿ

ತಾಲ್ಲೂಕು ವೀರಶೈವ ಯುವ ವೇದಿಕೆಯಿಂದ ಸಾಮೂಹಿಕ ರುದ್ರಾಭಿಷೇಕ, ಇಷ್ಟಲಿಂಗ ಪೂಜೆ ಮತ್ತು ಧರ್ಮಸಭೆ-ಸಾ.ತಾ. ವೀರಶೈವ ಯುವ ವೇದಿಕೆ ಅಧ್ಯಕ್ಷ ಅನಿಲ್ ಬರದವಳ್ಳಿ

ಸಾಗರ : ತಾಲ್ಲೂಕು ವೀರಶೈವ ಯುವ ವೇದಿಕೆಯು ಕಳೆದ ಹತ್ತೊಂಬತ್ತು ವರ್ಷಗಳಿಂದ "ಸಾಮೂಹಿಕ ರುದ್ರಾಭಿಷೇಕ” ಕಾರ್ಯಕ್ರಮವನ್ನು ಆಯೋಜಿಸುತ್ತ ಬಂದಿರುತ್ತದೆ. ಈ ಶ್ರಾವಣ ಮಾಸವು ವೀರಶೈವ ಧರ್ಮದವರಿಗೆ ಒಂದು ಮಹತ್ವದ ತಿಂಗಳಾಗಿರುತ್ತದೆ. ಅದರಲ್ಲೂ ಶ್ರಾವಣ ಸೋಮವಾರದಂದು ಇಷ್ಟಲಿಂಗ ಪೂಜೆಯನ್ನು ಮಾಡುವುದರಿಂದ ಇಹಜನ್ಮದ ಪಾಪ ಕರ್ಮಗಳನ್ನು ಪರಿಹರಿಸಿಕೊಳ್ಳುವುದರ ಜೊತೆಯಲ್ಲಿ ಶಿವಾನುಗ್ರಹಕ್ಕೆ ಪಾತ್ರರಾಗಿರುತ್ತಾರೆ. ಹಾಗೂ ಧರ್ಮಸಭೆಗೆ ಆಗಮಿಸಿ ಧರ್ಮೋಪದೇಶ ಮತ್ತು ಶ್ರಾವಣ ಮಾಸದ ಮಹತ್ವವನ್ನು ತಿಳಿಯುವುದರೊಂದಿಗೆ ಈ ಪವಿತ್ರ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಎಲ್ಲಾ ವೀರಶೈವ ಬಾಂಧವರು ಭಾಗವಹಿಸಬೇಕೆಂದು ಸಾಗರ ತಾಲ್ಲೂಕು ವೀರಶೈವ ಯುವ ವೇದಿಕೆ ಅಧ್ಯಕ್ಷ‌ ಅನಿಲ್‌ ಬರದವಳ್ಳಿ ಹೇಳಿದ್ದಾರೆ.

ಅವರು ಸಾಗರದ ಕರಾಕಾನಿಪಸಂಘದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಷಬ್ರ ಡಾ. ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಕೆಳದಿ ರಾಜಗುರು ಹಿರೇಮಠ, ಬಂದಗದ್ದೆ ಇವರು ದಿನಾಂಕ: 24-08-2026ರ ಸೋಮವಾರ ಬೆಳಗ್ಗೆ 8.30ಕ್ಕೆ ಶ್ರೀ ವೀರಶೈವ ಕಲ್ಯಾಣ ಮಂಟಪ, ಮಾರ್ಕೆಟ್ ರಸ್ತೆ, ಸಾಗರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ

ಶ್ರೀ ಷ|ಬ್ರ|| ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಕೋಣಂದೂರು-ಬೃಹನ್ಮಠ ಇವರಿಂದ ಇಷ್ಟಲಿಂಗ ಪೂಜೆ ನೆರವೇರಿಸಲಾಗುವುದು.

ಸಾಮೂಹಿಕ ರುದ್ರಾಭಿಷೇಕಕ್ಕೆ 251 ರೂಪಾಯಿಗಳು ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಳ್ಳುವವರು ಬೆಳಗ್ಗೆ 8.30 ಕ್ಕೆ ಆಗಮಿಸಬೇಕಾಗಿ ವಿನಂತಿ (ಪುರುಷರು ಶಾಲು ಮತ್ತು ಪಂಚೆ ಧರಿಸಿ ಬರಬೇಕು) ಮಧ್ಯಾಹ್ನ 2.00 ಗಂಟೆಗೆ ಮಹಾ ಪ್ರಸಾದ ವಿತರಣೆ ಇರುತ್ತದೆ ಎಂದು ಹೇಳಿದರು.

ಧರ್ಮಸಭೆಯ ಮಧ್ಯಾಹ್ನ 11.00 ಗಂಟೆಗೆ  ಶ್ರೀ ವೀರಶೈವ ಕಲ್ಯಾಣ ಮಂಟಪ, ಮಾರ್ಕೆಟ್ ರಸ್ತೆ, ಸಾಗರ ಇಲ್ಲಿ ಎಂದಿನಂತೆ ನಡೆಯಲಿದೆ. ಇದರ ದಿವ್ಯ ಸಾನಿಧ್ಯವನ್ನು ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು,‌ಶ್ರೀ ಶ್ರೀ ಡಾ॥ ಮಲ್ಲಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರು.ಲ, ಶ್ರೀ ಷ ಬ್ರ ಶ್ರೀ ಮುರುಘಾಮಠ, ಆನಂದಪುರಂ,  ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಕೋಣಂದೂರು ಬೃಹನ್ಮಠ, ಶ್ರೀ ಷ||ಬ್ರ|| ಗುರು ನೀಲಕಂಠ ಶಿವಾಚಾರ್ಯ ಸ್ವಾಮಿಗಳು,‌ಶ್ರೀ ಶೃಂಗೇಶ್ವರ ಮಠ, ಬಳಸಗೋಡು-ಸಾಗರ, ಅಧ್ಯಕ್ಷತೆಯನ್ನು ಅನಿಲ್ ಬರದವಳ್ಳಿ, ಅಧ್ಯಕ್ಷರು, ತಾಲ್ಲೂಕು ವೀರಶೈವ ಯುವ ವೇದಿಕೆ, ಸಾಗರ, ಪ್ರವೀಣ್ ಕೆ.ವಿ. ಅಧ್ಯಕ್ಷರು, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ, ಸಾಗರ ಘಟಕ, ಬಸವರಾಜ್ ಗುಂಡಾಲಿ,‌ಅಧ್ಯಕ್ಷರು, ವೀರಶೈವ ಸಮಾಜ (ರಿ.), ಸಾಗರ, ಜಿ.ಎಸ್. ಹಿರೇಮಠ, ಅಧ್ಯಕ್ಷರು, ಜಂಗಮ ಸಮಾಜ, ಸಾಗರ, ಎಸ್.ಸಿ. ಗಂಗಾಧರ ಗೌಡ್ರು, ಅಧ್ಯಕ್ಷರು, ವಧು-ವರರ ಅನ್ವೇಷಣಾ ಕೇಂದ್ರ, ಸಾಗರ, ರಾಜೇಂದ್ರ ಆವಿನಹಳ್ಳಿ, ಅಧ್ಯಕ್ಷರು, ಮಲ್ಲವ ಸಮಾಜ, ಸಾಗರ ತಾಲ್ಲೂಕು ಶ್ರೀ ಚಂದ್ರಶೇಖರ ಎನ್.ಹೆಚ್., ಅಧ್ಯಕ್ಷರು, ವೀರ ಶಿವಪ್ಪನಾಯಕ ವೇದಿಕೆ, ಸಾಗರ, ಶ್ರೀಮತಿ ಮಧು ಮಲ್ಲಿಕಾರ್ಜುನ ಕೋರಿ, ಅಧ್ಯಕ್ಷರು, ಅಕ್ಕನ ಬಳಗ, ಸಾಗರ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

ತೋಟಗಾರಿಕೆ ಇಲಾಖೆ ಬಗ್ಗೆ ಸಮಗ್ರ ಮಾಹಿತಿ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಸಾಗರ ಇವರಿಂದ, 2028ವೆ ಸಾಲಿನಲ್ಲಿ ವಿವಾಹವಾದ ಸಾಗರ ತಾಲ್ಲೂಕಿನ ನೂತನ ವೀರಶೈವ ದಂಪತಿಗಳಿಗೆ ಶ್ರೀಗಳಿಂದ ಉಡಿ ತುಂಬ ಅಶೀರ್ವದಿಸುವ ಕಾರ್ಯಕ್ರಮ ಏರುತ್ತದೆ. ಮಾತನ ದಂಪತಿಗಳು ಈ ಶುಭ ಸಮಾರಂಭಕ್ಕೆ ಆಗಮಿಸಬೇಕಾಗಿ ವಿನಂತ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಯಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಅಂಕ ಪಡೆದ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ (ಅಂಕಪಟ್ಟಿ ನಕಲನ್ನು ಈ ಕೆಳಗೆ ನಮೂದಿಸಿ ನಂಬರ್ ಹ್ಯಾಟ್ಸ್ ಆಪ್ ಮೂಲಕ ಕಳುಹಿಸಿ ಮುಂಚಿತವಾಗಿ ಹೆಸರು ನೊಂದಾಯಿಸಲು ಕೋರಿದ್ದಾರೆ.

ಈ ವರ್ಷದಿಂದ ವಿಶೇಷವಾಗಿ ಸಮಾಜದ 80 ವರ್ಷ ಮೇಲ್ಪಟ್ಟ ಹಿರಿಯ ದಂಪತಿಗಳಿಗೆ ಗೌರವ ಸಮರ್ಪಣೆ ಇರುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಕುಮಾರ, ಭದ್ರೇಶ ಬಾಳಗೋಡು, ಹರ್ಷ, ಸಚಿನ್, ಮಣಿ, ಸಚಿನ್,‌ ಶಿವು, ಜ್ಞಾನೇಶ, ಮಹೇಶ, ಅಭಿಷೇಕ ಹಾಜರಿದ್ದರು.


ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ