ಸಚಿವ ಸ್ಥಾನಕ್ಕಾಗಿ ಮೂರು ತಿಂಗಳು ಕ್ಷೇತ್ರ ಬಿಟ್ಟು ಬೆಂಗಳೂರಿನಲ್ಲಿ ಇರುವುದು ಎಷ್ಟು ಸರಿ-ರತ್ನಾಕರ ಹೋನಗೋಡು

ಸಚಿವ ಸ್ಥಾನಕ್ಕಾಗಿ ಮೂರು ತಿಂಗಳು ಕ್ಷೇತ್ರ ಬಿಟ್ಟು ಬೆಂಗಳೂರಿನಲ್ಲಿ ಇರುವುದು ಎಷ್ಟು ಸರಿ-ರತ್ನಾಕರ ಹೋನಗೋಡು



ಸಾಗರ : ಕ್ಷೇತ್ರಕ್ಕೆ ಸಚಿವ ಸ್ಥಾನ ಬೇಕು. ಆದರೆ ಸಚಿವ ಸ್ಥಾನಕ್ಕಾಗಿ ಮೂರು ತಿಂಗಳು ಕ್ಷೇತ್ರ ಬಿಟ್ಟು ಬೆಂಗಳೂರಿನಲ್ಲಿ ಇರುವುದು ಎಷ್ಟು ಸರಿ. ಬೇಳೂರಿಗೆ ಸಚಿವ ಸ್ಥಾನ ಸಿಕ್ಕಿದ್ದರೆ ನಾವು ಸ್ವಾಗತ ಮಾಡುತ್ತೇವೆ. ಹಾಗೆಯೆ ಕ್ಷೇತ್ರದಲ್ಲಿಯೆ ಇದ್ದು ಅಭಿವೃದ್ದಿ ಕಡೆ ಗಮನ ಹರಿಸುವುದು ಅತಿಮುಖ್ಯ ಎನ್ನುವುದನ್ನು ಅವರು ತಿಳಿದುಕೊಳ್ಳದೆ ಇರುವುದು ದುರದೃಷ್ಟಕರ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ತಿಳಿಸಿದರು.



ಇಲ್ಲಿನ ಜೋಸೆಫ್ ನಗರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮನೆಗೆ ಬುಧವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ನಂತರ ಅವರು ಪತ್ರಕರ್ತರ ಜೊತೆ ಮಾತನಾಡಿದ ಅವರು, ಸಚಿವ ಸ್ಥಾನಕ್ಕಿಂತ ಶಾಸಕ ಸ್ಥಾನವೇ ಶ್ರೇಷ್ಟ. ಕ್ಷೇತ್ರದ ಜನರು ಶಾಸಕ ಸ್ಥಾನ ನೀಡಿದಾಗ ಅದನ್ನು ಅಭಿವೃದ್ದಿ ಮೂಲಕ ಸದ್ಭಳಕೆ ಮಾಡಿಕೊಳ್ಳಬೇಕಾಗಿತ್ತು. ಅದನ್ನು ಬಿಟ್ಟು ಸಚಿವ ಸ್ಥಾನಕ್ಕಾಗಿ ಕ್ಷೇತ್ರ ಮರೆತರೆ ಮತದಾರರಿಗೆ ಅವಮಾನ ಮಾಡಿದಂತೆ ಎಂದರು. ಹಿಂದೆ ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ, ಎಲ್.ಟಿ.ತಿಮ್ಮಪ್ಪ, ಧರ್ಮಪ್ಪ ಅಂತಹವರಿಗೆ ಮೊದಲು ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದರೂ ಅವರು ಕ್ಷೇತ್ರದ ಅಭಿವೃದ್ದಿಗೆ ಟೊಂಕ ಕಟ್ಟಿ ನಿಂತಿದ್ದರು. ಕ್ಷೇತ್ರವ್ಯಾಪ್ತಿಯಲ್ಲಿ ಮೊದಲು ಮಳೆಯಿಲ್ಲದೆ ರೈತರು ನೆಟ್ಟಿ ಮಾಡಿದ್ದ ಬೀಜ ಕಳೆದುಕೊಂಡಿದ್ದರೇ, ಇದೀಗ ವಿಪರೀತ ಮಳೆಯಿಂದ ಇನ್ನೊಂದು ರೀತಿಯ ಸಂಕಷ್ಟ ಎದುರಿಸುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಮನೆಬಿದ್ದು ಜನರು ನಿರಾಶ್ರಿತರಾಗಿದ್ದಾರೆ. ಅಡಿಕೆ ಕೊಳೆರೋಗ ಬಂದು ಬೆಳೆಗಾರರು ಆತಂಕದಲ್ಲಿದ್ದಾರೆ. ಇಂತಹ ಹೊತ್ತಿನಲ್ಲಿ ಕ್ಷೇತ್ರದಲ್ಲಿದ್ದು ಅಧಿಕಾರಿಗಳ ಸಭೆ ನಡೆಸಿ ತುರ್ತು ಪರಿಹಾರ ಕೊಡಬೇಕಾಗಿತ್ತು. ಅದನ್ನು ಬಿಟ್ಟು ಕ್ಷೇತ್ರದ ಕಡೆ ಮುಖ ಹಾಕದೆ ಇರುವುದು ಸರಿಯಲ್ಲ ಎಂದು ಅಭಿಪ್ರಾಯಿಸಿದರು.

ಈ ವಯಸ್ಸಿನಲ್ಲಿಯೂ ಕಾಗೋಡು ತಿಮ್ಮಪ್ಪ ಅವರು ಮಳೆಬೆಳೆ, ಅತಿವೃಷ್ಟಿಯಿಂದ ಆಗಿರುವ ತೊಂದರೆ ಇನ್ನಿತರೆ ಕುರಿತು ಮಾಹಿತಿ ಪಡೆದುಕೊಂಡರು. ಸದ್ಯದಲ್ಲಿಯೆ ಮಾಜಿ ಸಚಿವ ಹರತಾಳು ಹಾಲಪ್ಪ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಮುಂದೆ ಸಾಗರ ಕ್ಷೇತ್ರಕ್ಕೆ ಆಯ್ಕೆಯಾಗಿ ಬರುವವರು ಸಚಿವ ಸ್ಥಾನಕ್ಕಿಂತ ಶಾಸಕ ಸ್ಥಾನವೇ ಶ್ರೇಷ್ಟ ಎಂದು ಅರಿತು ಜನರ ಕೆಲಸಮಾಡುವಂತಹವರು ಬರಲಿ ಎನ್ನುವುದು ನಮ್ಮೆಲ್ಲರ ಆಶಯ ಎಂದು ತಿಳಿಸಿದರು.

ನಿಂಗಪ್ಪ ಬೆಳಂದೂರು, ಸುಧಾಕರ ಕುಗ್ವೆ ಹಾಜರಿದ್ದರು. 

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ