ಭಾರತ ಯುವಶಕ್ತಿ ಕೇಂದ್ರಿತ ದೇಶವಾಗಿ ವಿಶ್ವದೆಲ್ಲೆಡೆ ತನ್ನ ಶಕ್ತಿಸಾಮರ್ಥ್ಯದ ಮೂಲಕ ಮಾನ್ಯತೆ ಪಡೆಯುತ್ತಿದೆ-ಉಪವಿಭಾಗಾಧಿಕಾರಿ ವಿರೇಶ್ ಕುಮಾರ್

ಭಾರತ ಯುವಶಕ್ತಿ ಕೇಂದ್ರಿತ ದೇಶವಾಗಿ ವಿಶ್ವದೆಲ್ಲೆಡೆ ತನ್ನ ಶಕ್ತಿಸಾಮರ್ಥ್ಯದ ಮೂಲಕ ಮಾನ್ಯತೆ ಪಡೆಯುತ್ತಿದೆ-ಉಪವಿಭಾಗಾಧಿಕಾರಿ ವಿರೇಶ್ ಕುಮಾರ್

ಸಾಗರ : ದೇಶದಲ್ಲಿ 27 ಕೋಟಿಗೂ ಹೆಚ್ಚು ದುಡಿಯುವ ಯುವಶಕ್ತಿ ಸಿದ್ದವಾಗಿದೆ. ಭಾರತ ಯುವಶಕ್ತಿ ಕೇಂದ್ರಿತ ದೇಶವಾಗಿ ವಿಶ್ವದೆಲ್ಲೆಡೆ ತನ್ನ ಶಕ್ತಿಸಾಮರ್ಥ್ಯದ ಮೂಲಕ ಮಾನ್ಯತೆ ಪಡೆಯುತ್ತಿದೆ ಎಂದು ಉಪವಿಭಾಗಾಧಿಕಾರಿ ವಿರೇಶ್ ಕುಮಾರ್ ತಿಳಿಸಿದ್ದಾರೆ.

ಇಲ್ಲಿನ ನೆಹರೂ ಮೈದಾನದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 80ನೇ ಸ್ವಾತಂತ್ರ ದಿನೋತ್ಸವದಲ್ಲಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ, ಯುವಶಕ್ತಿ ಸದ್ಭಳಕೆಯಾಗಬೇಕು ಎಂದರು.

ಅಮೇರಿಕಾದಂತಹ ದೊಡ್ಡ ರಾಷ್ಟ್ರಗಳು ಭಾರತದ ಯುವಜನರಿಗೆ ರತ್ನಗಂಬಳಿ ಹಾಸಿ ಸ್ವಾಗತ ಕೋರುತ್ತಿದೆ. ನಮ್ಮ ಯುವಜನರು ಭಾರತದಲ್ಲಿಯೆ ತಮ್ಮ ಸಾಮರ್ಥ್ಯವನ್ನು ಒರೆಗೆ ಹೆಚ್ಚಿ ದೇಶವನ್ನು ಇನ್ನಷ್ಟು ಪ್ರಗತಿಯತ್ತ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಸಬೇಕು. ಇತಿಹಾಸ ತಿಳಿದುಕೊಳ್ಳದೆ ಹೋದಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ನಮ್ಮ ಭಾರತ ದೇಶದ ಬೆಳವಣಿಗೆಯ ಇತಿಹಾಸವನ್ನು ಯುವಜನರು ತಿಳಿದು ಕೊಳ್ಳಬೇಕು. ತನ್ಮೂಲಕ ದೇಶ ಕಟ್ಟುವ ಕಾಯಕಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ತ್ಯಾಗಬಲಿದಾನ ಮಾಡಿದವರನ್ನು ನಾವು ಸದಾ ನೆನಪಿಸಿಕೊಳ್ಳಬೇಕು. ಮಕ್ಕಳಲ್ಲಿ ರಾಷ್ಟಪ್ರೇಮವನ್ನು ಬೆಳೆಸುವ ಜೊತೆಗೆ ಅವರನ್ನು ಮಾದರಿ ಪ್ರಜೆಯಾಗಿ ರೂಪಿಸುವ ಹೊಣೆಗಾರಿಕೆ ಪೋಷಕರ ಮೇಲಿದೆ. ರಾಜ್ಯ ಸರ್ಕಾರ ನೀಡಿದ ಐದು ಗ್ಯಾರಂಟಿಯಿAದ ಜನರು ಸಮೃದ್ದ ಜೀವನ ನಡೆಸುತ್ತಿದ್ದಾರೆ. ಕ್ಷೇತ್ರಕ್ಕೆ ಐದು ಗ್ಯಾರಂಟಿಗಳಿಂದ ಈತನಕ 461 ಕೋಟಿ ರೂ. ಬಂದಿದೆ. ರಾಜ್ಯ ಸರ್ಕಾರ ಭಾರತ್ ಜೋಡೋ ಮೂಲಕ ಯುವಶಕ್ತಿ ಸದ್ಭಳಕೆಗೆ ಮುಂದಾಗಿದ್ದು ಯುವಸಮೂಹ ಇದರ ಸದುಪಯೋಗ ಪಡೆದುಕೊಳ್ಳಬೇಕು.

ಪ್ರತಿಯೊಬ್ಬರೂ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಮತದ ಹಕ್ಕು ಕಾಯ್ದುಕೊಳ್ಳಬೇಕು. ಎಲ್ಲರೂ ಒಟ್ಟಾಗಿ ದೇಶ ಕಟ್ಟುವ ಕೆಲಸದಲ್ಲಿ ನಿರತರಾಗೋಣ ಎಂದು ಸಲಹೆ ನೀಡಿದರು.

ಪೌರಯುಕ್ತ ಎಚ್.ಕೆ.ನಾಗಪ್ಪ, ಎಎಸ್‌ಪಿ ಡಾ. ಬೆನಕ ಪ್ರಸಾದ್, ಕಾರ್ಯನಿರ್ವಾಹಣಾಧಿಕಾರಿ ಮೌನೇಶ್ ಬಡಿಗೇರ್, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಇನ್ನಿತರರು ಹಾಜರಿದ್ದರು. ವಿ.ಟಿ.ಸ್ವಾಮಿ ವಂದಿಸಿದರು. ಸುಬ್ರಹ್ಮಣ್ಯ ಭಟ್ ನಿರೂಪಿಸಿದರು. ನಂತರ ಆರಕ್ಷಕ, ಗೃಹರಕ್ಷಕ, ಅರಣ್ಯ, ಎನ್.ಸಿ.ಸಿ. ಸೇರಿ ವಿವಿಧ ತುಕಡಿಗಳಿಂದ ಆಕರ್ಷಕ ಕವಾಯತು ನಡೆಯಿತು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ