ಸಾಗರದಲ್ಲಿ ಕಳ್ಳನೋಟ್ ಚಲಾವಣೆ ಎಗ್ಗಿಲ್ಲದೆ ನಡೆಯುತ್ತಿದೆ-ಸುಭಾಷ್ ಕೌತಳ್ಳಿ
ಸಾಗರದಲ್ಲಿ ಕಳ್ಳನೋಟ್ ಚಲಾವಣೆ ಎಗ್ಗಿಲ್ಲದೆ ನಡೆಯುತ್ತಿದೆ-ಸುಭಾಷ್ ಕೌತಳ್ಳಿ
ಸಾಗರ : ಕಳೆದ ಎರಡು ತಿಂಗಳಿನಿಂದ ಸಾಗರದಲ್ಲಿ ಕಳ್ಳನೋಟ್ ಚಲಾವಣೆ ಎಗ್ಗಿಲ್ಲದೆ ನಡೆಯುತ್ತಿದೆ. 5೦೦ ರೂ., 2೦೦ ರೂ. ಮತ್ತು 5೦ ರೂ. ಕಳ್ಳನೋಟು ವ್ಯಾಪಕವಾಗಿ ಓಡಾಡುತ್ತಿದೆ ಎಂದು ನೇತಾಜಿ ಸುಭಾಷ್ಚಂದ್ರ ಯುವ ಟ್ರಸ್ಟ್ ಅಧ್ಯಕ್ಷ ಸುಭಾಷ್ ಕೌತಳ್ಳಿ ತಿಳಿಸಿದ್ದಾರೆ.
ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳ್ಳನೋಟು ಚಲಾವಣೆ ಬಗ್ಗೆ ಜನಜಾಗೃತಿ ಉಂಟಾಗುತ್ತಿಲ್ಲ ಎಂದು ಹೇಳಿದರು. ಬ್ಯಾಂಕ್‌ನಲ್ಲಿ ಕಳ್ಳನೋಟು ಸಿಕ್ಕ ತಕ್ಷಣ ಹರಿದು ಹಾಕಿ ಪೊಲೀಸರಿಗೆ ತಿಳಿಸುತ್ತಾರೆ. ಆದರೆ ಕಳ್ಳನೋಟಿನ ಬಗ್ಗೆ ಜಾಗೃತಿ ಮೂಡಿಸುತ್ತಿಲ್ಲ. ನಾವು ಸಮಾಜಸೇವೆ ಎಂದು ಕಳ್ಳನೋಟಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ನೂರಾರು ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ. ನಮ್ಮದು ದುರ್ಗಾಂಬಾ ದೇವಸ್ಥಾನದ ಎದುರು ನಮ್ಮ ರೇಣುಕಾಂಬಾ ಫ್ಲವರ್ ಸ್ಟಾಲ್ ಇದ್ದು, ಪ್ತತಿದಿನ ನಮ್ಮ ಅಂಗಡಿಗೆ ಮೂರರಿಂದ ನಾಲ್ಕು ಕಳ್ಳನೋಟು ಬರುತ್ತಿದ್ದು ಯಾರು ತಂದು ಕೊಡುತ್ತಾರೆ ಎಂದು ಗೊತ್ತಾಗುತ್ತಿಲ್ಲ ಎಂದು ಹೇಳಿದರು.
ಮಳೆಗಾಲದಲ್ಲಿ ಫುಟ್‌ಪಾತ್ ವ್ಯಾಪಾರಿಗಳ ಗೋಳು ತೀರ ಸಂಕಷ್ಟದಲ್ಲಿದೆ. ಮಂದಬೆಳಕಿನಲ್ಲಿ ಯಾರೋ ಬಂದು ಕಳ್ಳ ನೋಟು ಕೊಟ್ಟು ಹೋಗುತ್ತಾರೆ. ನಾವು ಅದರ ಚಲಾವಣೆಗೆ ಹೋದಾಗ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಒಂದು ಕಡೆ ಹಣಕ ಳೆದು ಕೊಂಡ ದುಃಖವಾದರೆ ಇನ್ನೊಂದು ಕಡೆ ಪೊಲೀಸ್ ವಿಚಾರಣೆ ಆತಂಕ ಇರುತ್ತದೆ. ನಕಲಿ ನೋಟ್‌ಗಳಲ್ಲಿ ಗಾಂಧಿ ಭಾವಚಿತ್ರ, 5೦೦, 2೦೦, 5೦ರ ಸಂಖ್ಯೆ ಇರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಹಣ ಕೊಡುವಾಗ ತೆಗೆದುಕೊಳ್ಳುವಾಗ ಜಾಗೃತೆಯಿಂದ ಇರಿ. ಪೊಲೀಸ್ ಇಲಾಖೆ ಈ ಬಗ್ಗೆ ಜಾಗೃತೆ ಮೂಡಿಸಬೇಕು ಎಂದು ಮನವಿ ಮಾಡಿದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ



Comments
Post a Comment