ಈದ್ ಮಿಲಾದ್ ಮೆರವಣಿಗೆ‌ ಎಲ್ಲರ ಸಹಕಾರಕ್ಕೆ ಕಮಿಟಿಯ ಕೃತಜ್ಞತೆ

ಈದ್ ಮಿಲಾದ್ ಮೆರವಣಿಗೆ‌ ಎಲ್ಲರ ಸಹಕಾರಕ್ಕೆ ಕಮಿಟಿಯ ಕೃತಜ್ಞತೆ


ಸಾಗರ : ಈದ್‌ಮಿಲಾದ್ ಧ್ವಜಾರೋಹಣ ಸೇರಿದಂತೆ ಈದ್ ಮೆರವಣಿಗೆಯನ್ನು ಶಾಂತಿಯುತವಾಗಿ ಹಾಗೂ ಸೌಹಾರ್ದತೆಯಿಂದ ನಡೆಸಲು ಸಹಕಾರ ನೀಡಿದ ಸರ್ವರಿಗೂ ನಮ್ಮ ಸಮಿತಿ ಕೃತಜ್ಞತೆ ಸಲ್ಲಿಸುತ್ತದೆ ಎಂದು ಈದ್‌ಮಿಲಾದ್ ಸಮಿತಿ ಅಧ್ಯಕ್ಷ ಜಮೀಲ್ ರಜಾ ತಿಳಿಸಿದರು.

ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರವಾದಿ ಮಹ್ಮದ್ ಪೈಗಂಬರರ 1501ನೇ ಜನ್ಮದಿನವನ್ನು ಎಲ್ಲರೂ ಸೇರಿ ಬುಧವಾರ ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಿದ್ದೇವೆ ಎಂದು ಹೇಳಿದರು.

ಮೆರವಣಿಗೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು, ಪುರುಷರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮೆರವಣಿಗೆಯಲ್ಲಿದ್ದರು ಸುಸ್ತಾದಾಗ ಅಕ್ಕಪಕ್ಕದ ಅಂಗಡಿಗಳಲ್ಲಿ ನಿಂತಿದ್ದರು. ಆಗ ಅಂಗಡಿ ಮಾಲೀಕರು ಅವರಿಗೆ ನೆರಳು ನೀಡಿ
ಸಹಕರಿಸಿದ್ದು, ಸೌಹಾರ್ದತೆಗೆ ಸಾಕ್ಷಿಯಾಗಿದೆ. ಮೆರವಣಿಗೆ ಸಾಗಿಬಂದ ಎಲ್ಲಾ ರಸ್ತೆಗಳಲ್ಲೂ ನಮಗೆ ಸಹಕಾರ ನೀಡಿದ ಸರ್ವಧರ್ಮಿಯರಿಗೂ ನಮ್ಮ ಸಮಿತಿ ಕೃತಜ್ಞತೆ ಸಲ್ಲಿಸುತ್ತದೆ. ಜೊತೆಗೆ ಸೂಕ್ತರಕ್ಷಣಾ ವ್ಯವಸ್ಥೆ ಕಲ್ಪಿಸಿದ ರಕ್ಷಣಾ ಇಲಾಖೆಗೆ,
ವರ್ತಕರ ಸಂಘಗಳಿಗೆ, ಮುಸ್ಲೀಂ ಸಮುದಾಯದ ಎಲ್ಲರಿಗೂ, ಮಸೀದಿ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಗೋಷ್ಟಿಯಲ್ಲಿ ಸಮಿತಿಯ ವಸೀಂ, ಸೈಯದ್ ಇರ್ಫಾನ್, ಮುಬಾರಕ್ ಹಾಜರಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ