ದೊಡ್ಡಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಗ್ರಾಮ ಸುಧಾರಣಾ ಸಮಿತಿ ವತಿಯಿಂದ ಬಾಗಿನ ಅರ್ಪಣೆ

ದೊಡ್ಡಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಗ್ರಾಮ ಸುಧಾರಣಾ ಸಮಿತಿ ವತಿಯಿಂದ ಬಾಗಿನ ಅರ್ಪಣೆ


ಸಾಗರ : ಗ್ರಾಮೀಣ ಭಾಗದ ಜನರಿಗೆ ಪ್ರಕೃತಿಯೆ ದೇವರು. ಕೆರೆ, ಮರ, ಕಾಡು, ನದಿ, ಪರಿಸರದಲ್ಲಿ ನಾವು ದೇವರನ್ನು ಕಾಣುತ್ತೇವೆ ಎಂದು ಹಿರೇನೆಲ್ಲೂರು ಗ್ರಾಮಾಭಿವೃದ್ದಿ ಸಮಿತಿ ಅಧ್ಯಕ್ಷ ಉಮೇಶ್ ತಿಳಿಸಿದರು.

ತಾಲ್ಲೂಕಿನ ಹಿರೇನೆಲ್ಲೂರಿನಲ್ಲಿ ಭಾನುವಾರ ದೊಡ್ಡಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಗ್ರಾಮ ಸುಧಾರಣಾ ಸಮಿತಿ ವತಿಯಿಂದ ಬಾಗಿನ ಅರ್ಪಿಸಿ ಅವರು ಮಾತನಾಡುತ್ತಿದ್ದರು.
ಹಿರೇನೆಲ್ಲೂರು ದೊಡ್ಡಕೆರೆ ಅತ್ಯಂತ ವಿಶಾಲವಾಗಿದ್ದು ಪ್ರತಿವರ್ಷ ತುಂಬಿ ಈ ಭಾಗದ ಕೃಷಿ ಚಟುವಟಿಕೆಗಳಿಗೆ ನೆರವಾಗುತ್ತಿದೆ. ಈ ವರ್ಷ ಮಳೆ ಕೊರತೆಯಿಂದ ಕೆರೆ ತುಂಬಿದ್ದು ವಿಳಂಬಬಾಗಿದೆ. ಕೆರೆಯ ಸುತ್ತಮುತ್ತಲೂ ದೇವಸ್ಥಾನಗಳಿದ್ದು,
ಇಲ್ಲಿ ಹರಕೆ ಕಟ್ಟಿಕೊಳ್ಳುವುದರಿಂದ ಇಷ್ಟಾರ್ಥ ಸಿದ್ದಿಸುತ್ತದೆ ಎನ್ನುವ ನಂಬಿಕೆ ಇದೆ. ಸಾವಿರಾರು ಜನರು ಇಲ್ಲಿ ಬಂದು ಹರಕೆ ಕಟ್ಟಿಕೊಂಡು ಅದು ಈಡೇರಿದಾಗ ಹರಕೆ ತೀರಿಸಿದ ಉದಾಹರಣೆ ಇದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ದೇವೇಂದ್ರಪ್ಪ ಯಲಕುಂದ್ಲಿ ಮಾತನಾಡಿ, ಹಿಂದಿನವರು ಆಚರಿಸಿಕೊಂಡು ಬಂದಿರುವ ಪದ್ದತಿಗೆ ಚ್ಯುತಿ ಬಾರದಂತೆ ನಾವು ನಡೆದುಕೊಂಡು ಬಂದಿದ್ದೇವೆ. ದೊಡ್ಡಕೆರೆ ಭರ್ತಿಯಾಗಿ ಕೋಡಿ ಬಿದ್ದಾಗ ಬಾಗಿನ ನೀಡುವುದು ನಮ್ಮ ಸಂಪ್ರದಾಯ. ಇಲ್ಲಿನ ದೇವಸ್ಥಾನಗಳ ಬಗ್ಗೆ ಸಹ ಪೂಜ್ಯಭಾವನೆಯಿದ್ದು ಭಕ್ತರ ಬಯಕೆ ಈಡೇರಿದ ಅನೇಕ ಉದಾಹರಣೆ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಮಚಂದ್ರ ಮೇಸ್ತಿç, ಸತೀಶ್ ಅಂಗಡಿ, ಗುತ್ತಿ ಸಂತೋಷ್, ಲೋಕೇಶ್ ನೀರ್ಗುಡಿ, ಶ್ರೀಧರ್, ಚಂದ್ರು, ಸಿದ್ದಪ್ಪ, ನಾರಾಯಣಪ್ಪ, ರಾಜಶೇಖರ ಇಇನ್ನಿತರರು ಹಾಜರಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ