ಅಗ್ರಹಾರದ ವ್ಯಕ್ತಿ ಆಚಾರಕ್ಕೆ ಇರದೇ ವಿಚಾರಕ್ಕೆ ಬಂದು ಜನಚಳುವಳಿಯಲ್ಲಿ ಭಾಗಿಯಾಗಿದ್ದು ಮೇರುವ್ಯಕ್ತಿಗಳಿಂದ ಮಾತ್ರ ಸಾಧ್ಯ ಎಂದು ಸಾಗರದ ದಲಿತ, ಕಾರ್ಮಿಕ ಹೋರಾಟಗಾರ ಎಸ್. ಎಸ್. ನಾಗರಾಜ್'ರವರ ಬಗ್ಗೆ ಮತ್ತು ಜನಚಳುವಳಿಗಳ ಬಗ್ಗೆ ಮಾತನಾಡಿದ ಸರಕಾರಿ ಪದವಿ ಕಾಲೇಜಿನ ಪ್ರಾದ್ಯಾಪಕ ಸುರೇಶ್ ಜಂಬಾನಿ
ಅಗ್ರಹಾರದ ವ್ಯಕ್ತಿ ಆಚಾರಕ್ಕೆ ಇರದೇ ವಿಚಾರಕ್ಕೆ ಬಂದು ಜನಚಳುವಳಿಯಲ್ಲಿ ಭಾಗಿಯಾಗಿದ್ದು ಮೇರುವ್ಯಕ್ತಿಗಳಿಂದ ಮಾತ್ರ ಸಾಧ್ಯ ಎಂದು ಸಾಗರದ ದಲಿತ, ಕಾರ್ಮಿಕ ಹೋರಾಟಗಾರ ಎಸ್. ಎಸ್. ನಾಗರಾಜ್'ರವರ ಬಗ್ಗೆ ಮತ್ತು ಜನಚಳುವಳಿಗಳ ಬಗ್ಗೆ ಮಾತನಾಡಿದ ಸರಕಾರಿ ಪದವಿ ಕಾಲೇಜಿನ ಪ್ರಾದ್ಯಾಪಕ ಸುರೇಶ್ ಜಂಬಾನಿ
ಸಾಗರ ; ನಾಗರೀಕ ಸಮಾಜದಲ್ಲಿ ಅನಾಗರೀಕತೆ ಇರಬಾರದು. ಜನಗಳಿರುವ ದೇಶದಲ್ಲಿ ಜಾತಿ ಆಧಾರದಲ್ಲಿ ರಾಜಕಾರಣ ಮಾಡುವ ಸಂದರ್ಭದಲ್ಲಿ ಆಡಳಿತದಿಂದ ಆಗುವ ಅನ್ಯಾಯಗಳನ್ನು ಎತ್ತಿ ತೋರಿಸಲು ಜನಚಳುವಳಿಗಳಲ್ಲಿ ಅಗತ್ಯ ಎಂದು ಸರಕಾರಿ ಪದವಿ ಕಾಲೇಜಿನ ಪ್ರಾದ್ಯಾಪಕ ಸುರೇಶ್ ಜಂಬಾನಿ ಹೇಳಿದರು.
ಇಂದು ಸಾಗರದ ಸರಕಾರಿ ನೌಕರರ ಭವನದ ಪಕ್ಕದಲ್ಲಿ ಇರುವ ಡಾ. ಬಾಬಾಸಾಹೇಬ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಮುನ್ನಡೆ, ಸಾಗರ ಮತ್ತು ಕಲಾ ಅನ್ವೇಷಣೆ ಪತ್ರಿಕಾ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ದಲಿತ ಕಾರ್ಮಿಕ ಪರ ಹೋರಾಟಗಾರ, ಮಾಜಿ ಪುರಸಭಾ ಸದಸ್ಯರಾಗಿದ್ದ ದಿ।। ಎಸ್.ಎಸ್. ನಾಗರಾಜ್ ನೆನಪಿನ ಸಂಚಿಕೆ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಜನ ಚಳುವಳಿಗಳು ಮತ್ತು ಸಾಮಾಜಿಕ ಬದಲಾವಣೆಯ ಬಗ್ಗೆ ವಿಚಾರ ಸಂಕಿರಣದ ಬಗ್ಗೆ ಮಾತನಾಡುತ್ತ, ಬ್ರಾಹ್ಮಣ ವಕೀಲರಾದ ಕುದ್ಮುಲ್ ರಂಗರಾವ್ ಅವರನ್ನು ಉದಾಹರಿಸಿದ ಅವರು ಜನಚಳುವಳಿಗಳಿಂದ ವಿಧಾನಸೌಧದಲ್ಲಿ ಆಡಳಿತ ಮಾಡುವವರಿಗೆ ಬಿಸಿ ತಾಗಿದರೆ ಜನತೆಗೆ ಬೇಕಾದ ಅನುಕೂಲತೆಗಳು ಸಿಗುತ್ತದೆ. ಈ ಕಾರಣದಿಂದಲೇ ಸಾಗರ ಭೂಸುಧಾರಣೆ ಕಾಯ್ದೆ ಬರಲು ಕಾರಣ ಆಯಿತೆಂದು ಹೇಳಿದರು.
ಇನ್ನೂ ವಿದೇಶದಲ್ಲಿಯೂ ಇಂತಹ ಚಳುವಳಿಗಳು ನಡೆದಿವೆ ಎಂದರಲ್ಲದೇ, ಕುವೆಂಪು ಅವರ ರಕ್ತ ಬಿಂದು ಸೌಖ್ಯ ಸಿಂಧುವನ್ನು ಹೋರಾಟದ ಭಾಗದ ಮಾತದು ಎಂದು ಹೇಳಿದರು.
ದಿ. ಎಸ್.ಎಸ್. ನಾಗರಾಜ್ ಚಂದ್ರಗುತ್ತಿ ಬೆತ್ತಲೆಸೇವೆಯ ವಿರುದ್ದ ಹೋರಾಟಕ್ಕೆ ಇಳಿದವರು. ಈ ಹೋರಾಟ ಅಳುವವರ ಕಣ್ಣಿಗೆ ಬೀಳುವಂತೆ ಮಾಡುವ ಹೋರಾಟವಾಯಿತು. ಪರಿಣಾಮ 11ವರುಷಗಳ ಜಾತ್ರೆ ನಡೆಯಲಿಲ್ಲ. ಇಂದು ಜಾತ್ರೆ ನಡೆಯುತ್ತಿಲ್ಲ. ಜಾತ್ರೆ ಮರ ಆರಂಭವಾದಾಗ ಬೆತ್ತಲೆ ಸೇವೆ ನಿಂತಿತ್ತು ಎಂದು ಹೇಳಿದರು.
ಬದಲಾವಣೆಯಲ್ಲಿ ಚಳುವಳಿಗಳ ಪಾತ್ರ ಬಹುಮುಖ್ಯ, ಶರಣರು, ದಾರ್ಶನಿಕರಿಂದ ಹಿಡಿದು ಅಂಬೇಡ್ಕರ್ ಸಹ ಚಳುವಳಿಗಳನ್ನು ಬೆಂಬಲಿಸಿ ಜನತೆಗೆ ನ್ಯಾಯ ಸಿಗಲು ಶ್ರಮಿಸಿದರವರು ಎಂದು ಹೇಳುತ್ತಾ, ಚೌಡರ್ ಕೆರೆಯ ಘಟನೆ ವಿವರಿಸಿದರು.
ದಲಿತ ರೈತ ಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಹೆಚ್.ಬಿ. ರಾಘವೇಂದ್ರ ಮಾತನಾಡಿ, ಕಲಾನ್ವೇಷಣ ಪತ್ರಿಕೆ ಜೆನ್-ಜೀ ನಡೆಸಿರುವ ಪ್ರತಿಭಟನೆಯ ಹೊತ್ತಿನಲ್ಲಿ ಸಾಗರದಂತಹ ಊರಿನಲ್ಲಿ ಎಸ್.ಎಸ್. ನಾಗರಾಜ್ ಅವರಂತಹ ಹೋರಾಟಗಾರರ ನೆನಪಿನ ಸಂಚಿಕೆ ಹೊರತಂದಿರುವುದು ತಾಳೆ ಹೊಂದುವ ಸಂಗತಿ ಎಂದು ಹೇಳಿದರು.
ಮಾಡಿದ ಹೋರಾಟ ಮತ್ತು ಕೆಲಸಗಳು ನೆನಪು ಮರುಕಳಿಸುವಂತೆ ಇರಬೇಕು. ಅದು ನಾಗರಾಜ ಅವರಲ್ಲಿತ್ತು ಎಂದು ಹೇಳಿದರು. ಇನ್ನೂ ಕರ್ನಾಟಕ ಮುನ್ನಡೆ ಸಂಘಟನೆ ಹಳೇ ಗೆಳೆಯರ ಸಂಘಟನೆ ಆಗಿದ್ದು, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸ ಮಾಡುತ್ತದೆ. ರೈತ ಮತ್ತು ದಲಿತ ಸಂಘಟನೆಗಳು ಗುಂಪಾಗಿ ಹೋಗಿದ್ದರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿರುವುದು ಸಂತಸ, ಮಾವೋತ್ಸೆ ತುಂಗರು ಚಳುವಳಿಯ ಬಗ್ಗೆ ಹೇಳಿದ ವ್ಯಾಖ್ಯಾನ ನೆನಪಿಸಿದರು.
ಮುಖ್ಯ ಅತಿಥಿಗಳಾಗಿ ಬಂದಿದ್ದ ಪ್ರೊ|| ಹೆಚ್. ರಾಚಪ್ಪ, ಮಾಜಿ ನಗರಸಭಾ ಸದಸ್ಯರಾದ ಲಲಿತಮ್ಮ ಮಾತನಾಡಿದರು.ದಲಿತ ಚಳುವಳಿ ಮತ್ತು ದಿ. ಎಸ್. ಎಸ್. ನಾಗರಾಜ್ ಬಗ್ಗೆ ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೆಡ್ರಿಕ್ ಸಾಲ್ಡಾನ ವಹಿಸಿ ಮಾತನಾಡಿದರು. ಅಧ್ಯಕ್ಷತೆ ಕಲಾನ್ವೇಷಣ ಪತ್ರಿಕೆಯ ಸಂಪಾದಕ ಮೋಹನ್‌ಮೂರ್ತಿ ವಹಿಸಿದ್ದರು.
ಆರಂಭದಲ್ಲಿ ವಸಂತಕುಗ್ವೆ ಮತ್ತು ಸಂಗಡಿಗರು ಕ್ರಾಂತಿಗೀತೆ ಹಾಡಿದರು. ಎನ್. ಶಿವಾನಂದಕುಗ್ವೆ ಪ್ರಾಸ್ತಾವಿಕ ಭಾಷಣ ಮಾಡಿದರು. ವಿ. ಶಂಕರ್ ಕಾರ್ಯಕ್ರಮ ನಿರೂಪಣೆ ಮಾಡಿದರು. ವಂದನಾರ್ಪಣೆಯನ್ನು ನಾರಾಯಣ ಗೋಳಗೋಡು ಮಾಡಿದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ





Comments
Post a Comment