ದಿ. ನಾರಾಯಣ ಅರಮನೇಕೇರಿ ಅವರಿಗೆ ಶ್ರದ್ಧಾಂಜಲಿ ಸಭೆ

 ದಿ. ನಾರಾಯಣ ಅರಮನೇಕೇರಿ ಅವರಿಗೆ ಶ್ರದ್ಧಾಂಜಲಿ ಸಭೆ

1. ಕಾಂಗ್ರೇಸ್ ಕಚೇರಿ, ಸಾಗರ

  • ಸಾಗರದ ಕಾಂಗ್ರೇಸ್ ಕಚೇರಿಯಲ್ಲಿ ಇಂದು ನಿನ್ನೆ ದಿನ ನಿಧನರಾದ ನಾರಾಯಣ ಅರಮನೇಕೇರಿ ಇವರಿಗೆ ಶ್ರದ್ಧಾಂಜಲಿ ‌ಸಭೆಯನ್ನು‌ ಇಂದು‌ ಕಾಂಗ್ರೇಸ್ ಕಚೇರಿಯಲ್ಲಿ‌ ಆಚರಣೆ ಮಾಡಲಾಯಿತು.*

  • ನಾರಾಯಣ ಅರಮನೇಕೇರಿ ಅವರ ಕುರಿತು ಎಲ್.‌ ಚಂದ್ರಪ್ಪ, ಉಷಾ ಎನ್. ಲಲಿತಮ್ಮ,‌ಎನ್., ಮೈಕೆಲ್ ಡಿಸೋಜಾ, ಸುರೇಶಬಾಬು, ವಿ.‌ಶಂಕರ್ ಮಾತನಾಡಿದರು.

  • ಕಾಂಗ್ರೇಸ್'ನ ಪ್ರಮುಖ ಕಾರ್ಯಕರ್ತರು ಹಾಜರಿದ್ದರು.

2. ಶ್ರೀಗಣಪತಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್, ಸಾಗರ


ಸಾಗರ ಶ್ರೀಗಣಪತಿ‌ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ನಿರ್ದೇಶಕರಾದ ನಾರಾಯಣ ಅರಮನೇಕೇರಿ ಅವರು ನಿನ್ನೆ ದಿನ ನಿಧನರಾದರು.

ಈ ಸಂಬಂಧ ಇ‌ಂದು ಗಣಪತಿ ಬ್ಯಾಂಕಿನಲ್ಲಿ ದಿ. ನಾರಾಯಣ ಅರಮನೆಕೇರಿ ಅವರಿಗೆ ಶ್ರದ್ದಾಂಜಲಿ ಸಭೆ ನಡೆಸಲಾಯಿತು.

ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಅಧ್ಯಕ್ಷರಾದ ಸರಸ್ವತಿ ನಾಗರಾಜ್, ಉಪಾಧ್ಯಕ್ಷರಾದ ಮೋಹನ್ ವೈ. ನಿರ್ದೇಶಕ ಮತ್ತು ವಿ.‌‌ ಶಂಕರ್ ನಾರಾಯಣ ಅರಮನೆಕೇರಿ ಅವರ ಬಗ್ಗೆ ಮಾತನಾಡಿದರು.

ಬಸಲಿಂಗಯ್ಯ, ಮಧುಮಾಲತಿ, ಶ್ರೀನಿವಾಸ್ ಆರ್., ಎಸ್.ವಿ. ಕೃಷ್ಣಮೂರ್ತಿ, ವಿ. ಗುರು, ರಮೇಶ್ ಎಸ್. ಕಲ್ಲಪ್ಷ, ವಿನಾಯಕರಾವ್, ಬ್ಯಾಂಕಿನ ಸಿಇಒ ಸುಧಾ, ತೇಜಸ್ವಿ ಹಾಜರಿದ್ದು, ಬ್ಯಾಂಕಿನ ನಿರ್ದೇಶಕರ ನಿಧನ ತುಂಬಲಾರದ ನಷ್ಟ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

3. ಶ್ರೀಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಟಾನ, ಸಾಗರ


ಅಗಲಿದ ಜನಾನುರಾಗಿ ಸಮಾಜ ಸೇವಕ, ಹಾಗೂ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ನಿರ್ದೇಶಕರು, ಶ್ರೀ ಗಣಪತಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕರು, ಮಾಜಿ ಪುರಸಭಾ ಸದಸ್ಯ,ಎನ್ ನಾರಾಯಣ್ ಅರಮನೆ ಕೇರಿ ರವರ ಆತ್ಮಕ್ಕೆ ಶಾಂತಿ ಕೋರಿ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಪದಾಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸಿದರು 

ಈ ಸಂದರ್ಭದಲ್ಲಿ ಅಕಾಲಿಕವಾಗಿ ಮರಣ ಹೊಂದಿದ  ನಾರಾಯಣ ಅರಮನೆ ಕೇರಿ ರವರ ವ್ಯಕ್ತಿತ್ವದ ಬಗ್ಗೆ ಉಪಸ್ಥಿತರಿದ್ದ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ನಿರ್ದೇಶಕರು ಮಾತನಾಡಿ ನಾರಾಯಣ ಅರಮನೆ ಕೇರಿ ಯವರು ಅತ್ಯಂತ ಸರಳ ಸ್ವಭಾವದ ಒಳ್ಳೆಯ ವ್ಯಕ್ತಿಯಾಗಿದ್ದು ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ತಮ್ಮ ಸೇವೆಯನ್ನು ಸಲ್ಲಿಸುವ ಮೂಲಕ ಚಿರಪರಿಚಿತರು ಮತ್ತು ಸೌಮ್ಯ ಸ್ವಭಾವದ ವ್ಯಕ್ತಿಯಾಗಿ ತಮ್ಮ ಸೇವೆಯನ್ನು ಮಾಡಿಕೊಂಡು ಬಂದವರು ಅವರ ಮರಣದಿಂದ ಇಂದಿನ ಸಮಾಜ ಸರಳ ಸಜ್ಜನಿಕೆಯ ಒಬ್ಬ ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡು ತುಂಬಲಾದ ನಷ್ಟ ಉಂಟಾಗಿದೆ ಎಂಬ ಮಾತುಗಳನ್ನು ಆಡಿದರು, ಈ ಸಂದರ್ಭದಲ್ಲಿ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ  ಅಧ್ಯಕ್ಷ ನಾಗರಾಜ ಎಂ, ಉಪಾಧ್ಯಕ್ಷ ಶ್ರೀನಿವಾಸ್ ಮೇಸ್ತ್ರಿ ಪ್ರಧಾನ ಕಾರ್ಯದರ್ಶಿ ಆನಂದ್ ಎಂ ಡಿ ,ಕೋಶಾಧ್ಯಕ್ಷ ವಿ .ಶಂಕರ್ ಕಾರ್ಯದರ್ಶಿ ಡಿಶ್ ಗುರು, ನಿರ್ದೇಶಕರುಗಳಾದ ನಿತ್ಯಾನಂದ ಶೆಟ್ಟಿ, ಎಸ್ ವಿ, ಕೃಷ್ಣಮೂರ್ತಿ ,ರಾಮಪ್ಪ ಜಿ,  ಚಂದ್ರಕಾಂತ್, ಸುಂದರ ಸಿಂಗ್, ಅಶೋಕ್, ಮುರುಳಿ, ಶ್ರೀಮತಿ ಜ್ಯೋತಿ ಶಶಿಧರ್,  ಜಯಂತಿ ಗಣಪತಿ,ಕಚೇರಿ ಸಿಬ್ಬಂದಿಗಳಾದ ಅರುಣ್ ಕುಮಾರ್, ಸಂದೀಪ, ಮಧು ಸೇರಿದಂತೆ ಪ್ರಮುಖರಿದ್ದರು,

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ