ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪು-ವೃಕ್ಷಲಕ್ಷ ಆಂದೋಲನ ಕರ್ನಾಟಕದ ಸಂಚಾಲಕ ವೆಂಕಟೇಶ್ ಕವಲಕೋಡು ಕೃತಜ್ಞತೆ

ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪು-ವೃಕ್ಷಲಕ್ಷ ಆಂದೋಲನ ಕರ್ನಾಟಕದ ಸಂಚಾಲಕ ವೆಂಕಟೇಶ್ ಕವಲಕೋಡು ಕೃತಜ್ಞತೆ


ಸಾಗರ : ಭಾರತ ಸರ್ಕಾರದ ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿ ಪರಿಸರದ ಭವಿಷ್ಯಕ್ಕೆ ಅನ್ವಯವಾಗುವಂತೆ ಮರುಜೀವ ಸೃಷ್ಟಿಮಾಡಿದೆ. ಪರಿಸರ ಸಂಬಂಧಿ ಅನುಮತಿ ಪಡೆಯದೆ ಕೈಗೆತ್ತಿಕೊಂಡಿರುವ ಯೋಜನೆಗಳಿಗೆ ಅನುಮತಿ ನೀಡಲು ಅವಕಾಶ ಕಲ್ಪಿಸಿ ಕೇಂದ್ರ ಸರ್ಕಾರ 2021ರಲ್ಲಿ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.


ಕರ್ನಾಟಕದ ಪಶ್ಚಿಮಘಟ್ಟದ ಅತಿಸೂಕ್ಷö್ಮ ಪ್ರದೇಶಗಳಲ್ಲಿ ಕೈಗೆತ್ತಿಕೊಳ್ಳುವ ನದಿತಿರುವು ಯೋಜನೆ, ಶರಾವತಿ ಭೂಗತ ಪಂಪ್ಡ್ ಸ್ಟೋರೇಜ್, ಬೇಸೂರು ಅಣು ವಿದ್ಯುತ್ ಸ್ಥಾವರ, ಆಗುಂಬೆ ಟೆನಲ್ ರಸ್ತೆ, ಕೊಡಚಾದ್ರಿ ರೋಪ್‌ವೇ ಯೋಜನೆ, ತಾಳಗುಪ್ಪ-ಹೊನ್ನಾವರ ರೈಲ್ವೆ, ಹುಬ್ಬಳ್ಳಿ-ಅಂಕೋಲ ರೈಲ್ವೆ, ಜೋಗ ಜಲಪಾತದ ಪಿಡಬ್ಲೂಡಿ ಪ್ರವಾಸಿ ಮಂದಿರ ನೆಲಸಮ ಮಾಡಿ ಪಂಚತಾರಾ ಹೋಟೆಲ್ ನಿರ್ಮಾಣದಂತಹ
ಯೋಜನೆಗಳಿಗೆ ಪರಿಸರ ಸಂರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನ್ಯಾಯಪೀಠ ಮಹತ್ವದ ತೀರ್ಪು ನೀಡಿದೆ.

ಇಂತಹ ಮಹತ್ವಾಕಾಂಕ್ಷಿ ತೀರ್ಪು ನೀಡಿದ ಸಂವಿಧಾನ ಪೀಠಕ್ಕೆ ದೇಶದ ಎಲ್ಲ ಪರಿಸರ ಕಾರ್ಯಕರ್ತರು ಮತ್ತು ಮತದಾನದ ಹಕ್ಕು ಇಲ್ಲದ ವಿವಿಧ ಜೀವ ಸಂಕುಲಗಳು ಹೋರಾಟ ರೂಪಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿ ಜಯಗಳಿಸಿದೆ. ವನಶಕ್ತಿ ಮತ್ತು ಇತರೆ ಸ್ವಯಂಸೇವಾ ಸಂಸ್ಥೆಗಳಿಗೆ ರಾಜ್ಯ ಜೀವವೈವಿಧ್ಯ ಮಂಡಳಿ ನಿಕಟಪೂರ್ವ ಸದಸ್ಯ, ವೃಕ್ಷಲಕ್ಷ ಆಂದೋಲನ ಕರ್ನಾಟಕದ ಸಂಚಾಲಕ ವೆಂಕಟೇಶ್ ಕವಲಕೋಡು ಕೃತಜ್ಞತೆ ಸಲ್ಲಿಸಿದ್ದಾರೆ.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ