PMJF ಲಯನ್ ಎಂ ಬಿ ಪುಟ್ಟಸ್ವಾಮಿ ಇವರ ಹುಟ್ಟುಹಬ್ಬದ ಪ್ರಯುಕ್ತ ವಿನೋಬನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಅನ್ನ ದಾಸೋಹ ಕಾರ್ಯಕ್ರಮ

PMJF ಲಯನ್ ಎಂ ಬಿ ಪುಟ್ಟಸ್ವಾಮಿ ಇವರ ಹುಟ್ಟುಹಬ್ಬದ ಪ್ರಯುಕ್ತ ವಿನೋಬನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಅನ್ನ ದಾಸೋಹ ಕಾರ್ಯಕ್ರಮ

ಸಾಗರ ; ಲಯನ್ಸ್ ಕ್ಲಬ್, ಸಾಗರ ಇಲ್ಲಿನ ಹಿರಿಯ ಸದಸ್ಯರಾದ PMJF ಲಯನ್ ಎಂ ಬಿ ಪುಟ್ಟಸ್ವಾಮಿ ಇವರ ಹುಟ್ಟುಹಬ್ಬದ ಪ್ರಯುಕ್ತ ವಿನೋಬನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಅನ್ನ ದಾಸೋಹ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಯಿತ್ತು. 

ಕಾರ್ಯಕ್ರಮದ ಪ್ರಾಯೋಜಕತ್ವ ವನ್ನು PMJF ಲಯನ್ ಪುಟ್ಟಸ್ವಾಮಿ ಇವರು ಮಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ ಜೆ ಎಫ್ ಲಯನ್ ಸುಧೀರ್ ಶೆಟ್ಟಿ ವಹಿಸಿಕೊಂಡಿದ್ದರು. 

317H ನ ದ್ವಿತೀಯ ಉಪ ಗೌರ್ನರ್ ಅಶ್ವಿನಿ ಕುಮಾರ್, 317H ಕ್ಯಾಬಿನೆಟ್ ಮೆಂಬರ್ ಪ್ರಭಾವತಿ ಶ್ರೀಧರ್, PMJF ಲಯನ್ ಈ. ಡಿ. ಶ್ರೀಧರ್ ಸಾಗರ ಕ್ಲಬ್ ನ ಕಾರ್ಯದರ್ಶಿ ಲಯನ್ ಸಂತೋಷ್ ಫ್ರಾನ್ಸಿಸ್, ಖಜಾಂಚಿ ಲಯನ್ ಪ್ರಭಾಕರ್ ಜೈನ್, ನಿರ್ದೇಶಕರುಗಳಾದ ಲಯನ್ ನಾಗರಾಜ್ ಗುಡ್ಡೆಮನೆ, ಲಯನ್ ಸದಾನಂದ ಶೆಟ್ಟಿ ಹಾಗೂ ನೂತನ ಸದಸ್ಯರಾದ ಲಯನ್ ಆದರ್ಶ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಕಾರ್ಯದರ್ಶಿ ಲಯನ್ ಸಂತೋಷ್ ಫ್ರಾನ್ಸಿಸ್ ನಿರೂಪಿಸಿದರು. ಪಿ ಎಂ ಜೆ ಎಫ್ ಲಯನ್ ಇ ಡಿ ಶ್ರೀಧರ್ ಹಾಗೂ ಎಮ್ ಜೆ ಎಫ್ ಲಯನ್ ಸುದೀರ್ ಶೆಟ್ಟಿ ಹಿರಿಯ ಸದಸ್ಯರಿಗೆ ಹುಟ್ಟು ಹಬ್ಬದ ಶುಭಕಾಮನೆಗಳನ್ನು ಕೋರಿದರು.

ಅವರು ಲಯನ್ಸ್ ಕ್ಲಬ್ ಸಾಗರಕ್ಕೆ ಮಾಡಿರುವ ಸೇವ ಕಾರ್ಯಗಳ ಬಗ್ಗೆ ತಿಳಿಸಿ ಕ್ಲಬ್  ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ವಿನೋಬನಗರ ಶಾಲೆಯ ಮುಖ್ಯ ಶಿಕ್ಷಕರು ಶಿಕ್ಷಕರು ಹಾಗೂ ಮಕ್ಕಳು ಹಾಜರಿದ್ದರು.

ಸುದ್ದಿ ಮತ್ತು ಜಾಹೀರಾತು ನೀಡಲು-7204641701

ಮೀನಿನಹೆಜ್ಜೆ ನ್ಯೂಸ್, ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ