ಸ್ಥಳೀಯ ಸಂಸ್ಥೆ ಚುನಾವಣೆ ನಡೆಸದೆ ಇರುವುದರಿಂದ ಜಿಲ್ಲೆಗೆ ಬರಬೇಕಾಗಿದ್ದ ಸುಮಾರು 200 ಕೋಟಿ ರೂ. ಕೇಂದ್ರದ ಅನುದಾನ ತಪ್ಪಿ ಹೋಗಿದೆ-ತೀ. ನ. ಶ್ರೀನಿವಾಸ್
ಸ್ಥಳೀಯ ಸಂಸ್ಥೆ ಚುನಾವಣೆ ನಡೆಸದೆ ಇರುವುದರಿಂದ ಜಿಲ್ಲೆಗೆ ಬರಬೇಕಾಗಿದ್ದ ಸುಮಾರು 200 ಕೋಟಿ ರೂ. ಕೇಂದ್ರದ ಅನುದಾನ ತಪ್ಪಿ ಹೋಗಿದೆ-ತೀ. ನ. ಶ್ರೀನಿವಾಸ್
ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲಿ. ಇಲ್ಲವಾದಲ್ಲಿ ಜನಾಕ್ರೋಶ ಸರ್ಕಾರದ ವಿರುದ್ದ ಸ್ಪೋಟಗೊಳ್ಳುತ್ತದೆ
ಸಾಗರ : ಸ್ಥಳೀಯ ಸಂಸ್ಥೆ ಚುನಾವಣೆ ನಡೆಸದೆ ಇರುವುದರಿಂದ ಜಿಲ್ಲೆಗೆ ಬರಬೇಕಾಗಿದ್ದ ಸುಮಾರು 200 ಕೋಟಿ ರೂ. ಕೇಂದ್ರದ ಅನುದಾನ ತಪ್ಪಿ ಹೋಗಿದೆ. ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ ಬಂದ 1200 ಕೋಟಿ ರೂ. ಅನುದಾನದ ಕಾಮಗಾರಿಯಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್ ತಿಳಿಸಿದರು.
ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ 224 ಶಾಸಕರೂ ತಮ್ಮ ಕ್ಷೇತ್ರದಲ್ಲಿ ಏಕ ಚಕ್ರಾಧಿಪತ್ಯ ಸ್ಥಾಪಿಸಿಕೊಂಡು ಕುಳಿತಿದ್ದು ಯಾರಿಗೂ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆ ನಡೆಯುವುದು ಬೇಕಾಗಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಅಧಿಕಾರ ಅವಧಿ ಮುಗಿದು ಐದೂವರೆ ವರ್ಷ, ಗ್ರಾಮ ಪಂಚಾಯ್ತಿ ಅವಧಿ ಮುಗಿದು ಆರು ತಿಂಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರ ಅವಧಿ ಮುಗಿದು ಒಂದು ವರ್ಷವಾಯಿತು. ಪಂಚಾಯತ್‌ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಮಂಡಳಿ ಇಲ್ಲ ಎಂದು ಕೇಂದ್ರ ಸರ್ಕಾರ ಯಾವುದೇ ಅನುದಾನ ಕೊಡುತ್ತಿಲ್ಲ. ಇದರಿಂದ ಅಭಿವೃದ್ದಿ ಹಿನ್ನಡೆಯಾಗಿದೆ. 15ನೇಹಣಕಾಸು ಹಣ ಕಳೆದು ಕೊಂಡಿದ್ದು ಈಗ 16ನೇ ಹಣಕಾಸು ಅನುದಾನ ಸಹ ಕೈತಪ್ಪುವ ಸಾಧ್ಯತೆ ಇದ್ದು, ಕೇಂದ್ರ ಸರ್ಕಾರ ಚುನಾವಣೆ ನಡೆಸಿ ಆಡಳಿತ ಮಂಡಳಿ ಇಲ್ಲದೆ ಇರುವುದರಿಂದ ಅನುದಾನ ಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಚುನಾವಣೆ ಪ್ರಕ್ರಿಯೆ ಕುರಿತು ನ್ಯಾಯಾಂಗ ಇನ್ನಷ್ಟು ಕಠಿಣ ಆದೇಶ ಸರ್ಕಾರಕ್ಕೆ ನೀಡುವ ಅಗತ್ಯವಿದೆ ಎಂದು ಹೇಳಿದರು.
ಹಿಂದೆ ಹದಿನೈದು ಇಪ್ಪತ್ತು ವರ್ಷ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿರಲಿಲ್ಲ. ರಾಜೀವ್ ಗಾಂಧಿ ಪ್ರಧಾನಿಯಾದ ಬಳಿಕೆ ಸೂಕ್ತ ಕಾನೂನು ಜಾರಿಗೆ ತಂದು 5ವರ್ಷಕ್ಕೆ ಕಡ್ಡಾಯವಾಗಿ ಚುನಾವಣೆ ನಡೆಸುವುದು, ಮಹಿಳಾ ಮೀಸಲಾತಿ ಇನ್ನಿತರೆ ಕುರಿತು ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಕಾಂಗ್ರೇಸ್ ಪಕ್ಷ ರಾಜ್ಯದಲ್ಲಿ ತಮ್ಮ ನಾಯಕ ರಾಜೀವ್ ಗಾಂಧಿ ಅವರ ಆದೇಶವನ್ನು ಧಿಕ್ಕರಿಸುವ ಮೂಲಕ ಅವರಿಗೆ ಅವಮಾನ ಮಾಡಿದೆ. ಯುದ್ದ, ಪ್ರಕೃತಿ ವಿಕೋಪ ಇದ್ದಾಗ ಮಾತ್ರ ಚುನಾವಣೆ ಮುಂದೂಡಬಹುದು ಎಂಬ ಕಾನೂನು ಇದೆ. ರಾಜ್ಯ ಸರ್ಕಾರಗಳು ನಿಗಧಿತ ಅವಧಿಗೆ ಚುನಾವಣೆ ನಡೆಸದೆ ಇರುವುದು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ದ್ರೋಹವಾಗಿದೆ. ಚುನಾಯಿತ ಸದಸ್ಯರು ಇಲ್ಲದೆ ಇರುವುದರಿಂದ ಪಂಚಾಯತ್ ರಾಜ್ , ನಗರ ಸ್ಥಳೀಯ ಸಂಸ್ಥೆಗಳಲ್ಲಿ ದೊಡ್ಡಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ. ಕಳಪೆ ಕಾಮಗಾರಿ ಕುರಿತು ವ್ಯಾಪಕ ದೂರುಗಳಿವೆ. ತಕ್ಷಣ ಸರ್ಕಾರ ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯ್ತಿ ಮತ್ತು ನಗರಸಭೆ, ಪುರಸಭೆ, ಪಟ್ಟಣbಪಂಚಾಯ್ತಿ ಚುನಾವಣೆ ನಡೆಸಲಿ. ಇಲ್ಲವಾದಲ್ಲಿ ಜನಾಕ್ರೋಶ ಸರ್ಕಾರದ ವಿರುದ್ದ ಸ್ಪೋಟಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿ ಮತ್ತು ಜಾಹಿರಾತು ನೀಡಲು - 7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment