ಸಾಗರ ನಗರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ-ಶಾಸಕ ಗೋಪಾಲಕೃಷ್ಣ ಬೇಳೂರು
ಸಾಗರ ನಗರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ-ಶಾಸಕ ಗೋಪಾಲಕೃಷ್ಣ ಬೇಳೂರು
ನಮ್ಮ ಪಾಲಿಗೆ ಶಾಸಕರು ಸಚಿವರಾಗದಿದ್ದರೂ ಅವರು ನಮಗೆ ಸಚಿವರೇ-ಕೆ. ವಿ. ಜಯರಾಮ್
ಸಾಗರ : ನಗರ ಅಭಿವೃದ್ದಿಗೆ ಪೂರಕವಾಗಿ ನೀಡಿದ ಎಲ್ಲಾ ಮನವಿಗೂ ಸ್ಪಂದಿಸಿದ್ದೇನೆ. ಕ್ಷೇತ್ರದ ಸಮಗ್ರ ಅಭಿವೃದ್ದಿ ಗಮನದಲ್ಲಿ ಇರಿಸಿಕೊಂಡು ಕೆಲಸ ಮಾಡುತ್ತಿದ್ದೇನೆ. ಅತಿಹೆಚ್ಚು ಅನುದಾನ ಬೇರೆಬೇರೆ ಮೂಲಗಳಿಂದ ತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ನೆಹರೂ ಮೈದಾನದಲ್ಲಿ ನಗರಸಭೆ ವತಿಯಿಂದ ನಿರ್ಮಿಸಿದ ಸರ್ವಋತು ವಾಕಿಂಗ್ ಟ್ರಾಕ್ ಉದ್ಘಾಟನೆ ಮಾಡಿ, ವಾಯುವಿಹಾರಿಗಳ ಸಂಘ ನೀಡಿದ ಮನವಿ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ನೆಹರೂ ಮೈದಾನದಲ್ಲಿ ಬೆಳಿಗ್ಗೆ ಮತ್ತು ಸಂಜೆ ಹಿರಿಯರು ಆರೋಗ್ಯ ರಕ್ಷಣೆಗಾಗಿ ವಾಕಿಂಗ್ ಮಾಡುತ್ತಾರೆ. ಮೈದಾನದೊಳಗೆ ಫುಟ್‌ಬಾಲ್, ಕ್ರಿಕೇಟ್ ಆಡುತ್ತಾ ಇರುತ್ತಾರೆ. ಬಾಲ್ ಬಂದು ವಾಕಿಂಗ್ ಮಾಡುವವರ ಮೇಲೆ ಬೀಳುತಿತ್ತು. ಇದನ್ನು ಗಮನದಲ್ಲಿ ಇರಿಸಿಕೊಂಡು ಸುತ್ತಲೂ ಫೆನ್ಸಿಂಗ್ ಅಳವಡಿಸಲಾಗಿದೆ. ಇದೀಗ ಮಳೆಗಾಲದಲ್ಲಿ ವಾಕಿಂಗ್ ಮಾಡಿದರೂ ತೊಂದರೆಯಾಗದAತೆ ಸರ್ವಋತು ವಾಕಿಂಗ್ ಪಾಥ್ ಮಾಡಿಕೊಡಲಾಗಿದೆ ಎಂದರು.
ನಗರದ 31 ವಾರ್ಡ್ಗಳಲ್ಲೂ ಪಾರ್ಕ್ ಮಾಡಬೇಕು ಎನ್ನುವ ಉದ್ದೇಶದಿಂದ ಅಗತ್ಯ ಯೋಜನೆ ರೂಪಿಸಲಾಗಿದೆ. ಈಗಾಗಲೆ ತಾಯಿಮಗು ಆಸ್ಪತ್ರೆ ಹತ್ತಿರ ಪಾರ್ಕ್ ಸುಂದರವಾಗಿ ನಿರ್ಮಿಸಿದ್ದು, ಶಾಶ್ವತ ಧ್ವಜಸ್ತಂಭದ ಬಳಿ ನಿರ್ಮಿಸಲು ಟೆಂಡರ್ ಕರೆಯಲಾಗುತ್ತಿದೆ. ಎಲ್ಲಾ ಪಾರ್ಕ್ಗಳಲ್ಲೂ ಮಕ್ಕಳ ಆಟಿಕೆ ಅಳವಡಿಸಲು ತಿಳಿಸಿದೆ ಎಂದರು.
ಪೌರಾಯುಕ್ತ ಎಚ್.ಕೆ.ನಾಗಪ್ಪ ಮಾತನಾಡಿ, ಶಾಸಕರ ಮಾರ್ಗದರ್ಶನದಲ್ಲಿ ನೆಹರೂ ಮೈದಾನ ಅಭಿವೃದ್ದಿಗೆ ವಿಶೇಷ ಯೋಜನೆ ರೂಪಿಸಲಾಗಿದೆ. ರಾತ್ರಿ ವೇಳೆಯೂ ವಾಕಿಂಗ್ ಮಾಡಲು ಲೈಟಿಂಗ್ ವ್ಯವಸ್ಥೆ, ಮಳೆಗಾಲದಲ್ಲಿ ಜಾರಾಡಿಕೆ ತಪ್ಪಿಸಲು ಸರ್ವಋತು ವಾಕಿಂಗ್ ಪಾಥ್, ಫೆನ್ಸಿಂಗ್, ಹೈಮಾಸ್ಕ್ ಲೈಟ್, ರಂಗಮAದಿರ ನಿರ್ಮಾಣ ಎಲ್ಲವನ್ನೂ ಮಾಡಲಾಗಿದೆ. ಅಭಿವೃದ್ದಿ ಕೆಲಸ ಮಾಡುವ ಅಧಿಕಾರಿಗಳಿಗೆ ಮಾನಸಿಕ ಸ್ಥೆöÊರ್ಯ ನೀಡುವ ಶಾಸಕರು ಗೋಪಾಲಕೃಷ್ಣ ಬೇಳೂರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಾಯು ವಿಹಾರಿಗಳ ಸಂಘದ ಅಧ್ಯಕ್ಷ ಕೆ.ವಿ.ಜಯರಾಮ್ ಮಾತನಾಡಿ,ಗೋಪಾಲಕೃಷ್ಣ ಬೇಳೂರುರವರು ಎಲ್ಲರ ಮನವಿಗೆ ಸ್ಪಂದಿಸುವ ಗುಣ ಹೊಂದಿರುವವರು. ಅವರು ಮಿನಿಸ್ಟರ್ ಆಗಿ ಸಾಗರಕ್ಕೆ ಬರ್ಬೇಕಿತ್ತು. ನಮ್ಮ ವಾಯುವಿಹಾರಿಗಳ ಸಂಘದಿಂದ ಅವರು ಸಚಿವರಾಗುತ್ತಾರೆ ಎಂದು ನಾವುಗಳು ಬೆಂಗಳೂರಿಗೆ ಹೊರಟಿದ್ದೆವು. ಆದ್ರೆ ಅದು ಹೈಕಮಂಡ್ ಮತ್ತು ರಾಜಕೀಯ ಕಾರಣಗಳಿಗೆ ತಪ್ಪಿತು. 2028 ರಲ್ಲಿ ಮತ್ತೆ ಶಾಸಕರಾಗಿ ಸಚಿವರಾಗುವುದು ನಿಶ್ಚಿತ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಐ.ಎನ್.ಸುರೇಶ್ ಬಾಬು, ಡಾ. ಅ.ರಾ.ಲಂಬೋಧರ್, ಸೋಮಶೇಖರ ಲಾವಿಗೆರೆ, ಇನ್ನಿತರರು ಹಾಜರಿದ್ದರು.
ಸಾಗರ ನಗರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ-ಶಾಸಕ ಗೋಪಾಲಕೃಷ್ಣ ಬೇಳೂರು
ನಮ್ಮ ಪಾಲಿಗೆ ಶಾಸಕರು ಸಚಿವರಾಗದಿದ್ದರೂ ಅವರು ನಮಗೆ ಸಚಿವರೇ-ಕೆ. ವಿ. ಜಯರಾಮ್
ಸುದ್ದಿ ಮತ್ತು ಜಾಹೀರಾತು ನೀಡಲು-7204641701
Meeninahejje News, ಸಾಗರ








Comments
Post a Comment