ತಹಶೀಲ್ದಾರ್ ಡಾ. ಪ್ರತಿಭಾ ಅವರನ್ನು ಕೆಡಿಪಿ ಸಭೆಯಲ್ಲಿ ಶಾಸಕರು ಅವಮಾನಿಸಿದ್ದು ದುರದೃಷ್ಟಕರ- ಮಾಜಿ ಸಚಿವ ಹಾಲಪ್ಪ

ತಹಶೀಲ್ದಾರ್ ಡಾ. ಪ್ರತಿಭಾ ಅವರನ್ನು ಕೆಡಿಪಿ ಸಭೆಯಲ್ಲಿ ಶಾಸಕರು ಅವಮಾನಿಸಿದ್ದು ದುರದೃಷ್ಟಕರ- ಮಾಜಿ ಸಚಿವ ಹಾಲಪ್ಪ 

ಸಾಗರ : ದಕ್ಷತೆಯಿಂದ ಕೆಲಸ ಮಾಡುತ್ತಿರುವ ತಹಶೀಲ್ದಾರ್ ಡಾ. ಪ್ರತಿಭಾ ಅವರನ್ನು ಕೆಡಿಪಿ ಸಭೆಯಲ್ಲಿ ಶಾಸಕರು ಅವಮಾನಿಸಿದ್ದು ದುರದೃಷ್ಟಕರ. ಸಭೆಯಲ್ಲಿ ಉಪವಿಭಾಗಾಧಿಕಾರಿಗಳಿಗೆ ತಹಶೀಲ್ದಾರ್ ಅವರನ್ನು ಅಮಾನತ್ತು ಮಾಡಿ ಎಂದು ಶಾಸಕರು ಸೂಚನೆ ನೀಡಿದ್ದು ಹಾಸ್ಯಾಸ್ಪದ. ಉಪವಿಭಾಗಾಧಿಕಾರಿ ವರದಿ ಮಾಡಬಹುದೇ ವಿನಃ ಅಮಾನತ್ತು ಮಾಡುವ ಅಧಿಕಾರ ಅವರಿಗೆಲ್ಲಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಪ್ರಶ್ನೆ ಮಾಡಿದ್ದಾರೆ.

ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಲ್ಲುಕ್ವಾರೆ ಸೇರಿ ಬೇರೆಬೇರೆ ಅಕ್ರಮಗಳಿಗೆ ಕಡಿವಾಣ ಹಾಕುವ ಕೆಲಸವನ್ನು ತಹಶೀಲ್ದಾರ್ ಮಾಡುತ್ತಿದ್ದಾರೆ.ಬಹುಶ್ಯಃ ತಮ್ಮ ವ್ಯವಹಾರಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎನ್ನುವ ಉದ್ದೇಶದಿಂದ ಶಾಸಕರು ತಹಶೀಲ್ದಾರ್‌ಗೆ ಸಭೆಯಲ್ಲಿ ಅವಮಾನಿರಬೇಕು ಎಂದು ವಿಶ್ಲೇಷಿಸಿದರು. ತಹಶೀಲ್ದಾರ್‌ಗೆ ಬುದ್ದಿ ಹೇಳಲು ಬೇರೆ ವೇದಿಕೆ ಇತ್ತು. ಸಾರ್ವಜನಿಕವಾಗಿ ಕೆಡಿಪಿ ಸಭೆಯಲ್ಲಿ ಮಹಿಳಾ ಅಧಿಕಾರಿಯನ್ನು ಅವಮಾನಿಸಿದ್ದನ್ನು ನಾನು ಖಂಡಿಸುತ್ತೇನೆ. ತಾಲ್ಲೂಕಿನಲ್ಲಿ ಪೌರಾಯುಕ್ತರು, ಕಾರ್ಯನಿರ್ವಾಹಣಾಧಿಕಾರಿಗಳು, ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ಹು ದ್ದೆಗಳು ಖಾಲಿ ಇದೆ. 12 ಸಬ್ ಇನ್ಸ್ಪೆಕ್ಟರ್‌ಗಳ ಪೈಕಿ ಕೇವಲ 4 ಜನ ಮಾತ್ರ ಇದ್ದು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹೆದರಬೇಡಿ, ಪೊಲೀಸ್ ಠಾಣೆಗೆ ಬಂದು ದೂರು ಕೊಡಿ ಎಂದು ಶಾಸಕರು ಹೇಳುತ್ತಿದ್ದಾರೆ. ಆದರೆ ಅಲ್ಲಿ ಅಧಿಕಾರಿಗಳೇ ಇಲ್ಲ. ತಾಲ್ಲೂಕಿನಲ್ಲಿ ಕೊಲೆ, ಸುಲಿಗೆ ಪ್ರಕರಣ ಜಾಸ್ತಿಯಾಗಿದ್ದು ಕಾನೂನು ಸುವ್ಯವಸ್ಥೆ ಹಳಿ ತಪ್ಪಿದೆ ಎಂದು ದೂರಿದರು.



ಮಳೆಮಾಪನಾ ಕೇಂದ್ರ ರಿಪೇರಿ ಬಗ್ಗೆ ಈಗ ಶಾಸಕರು ಆಸಕ್ತಿ ವಹಿಸುತ್ತಿದ್ದಾರೆ. ಮೇ ತಿಂಗಳಿನಲ್ಲಿ ಇದರ ಬಗ್ಗೆ ಗಮನ ಹರಿಸಿದ್ದರೇ ಫಸಲು ಕಳೆದುಕೊಂಡ ರೈತರಿಗೆ ಅನುಕೂಲವಾಗುತಿತ್ತು. ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆಮಾಪನಾ ಕೇಂದ್ರ ಸರಿ ಇದೆಯಾ ಎಂದು ಕೇಳುತ್ತಿರುವುದೇ ವಿಚಿತ್ರವಾಗಿದೆ. ಮೂರು ಬಾರಿ ಶಾಸಕ ಎಂದು ಹೇಳಿಕೊಳ್ಳುತ್ತಾರೆ. ಕನಿಷ್ಟ ಇಂತಹದ್ದರ ಬಗ್ಗೆ ಜ್ಞಾನ ಇರಬೇಕು. ಉಪವಿಭಾಗೀಯ ಆಸ್ಪತ್ರೆಗೆ 70 ಕೋಟಿ ರೂಪಾಯಿ ಬಂದಿದೆ ಎನ್ನುತ್ತಾರೆ. ಹಾಗಾದರೆ ಹಣ ಎಲ್ಲಿದೆ ಎಂದು ಜನರಿಗೆ ಲೆಕ್ಕಕೊಡಿ. ಸುಳ್ಳೇ ಅವರ ಮನೆ ದೇವರು. ಮಾತೆತ್ತಿದರೆ ಸುಳ್ಳು ಹೇಳಿ ಇಲ್ಲದ್ದನ್ನು ಇದೆ ಎಂದು ಬಿಂಬಿಸುತ್ತಿದ್ದಾರೆ. ಸದ್ಯದಲ್ಲೇ ಅವರ ಸುಳ್ಳಿನ ಸರಮಾಲೆಯ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ಸಚಿವರಾಗಬೇಕು ಎಂದು ಬಾವಿ ಮುಚ್ಚಿಸಿದ್ದಾರೆ. ಆದರೆ ಸಚಿವರಾಗಿಲ್ಲ. ಈಗ ಇನ್ನೊಂದು ಬಾವಿ ತೆಗೆಸುತ್ತಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಬಾವಿ ತೆಗೆಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆ ಆಗುತ್ತಿದೆ. ಇನ್ನೂ ಸಮಯ ಮೀರಿಲ್ಲ. ಬಾವಿ ಮುಚ್ಚಿದರೆ ಖಂಡಿತಾ ಸಚಿವರಾಗಲ್ಲ, ಬಾಯಿ ಮುಚ್ಚಿಕೊಂಡಿದ್ದರೆ ಸಚಿವರಾದರೂ ಆಗಬಹುದು ಎಂದು ಬೇಳೂರಿಗೆ ಟಾಂಗ್ ಕೊಟ್ಟರು.

ಗೋಷ್ಟಿಯಲ್ಲಿ ಬಿಜೆಪಿ ಪ್ರಮುಖರಾದ ದೇವೇಂದ್ರಪ್ಪ, ಗಣೇಶ್ ಪ್ರಸಾದ್, ಡಾ. ರಾಜನಂದಿನಿ ಕಾಗೋಡು, ಮಲ್ಲಿಕಾರ್ಜುನ ಹಕ್ರೆ, ಕೊಟ್ರಪ್ಪ ನೇದರವಳ್ಳಿ. ರಮೇಶ್ ಎಚ್.ಎಸ್., ಸಂತೋಷ್, ಬಿ.ಟಿ.ರವೀಂದ್ರ ಹಾಜರಿದ್ದರು. 


ಸುದ್ದಿ ಮತ್ತು ಜಾಹೀರಾತು ನೀಡಲು - 7204641701

ಮೀನಿನ ಹೆಜ್ಜೆ ನ್ಯೂಸ್,  ಸಾಗರ

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ