ಶ್ರೀಮಾರಿಕಾಂಬಾ ಗಣೇಶೋತ್ಸವ ಸೇವಾ ಟ್ರಸ್ಟ್, ಶಿವಾಜಿ ವೃತ್ತ, ಸಾಗರ ಇವರಿಂದ ಶ್ರೀಗಣೇಶೋತ್ಸವ ಆಹ್ವಾನ ಪತ್ರಿಕೆ ಬಿಡುಗಡೆ
ಶ್ರೀಮಾರಿಕಾಂಬಾ ಗಣೇಶೋತ್ಸವ ಸೇವಾ ಟ್ರಸ್ಟ್, ಶಿವಾಜಿ ವೃತ್ತ, ಸಾಗರ ಇವರಿಂದ ಶ್ರೀಗಣೇಶೋತ್ಸವ ಆಹ್ವಾನ ಪತ್ರಿಕೆ ಬಿಡುಗಡೆ
ಟ್ರಸ್ಟ್ ವತಿಯಿಂದ ದಿನಾಂಕ : 14-09-2026ರ ಸೋಮವಾರ ಗಣೇಶಮೂರ್ತಿ ಪ್ರತಿಷ್ಟಾಪನೆ ಮಾಡಲಿದ್ದು, ಗಣಹೋಮ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗಿಯಾಗಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಅಧ್ಯಕ್ಷ ಮಹೇಂದ್ರ ಎಸ್. ಶೆಟ್ಟಿ ಎಲ್ಲರಲ್ಲಿ ಮನವಿ
ಸಾಗರ : ಸಾಗರದ ಶ್ರೀ ಮಾರಿಕಾಂಬಾ ಗಣೇಶೋತ್ಸವ ಸೇವಾ ಟ್ರಸ್ಟ್, ಶಿವಾಜಿ ವೃತ್ತ, ಸಾಗರ ಇವರು ಪ್ರತಿ ವರುಷದಂತೆ ಈ ವರುಷವು ಅತೀ ವಿಜೃಂಭಣೆಯಿಂದ ಗಣೇಶೋತ್ಸವ ಆಚರಣೆ ಮಾಡಲಿದ್ದು ಇಂದು ಸಾಗರದ ಶ್ರೀ ಮಾರಿಕಾಂಬಾ ಗಂಡನ ಮನೆ ದೇವಸ್ಥಾನದ ಎದುರು ಸಾರ್ವಜನಿಕರಿಗೆ ನೀಡುವ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು.
ಟ್ರಸ್ಟಿನ ಗೌರವ ಅಧ್ಯಕ್ಷರಾದ ಕರಿಯಪ್ಪ ಚವಾಣ್ ಮತ್ತು ಅಧ್ಯಕ್ಷರಾದ ಮಹೇಂದ್ರ ಶೆಟ್ಟಿ ಅಹ್ವಾನ ಪತ್ರಿಕೆ ಬಿಡುಗಡೆ ಮಾಡಿದರು.
ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಪ್ರೀತೇಶ್ ಶೆಟ್ಟಿ, ಕಾರ್ಯದರ್ಶಿಯಾದ ಸಂದೀಪ್, ಸಹ ಕಾರ್ಯದರ್ಶಿಯಾದ ಕಿರಣ್ ಹಾಗೂ ಖಜಾಂಜಿಯಾದ ಮಧುಸೂದನ್, ನಿರ್ದೇಶಕರಗಳಾದ ಸುರೇಶ್ ಹಾಗೂ ಮನು ಹಾಗೂ ಆ ಭಾಗದ ನಿವಾಸಿಗಳು ಹಾಜರಿದ್ದರು.
ಸುದ್ದಿ ಮತ್ತು ಜಾಹಿರಾತು ನೀಡಲು - 7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment