ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆಗೆ ಕಾಂಗ್ರೆಸ್ ಮಹಿಳಾ ಘಟಕ ಪ್ರತ್ಯುತ್ತರ-ಸುದ್ದಿಗೋಷ್ಟಿಯಲ್ಲಿ ಪ್ರಭಾವತಿ ಚಂದ್ರಕಾಂತ್ ಮತ್ತು ಅನಿತಾಕುಮಾರಿ

ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆಗೆ ಕಾಂಗ್ರೆಸ್ ಮಹಿಳಾ ಘಟಕ ಪ್ರತ್ಯುತ್ತರ-ಸುದ್ದಿಗೋಷ್ಟಿಯಲ್ಲಿ ಪ್ರಭಾವತಿ ಚಂದ್ರಕಾಂತ್ ಮತ್ತು ಅನಿತಾಕುಮಾರಿ 

ಸಾಗರ : ಶಾಸಕ ಗೋಪಾಲಕೃಷ್ಣ ಬೇಳೂರು ವಿರುದ್ದ ಬಿಜೆಪಿ ಮಹಿಳಾ ಮೋರ್ಚ ಮಾಡಿದ ಆರೋಪ ಸತ್ಯಕ್ಕೆ ದೂರವಾಗಿದ್ದು, ಶಾಸಕರು ತಹಶೀಲ್ದಾರ್‌ಗೆ ಅವಮಾನ ಮಾಡಿದ್ದಾರೆ ಎನ್ನುವುದು ಕಪೋಲಕಲ್ಪಿತ ಹೇಳಿಕೆ ಎಂದು ಕಾಂಗ್ರೇಸ್ ಮಹಿಳಾ ಘಟಕದ ಮಾಜಿ ಜಿಲ್ಲಾಧ್ಯಕ್ಷತೆ ಅನಿತಾ ಕುಮಾರಿ ಸ್ಪಷ್ಟನೆ ನೀಡಿದ್ದಾರೆ.

ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2028ರ ಚುನಾವಣೆಗೆ ಪೂರ್ವ ತಾಲೀಮು ನಡೆಸಿರುವ ಬಿಜೆಪಿಯವರಿಗೆ ಶಾಸಕರ ವಿರುದ್ದ ಮಾತನಾಡಲು ಯಾವುದೇ ವಿಷಯ ಇಲ್ಲದೆ ಇರುವುದರಿಂದ ಈ ಸಣ್ಣ ಸುದ್ದಿಯನ್ನು ದೊಡ್ಡದಾಗಿ ಬಿಂಬಿಸಲು ಹೊರಟಿದ್ದಾರೆ ಎಂದು ಹೇಳಿದರು.

ಹುಳುಕು ಹುಡುಕುವುದು ಬಿಜೆಪಿಯವರ ಸಕ್ರಿಯ ಕೆಲಸ. ತಹಶೀಲ್ದಾರ್‌ಗೆ ಪ್ರಚಾರ ಬದಿಗಿಟ್ಟು ಜನರ ಕೆಲಸ ಮಾಡಿ ಎಂದು ಹೇಳಿದ್ದಾರೆ. ಅದನ್ನು ತಪ್ಪು ಎಂದು ಹೇಳಲು ಬರುವುದಿಲ್ಲ. ಜೊತೆಗೆ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿಲ್ಲ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ, ಆನಂದಪುರAನ ಬಿಜೆಪಿ ಮುಖಂಡರೊಬ್ಬರು ಹೇಳುತ್ತಿದ್ದಾರೆ. ಶಾಸಕರು ಕಸ್ತೂರಿ ರಂಗನ್ ವರದಿ ಅನುಷ್ಟಾನಕ್ಕೆ ಬರಬಾರದು ಎಂದು ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 

ಜೊತೆಗೆ ಶಿಕ್ಷಕ ದಿನಾಚರಣೆಗೆ ಬೇಕಾದ ಅಗತ್ಯ ಸಿದ್ದತೆ ನಡೆಸಲು ತಿಳಿಸಿದ್ದರು. ಶಾಸಕರು ಶಿಕ್ಷಕರ ದಿನಾಚರಣೆಗೆ ಬಂದಿಲ್ಲ ಎನ್ನುವ ಬಿಜೆಪಿಯವರಿಗೆ ಅವರ ಪಕ್ಷದ ನಾಯಕರು ಶಿಕ್ಷಣ ಮಂದಿರದಲ್ಲಿ ಹೋಗಿ ಗೂಂಡಾಗಿರಿ ನಡೆಸಿದ್ದು ಬಹುಶ್ಯಃ ಮರೆತಿರಬೇಕು. ಕ್ಲುಲ್ಲಕ ವಿಚಾರಗಳಿಗೆ ಪ್ರಚಾರ ಪಡೆಯುವುದನ್ನು ಬಿಟ್ಟು ಅಭಿವೃದ್ದಿ ಕೆಲಸಗಳಿಗೆ ಬಿಜೆಪಿಯವರ ಬೆಂಬಲ ನೀಡಲಿ ಎಂದು ಸಲಹೆ ನೀಡಿದರು.

ಕಾಂಗ್ರೇಸ್ ಮಹಿಳಾ ಮೋರ್ಚಾ ಗ್ರಾಮಾಂತರ ಘಟಕದ ಅಧ್ಯಕ್ಷೆ ಪ್ರಭಾವತಿ ಚಂದ್ರಕಾತ್ ಮಾತನಾಡಿ, ಶಾಸಕರು ಮಹಿಳಾ ತಹಶೀಲ್ದಾರ್‌ಗೆ ಅವಮಾನ ಮಾಡಿಲ್ಲ. ನಾನು ಕೆಡಿಪಿ ಸದಸ್ಯೆಯಾಗಿದ್ದು ಸಭೆಯಲ್ಲಿ ಇದ್ದು ನೋಡಿದ್ದೇನೆ. ಸಾರ್ವಜನಿಕವಾಗಿ ತಾಲ್ಲೂಕು ಆಡಳಿತದ ಬಗ್ಗೆ ದೂರು ಬರುತ್ತಿರುವ ಹಿನ್ನೆಲೆಯಲ್ಲಿ ಸರಿಯಾಗಿ ಕೆಲಸ ಮಾಡಲು ತಿಳಿಸಿದ್ದಾರೆ. 

ಬೆಂಗಳೂರಿನಲ್ಲಿ ನಾನು ಉತ್ತಮ ಕೆಲಸ ಮಾಡುತ್ತೇನೆ ಎಂದು ಮನವಿ ಮಾಡಿ ಸಾಗರಕ್ಕೆ ವರ್ಗಾವಣೆ ಮಾಡಿಕೊಂಡು ಬಂದಿದ್ದ ತಹಶೀಲ್ದಾರ್ ಡಾ. ಪ್ರತಿಭಾ ಪ್ರಚಾರದ ಹಿಂದೆ ಬಿದ್ದಾಗ ಸಹಜವಾಗಿ ಶಾಸಕರು ಕೆಲಸದ ಗಮನ ಕಡೆ ಗಮನಿಕೊಡಿ ಎಂದು ಹೇಳಿದ್ದಾರೆ. ಅದನ್ನೇ ದೊಡ್ಡದಾಗಿ ಬಿಂಬಿಸುವ ಬಿಜೆಪಿ ಮಹಿಳಾ ಮೋರ್ಚಾಕ್ಕೆ ತುಮರಿ ಮತ್ತು ಮಾಸೂರಿನಲ್ಲಿ ನಡೆದ ಯುವತಿಯರ ಆತ್ಮಹತ್ಯೆ ಬಗ್ಗೆ ಒಂದು ಶಬ್ದ ಮಾತನಾಡುವ ಶಕ್ತಿ ಇಲ್ಲವೇ ಎಂದು ಪ್ರಶ್ನಿಸಿ ಬಿಜೆಪಿ ಮಹಿಳಾ ಮೋರ್ಚಾ ಪುಕ್ಕಟ್ಟೆ ಪ್ರಚಾರ ಪಡೆಯುತ್ತಿದೆ. ಪ್ರತಿಭಟನೆ ಮನವಿ ಸ್ವೀಕರಿಸುವ ಸಂದರ್ಭದಲ್ಲಿ ಡಾ. ಪ್ರತಿಭಾ ಅವರೇ ನನಗೆ ಶಾಸಕರಿಂದ ಅವಮಾನ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಿದರು.

ಗೋಷ್ಟಿಯಲ್ಲಿ ಸರಸ್ವತಿ ನಾಗರಾಜ್, ಉಷಾ ಎನ್., ಮಧುಮಾಲತಿ, ಮರಿಯಾ ಲೀಮಾ, ಶಿರಿಜಾನ್, ಶ್ಯಾಮಲಾ ದೇವರಾಜ್, ಮಂಜುಳಾ ಚಂದ್ರಪ್ಪ, ಪಾರ್ವತಿ ಬೇಸೂರು, ಸಾವಿತ್ರಮ್ಮ, ಸಬಾನ, ಭವ್ಯ ಇನ್ನಿತರರು ಹಾಜರಿದ್ದರು.

ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆಗೆ ಕಾಂಗ್ರೆಸ್ ಮಹಿಳಾ ಘಟಕ ಪ್ರತ್ಯುತ್ತರ-ಸುದ್ದಿಗೋಷ್ಟಿಯಲ್ಲಿ ಪ್ರಭಾವತಿ ಚಂದ್ರಕಾಂತ್ ಮತ್ತು ಅನಿತಾಕುಮಾರಿ 

ಸುದ್ದಿ ಮತ್ತು ಜಾಹಿರಾತು ನೀಡಲು - 7204641701

ಮೀನಿನಹೆಜ್ಜೆ ನ್ಯೂಸ್, ಸಾಗರ 


Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ