ಬಾವಿ ನಗರಸಭೆ ಬಾವಿಯಲ್ಲ. ನಗರಸಭೆಗೂ ಆ ಬಾವಿಗೂ ಸಂಬಂಧವಿಲ್ಲ-ಪೌರಾಯುಕ್ತ ಎಚ್.ಕೆ.ನಾಗಪ್ಪ
ಬಾವಿ ನಗರಸಭೆ ಬಾವಿಯಲ್ಲ. ನಗರಸಭೆಗೂ ಆ ಬಾವಿಗೂ ಸಂಬಂಧವಿಲ್ಲ-ಪೌರಾಯುಕ್ತ ಎಚ್.ಕೆ.ನಾಗಪ್ಪ
ಬಾವಿ ವಿಷಯ ಲೋಕಾಯುಕ್ತಕ್ಕೆ?
ಸಾಗರ : ಗಾಂಧಿನಗರದಲ್ಲಿ ಶಾಸಕರ ಮನೆ ಪಕ್ಕದ ಖಾಲಿ ಜಾಗದಲ್ಲಿರುವ ಬಾವಿ ನಗರಸಭೆ ಬಾವಿಯಲ್ಲ. ನಗರಸಭೆಗೂ ಆ ಬಾವಿಗೂ ಸಂಬAಧವಿಲ್ಲ ಎಂದು ಪೌರಾಯುಕ್ತ ಎಚ್.ಕೆ.ನಾಗಪ್ಪ ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಶಾಸಕರ ಮನೆ ಪಕ್ಕದ ಬಾವಿ ಮುಚ್ಚಿರುವ ಪ್ರಕರಣ ತೀವೃ ಚರ್ಚೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅವರು, ಆ ಬಾವಿ ಖಾಸಗಿಯವರ ಜಾಗದಲ್ಲಿದ್ದು ಅವರಿಗೆ ಸಂಬAಧಿಸಿದ್ದಾಗಿದೆ. ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ನಗರಸಭೆಯಲ್ಲಿ ಬಾವಿಗೆ ಸಂಬAಧಿಸಿದ ಯಾವುದೇ ದಾಖಲೆ ಇಲ್ಲ ಎಂದಿದ್ದಾರೆ.
ಕನಸರ್,ವೆನ್ಸಿಯಲ್ಲಿ ತೆಗೆಯಲಾಗಿದೆ ಎನ್ನಲಾದ ಬಾವಿ
ಖಾಸಗಿ ಸಂಸ್ಥೆಗೆ ಪುರಸಭೆ ಅವಧಿಯಲ್ಲಿ ಜಾಗ ಮಂಜೂರು ಮಾಡಲಾಗಿದೆ. ಅವರೇ ಬಾವಿ ತೆಗೆಸಿರಬೇಕು ಎಂದು ಹೇಳಲಾಗುತ್ತಿದೆ. ಆ ಬಾವಿ ಮುಚ್ಚುವಲ್ಲಿ ನಗರಸಭೆ ಪಾತ್ರವಿಲ್ಲ. ಬಾವಿ ಮುಚ್ಚುವುದಕ್ಕೆ ಸಂಬAಧಿಸಿದAತೆ ನಗರಸಭೆಗೆ ಖಾಸಗಿ ಸಂಸ್ಥೆಯವರು ಜಾಗ ಕೊಟ್ಟಿದ್ದರು. ಯಾವುದೇ ಸಂದರ್ಭದಲ್ಲೂ ಶಾಸಕ ಗೋಪಾಲಕೃಷ್ಣ ಬೇಳೂರು ಬಾವಿಯನ್ನು ಮುಚ್ಚಿಸಿ ಎಂದು ಲಿಖಿತವಾಗಿ ಅಥವಾ ಮೌಖಿಕವಾಗಿ ತಿಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಸದ್ಯ ಬಾವಿ ಮುಚ್ಚಿರುವುದರಿಂದ ನಗರಸಭೆಯಿಂದ ಆ ಭಾಗದ ಜನರಿಗೆ ನಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಜನರಿಗೆ ನೀರಿನ ಸಮಸ್ಯೆ ಬರಬಾರದು ಎಂದು ಶಾಸಕರ ಸೂಚನೆ ಮೇರೆಗೆ ವಾಹನ, ಜನ ಸಂಚಾರಕ್ಕೆ ತೊಂದರೆಯಾಗದAತೆ ಹೊಸ ಬಾವಿ ತೆಗೆಸಿಕೊಡಲಾಗಿದೆ ಎಂದು ತಿಳಿಸಿದರು
ಸುದ್ದಿಮತ್ತು ಜಾಹಿರಾತು ನೀಡಲು - 7204641701
ಮೀನಿನಹೆಜ್ಜೆ ನ್ಯೂಸ್, ಸಾಗರ




Comments
Post a Comment