ಅನಾದಿ ಕಾಲದಿಂದ ವಾಸ ಮಾಡುತ್ತಿರುವ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಜನರಿಗೆ ಹಕ್ಕುಪತ್ರ ನೀಡಿ-ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ್ ಹೋನಗೋಡು
ಅನಾದಿ ಕಾಲದಿಂದ ವಾಸ ಮಾಡುತ್ತಿರುವ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಜನರಿಗೆ ಹಕ್ಕುಪತ್ರ ನೀಡಿ-ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ್ ಹೋನಗೋಡು
ಯಾರು ಭೂಮಿಯಲ್ಲಿ ವಾಸವಿದ್ದಾರೋ ಅವರಿಗೆ ಭೂಮಿಹಕ್ಕು ಸಿಗಬೇಕಾದದ್ದು ನ್ಯಾಯಸಮ್ಮತ-ಮಾಜಿ ಸಚಿವ ಹಾಲಪ್ಪ ಹೆಚ್. ಹರತಾಳು
ಸರಕಾರಗಳ ವಿರುದ್ಧ ಗುಟುರು ಹಾಕಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರವಿ ಕುಗ್ವೆ
ಸಾಗರ : ತಾಲ್ಲೂಕಿನ ಆನಂದಪುರ ಹೋಬಳಿಯ ಆಚಾಪುರ-ಮುರುಘಾಮಠ, ಯಡೇಹಳ್ಳಿ, ಮಲಂದೂರು, ದಾಸಕೊಪ್ಪ, ತಳಗೆರಿ ಗ್ರಾಮಗಳಲ್ಲಿ ಅನಾದಿ ಕಾಲದಿಂದ ವಾಸ ಮಾಡುತ್ತಿರುವ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಜನರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಗುರುವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಸರ್ಕಾರಿ ಪದವಿಪೂರ್ವ ಕಾಲೇಜು ಎದುರಿನಿಂದ ಮೆರವಣಿಗೆ ಮೂಲಕ ಸಾಗಿ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಹರತಾಳು ಹಾಲಪ್ಪ, ಆನಂದಪುರ ಹೋಬಳಿಯ ನಾಲ್ಕು ಗ್ರಾಮ ಪಂಚಾಯ್ತಿಯ ನಾಲ್ಕು ಗ್ರಾಮಗಳ ಬಡ ಕುಟುಂಬ ಹಲವು ದಶಕಗಳಿಂದ ಇಲ್ಲಿ ಬದುಕು ಕಟ್ಟಿಕೊಂಡಿದೆ. ಅದರೆ ಈ ಕುಟುಂಬಗಳ ಹೆಸರಿಗೆ ಹಕ್ಕುಪತ್ರ ನೀಡಿಲ್ಲ. ಯಾರು ಭೂಮಿಯಲ್ಲಿ ವಾಸವಿದ್ದಾರೋ ಅವರಿಗೆ ಭೂಮಿಹಕ್ಕು ಸಿಗಬೇಕಾದದ್ದು ನ್ಯಾಯಸಮ್ಮತ. ಉಳುವವನೇ ಹೊಲದೊಡೆಯ ಮೂಲತತ್ವಕ್ಕೆ ಅನುಗುಣವಾಗಿ ಬಡವರಿಗೆ ಜಮೀನು ಸಿಗಬೇಕು. ದಾಖಲೆಯಲ್ಲಿ ಖಾಸಗಿ ಜಮೀನು ಎಂದು ಹೇಳುತ್ತಿದ್ದರೂ, ಅಲ್ಲಿ ನೀವು ಹಲವು ವರ್ಷಗಳಿಂದ ವಾಸವಿದ್ದು, ನಿಮಗೆ 94ಡಿ ಅಡಿ ಖಾಸಗಿ ಜಾಗದಿಂದ ನಿಮ್ಮ ಹೆಸರಿಗೆ ಭೂಮಿ ವರ್ಗಾವಣೆ ಮಾಡಬೇಕು ಎಂಬ ಬೇಡಿಕೆ ಹಲವು ವರ್ಷಗಳದ್ದಾಗಿದೆ. ಸರ್ಕಾರ ಈ ಭೂಮಿಯನ್ನು ವಶಪಡಿಸಿಕೊಂಡು ನಂತರ ನಿಮ್ಮ ಹೆಸರಿಗೆ ಹಕ್ಕುಪತ್ರ ಕಾನೂನು ಪ್ರಕಾರ ನೀಡಬೇಕು. ನಿಮ್ಮ ಬೇಡಿಕೆ ಈಡೇರಿಕೆಗೆ ಪೂರಕವಾಗಿ ರೂಪಿಸಿಕೊಂಡು ಬರುವ ಎಲ್ಲಾ ಹೋರಾಟಕ್ಕೂ ನಮ್ಮ ಬೆಂಬಲವಿದೆ ಎಂದರು.
ಆಚಾಪುರದ ಮುರುಘಾಮಠ, ಯಡೇಹಳ್ಳಿ, ಮಲಂದೂರು, ದಾಸಕೊಪ್ಪ, ತಳಗೆರಿ ಗ್ರಾಮದ ನೂರಾರು ಕುಟುಂಬ ಈಗ ಬೀದಿಗಳಿದು ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಕಾನೂನು ನಿಮ್ಮ ಪರವಾಗಿಯೆ ಇದೆ. ಅಧಿಕಾರಿಗಳು ಇವರಿಗೆ ಸಹಾಯ ಮಾಡಿದರೆ ಏನೂ ತೊಂದರೆ ಆಗುವುದಿಲ್ಲ. ನಿಮ್ಮನ್ನು ಜೈಲಿಗೆ ಹಾಕುವುದಿಲ್ಲ. ಪ್ರಸ್ತುತ ಡಾ. ಜಿ. ಪರಮೇಶ್ವರ್ ಕಂದಾಯ ಸಚಿವರಾಗಿದ್ದು ಅವರ ಗಮನಕ್ಕೆ ತರಲಾಗುತ್ತದೆ. ಅಧಿಕಾರಿಗಳು ಇವರ ಬಳಿ ಹಣಕಾಸು ಇಲ್ಲ. ಬಡವರು, ಕೂಲಿಕಾರ್ಮಿಕರು ಅಲ್ಲಿ ವಾಸವಿದ್ದಾರೆ. ಅವರ ಕೆಲಸ ಮಾಡಿಕೊಡಿ. ಅವರು ವಾಸಿಸುವ ಭೂಮಿಯ ಹಕ್ಕು ಕೊಡಿ ಎಂದ ಅವರು, ನಿಮ್ಮ ಹೋರಾಟ ಬೇಡಿಕೆ ಈಡೇರುವ ತನಕ ಮುಂದುವರೆಯಬೇಕು. ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಹೋರಾಟದ ನೇತೃತ್ವ ವಹಿಸಿದ್ದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು, ಅನೇಕ ವರ್ಷಗಳಿಂದ ನಾಲ್ಕು ಗ್ರಾಮ ಪಂಚಾಯ್ತಿ ಜನರು ಭೂಮಿಹಕ್ಕಿಗಾಗಿ ಸರ್ಕಾರದ ಬಾಗಿಲು ಬಡಿಯುತ್ತಿದ್ದಾರೆ. ಅದರೆ ಅಧಿಕಾರಿಗಳ ಮನಸ್ಸು ಕರಗುತ್ತಿಲ್ಲ. ಬಡವರು, ಕೂಲಿಕಾರ್ಮಿಕರು ಈ ಭೂಮಿಯಲ್ಲಿ ವಾಸ ಮಾಡುತ್ತಿದ್ದಾರೆ. ಇವರಿಗೆ ಭೂಮಿ ಮಂಜೂರು ಮಾಡಿಕೊಟ್ಟರೆ ಯಾವುದೇ ಲಾಭ ಇಲ್ಲ ಎನ್ನುವ ಧೋರಣೆ ಕೈಬಿಡಿ. ಭೂಹಕ್ಕಿಗಾಗಿ ಎದುರು ನೋಡುತ್ತಿರುವ ಕುಟುಂಬಗಳಿಗೆ ನ್ಯಾಯ ದೊರಕಿಸಿ ಕೊಡಿ. ಉಪವಿಭಾಗಾಧಿಕಾರಿಗಳು ಕೆಲವೆ ದಿನಗಳಲ್ಲಿ ಗ್ರಾಮಸ್ಥರು ವಾಸಿಸುವ ಭೂಮಿಯ ಹಕ್ಕು ಕೊಡುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂದಕ್ಕೆ ಪಡೆಯುತ್ತಿದ್ದೇವೆ. ನಿಗಧಿತ ಅವಧಿಯಲ್ಲಿ ಹಕ್ಕುಪತ್ರ ನೀಡದೆ ಹೋದಲ್ಲಿ ಅಹೋರಾತ್ರಿ ಹೋರಾಟ ರೂಪಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರವಿಕುಗ್ವೆ ಮಾತನಾಡಿದರು.
ಪ್ರತಿಭಟನೆಯಲ್ಲಿ ರೇವಪ್ಪಎಚ್. ಹೊಸಕೊಪ್ಪ, ಭರ್ಮಪ್ಪ ಅಂದಾಸುರ, ವೀರೇಶ್ ಕುಮಾರ್, ದೇವೇಂದ್ರಪ್ಪ, ಗಣೇಶ್ ಪ್ರಸಾದ್, ರಾಜು ದೇವಾಡಿಗ, ಕುಮಾರಸ್ವಾಮಿ ಕೊಪ್ಪ, ಕನ್ನಪ್ಪ ಬೆಳಲಮಕ್ಕಿ, ಜಗನ್ನಾಥ್, ಉಮಾ ಇನ್ನಿತರರು ಹಾಜರಿದ್ದರು.
ಸುದ್ದಿ ಮತ್ತು ಜಾಹಿರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ



Comments
Post a Comment