ಕಸ್ತೂರಿ ರಂಗನ್ ವರದಿ ವಿಶೇಷ ಸಚಿವ ಸಂಪುಟ ಸಭೆಯ ಜೊತೆ ಸರಕಾರದ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡ ಕುಟುಂಬದವರಿಗೆ ಭೂ ಹಕ್ಕು ಕೊಡಬೇಕು. ಈ ಚರ್ಚೆಯು ಇದರೊಂದಿಗೆ ಆಗಬೇಕು-ತೀ.ನ. ಶ್ರೀನಿವಾಸ್
ಕಸ್ತೂರಿ ರಂಗನ್ ವರದಿ ವಿಶೇಷ ಸಚಿವ ಸಂಪುಟ ಸಭೆಯ ಜೊತೆ ಸರಕಾರದ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡ ಕುಟುಂಬದವರಿಗೆ ಭೂ ಹಕ್ಕು ಕೊಡಬೇಕು. ಈ ಚರ್ಚೆಯು ಇದರೊಂದಿಗೆ ಆಗಬೇಕು-ತೀ.ನ. ಶ್ರೀನಿವಾಸ್
ಸಾಗರ : ಕಸ್ತೂರಿ ರಂಗನ್ ವರದಿ ಹೋರಾಟದ ಜೊತೆಗೆ ವಿವಿಧ ಜಲ ವಿದ್ಯುತ್ ಯೋಜನೆಗೆ ಭೂಮಿ ಕಳೆದುಕೊಂಡವರಿಗೆ ಸರ್ಕಾರ ಮೊದಲು ಹಕ್ಕುಪತ್ರ ನೀಡಲಿ ಎಂದು ಮಲೆನಾಡು ರೈತ ಹೋರಾಟ ವೇದಿಕೆ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶರಾವತಿ, ತುಂಗಾ, ಗಾಜನೂರು, ಮಡೆನೂರು, ಭದ್ರಾ ಅಂಬ್ಲಿಗೊಳ, ತಲಕಳಲೆ ಡ್ಯಾಂನ ಸಂತ್ರಸ್ತರಿಗೆ ಈತನಕ ಬದಲಿ ಭೂಮಿ ಬಹುತೇಕ ಕುಟುಂಬಗಳಿಗೆ ನೀಡಿಲ್ಲ. ಹೊಸನಗರ ತಾಲ್ಲೂಕಿನ ಬಿಳಕಿ ಗ್ರಾಮದ ೫೦ಕ್ಕೂ ಹೆಚ್ಚು ಮುಳುಗಡೆ ಸಂತ್ರಸ್ತ ಕುಟುಂಬಗಳಿಗೆ ನೀಡಿದ ಭೂಮಿಯನ್ನು ಅರಣ್ಯ ಪ್ರದೇಶವೆಂದು ಹೆಸರಿಸಿ ಹಕ್ಕುಪತ್ರ ರದ್ದುಗೊಳಿಸಲು ಉಪವಿಭಾಗಾಧಿಕಾರಿಗಳ ಕಚೇರಿಗೆ ಅರಣ್ಯ ಇಲಾಖೆ ಅರ್ಜಿ ಸಲ್ಲಿಸಿದೆ ಎಂದರು.
ಅರಣ್ಯಭೂಮಿಯಲ್ಲಿ ಸಾಗುವಳಿ ಮಾಡಿದವರಿಗೆ ಭೂಹಕ್ಕು ಕೊಡಬೇಕು ಎಂದು ಕಾಯ್ದೆ ಜಾರಿಗೆ ಬಂದಿದ್ದು ಅನುಷ್ಟಾನಕ್ಕೆ ಬಂದಿಲ್ಲ. ಆರೇಳು ದಶಕಗಳಿಂದ ಸಾಗುವಳಿ ಮಾಡಿಕೊಂಡ ಭೂಮಿಯ ಹಕ್ಕನ್ನೇ ವಜಾ ಮಾಡಲು ಸರ್ಕಾರ ಮುಂದಾಗಿರುವುದು ಖಂಡನೀಯ. ಮುಖ್ಯಮಂತ್ರಿಗಳು ಕಸ್ತೂರಿ ರಂಗನ್ ವರದಿಗಾಗಿ ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆದಿದ್ದನ್ನು ನಾವು ಸ್ವಾಗತಿಸುತ್ತೇವೆ.
ಇದೇ ಸಂದರ್ಭದಲ್ಲಿ ಮಲೆನಾಡಿನ ರೈತರು ಎದುರಿಸುತ್ತಿರುವ ಭೂಹಕ್ಕಿನ ಸಮಸ್ಯೆ ಕುರಿತು ಸಹ ಗಂಭೀರ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು. ಮಲೆನಾಡಿನ ಗ್ರಾಮವಾಸಿಗಳ ಭೂ ಸಮಸ್ಯೆ ಅತ್ಯಂತ ಗಂಭೀರವಾಗಿದ್ದು, ಸುಮಾರು 2ಲಕ್ಷ ಕುಟುಂಬ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ, ಮುಳುಗಡೆ ಸಂತ್ರಸ್ತರು, ಅರಣ್ಯಭೂಮಿ ಸಾಗುವಳಿದಾರರ ಸಮಸ್ಯೆಗಳನ್ನು ಸೇರಿಸಿಕೊಂಡು ಚರ್ಚೆ ನಡೆಸಿ ನ್ಯಾಯ ದೊರಕಿಸಿ ಕೊಡಬೇಕು. ಅಧಿವೇಶನದ ಚರ್ಚೆಯೆ ಕಾನೂನು ಆಗಲ್ಲ. ಸಭೆಯಲ್ಲಿ ತೆಗೆದುಕೊಂಡ ತೀರ್ಮಾನ ಆದೇಶವಾಗಿ ಹೊರಬರಬೇಕು. ಜಿಲ್ಲೆಯ ಎಲ್ಲಾ ಶಾಸಕರು ಕಸ್ತೂರಿ ರಂಗನ್ ವರದಿ ಜೊತೆಗೆ ಮಲೆನಾಡಿನ ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಸರ್ಕಾರಕ್ಕೆ ಆಗ್ರಹ ಮಾಡಬೇಕು. ಪ್ರತಿಭಟನೆ, ಪಾದಯಾತ್ರೆಯಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಮಲೆನಾಡಿನ 65 ವಿಧಾನಸಭಾ ಕ್ಷೇತ್ರ ಬರುತ್ತದೆ. ಎಲ್ಲಾ ಶಾಸಕರು ಈ ಬಗ್ಗೆ ಸರ್ಕಾರಕ್ಕೆ ಒತ್ತಾಯ ಮಾಡಲಿ ಎಂದರು.
ಗೋಷ್ಟಿಯಲ್ಲಿ ಹೊಸನಗರ ತಾಲ್ಲೂಕು ಬಿಳಕಿ ಗ್ರಾಮದ ಕೃಷ್ಣಮೂರ್ತಿ, ಆದರ್ಶ, ಕೊಲ್ಲಪ್ಪ, ಉಮೇಶ್, ರಾಮಚಂದ್ರ, ಕೃಷ್ಣಮೂರ್ತಿ, ಶಶಿಕುಮಾರ್, ಹೇಮಂತ್, ವಿಕ್ಟೋರಿಯಾ ಫರ್ನಾಂಡಿಸ್, ಡಾ. ಅನ್ನಪೂರ್ಣ ಇನ್ನಿತರರು ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು-7204641701
ಮೀನಿನ ಹೆಜ್ಜೆ ನ್ಯೂಸ್, ಸಾಗರ


Comments
Post a Comment