ಸಾಗರ ಗಂಗೋತ್ರಿ ಶಿಕ್ಷಣ ವಿದ್ಯಾಲಯದ ಬಗ್ಗೆ ಇತ್ತೀಚಿಗೆ ಬಂದ ಪತ್ರಿಕಾ ವರದಿಯ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಆಡಳಿತ ಸಂಸ್ಥೆಯ ಮುಖ್ಯಸ್ಥ ಕೃಷ್ಣಮೂರ್ತಿ ಬಿಳಿಗಲ್ಲೂರು
ಸಾಗರ ಗಂಗೋತ್ರಿ ಶಿಕ್ಷಣ ವಿದ್ಯಾಲಯದ ಬಗ್ಗೆ ಇತ್ತೀಚಿಗೆ ಬಂದ ಪತ್ರಿಕಾ ವರದಿಯ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಆಡಳಿತ ಸಂಸ್ಥೆಯ ಮುಖ್ಯಸ್ಥ ಕೃಷ್ಣಮೂರ್ತಿ ಬಿಳಿಗಲ್ಲೂರು
ಸಾಗರ : ಸಾಗರ ಗಂಗೋತ್ರಿ ಕಾಲೇಜಿನ ಬಿ.ಎಡ್. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಕುವೆಂಪು ವಿಶ್ವವಿದ್ಯಾಲಯ ಆಟ ಆಡುತ್ತಿದೆ. ಹೈಕೋರ್ಟ್ ಕಾಲೇಜಿನ ದಾಖಲೆಗಳನ್ನು ಪರಿಶೀಲನೆ ನಡೆಸಿ ಫಲಿತಾಂಶ ಪ್ರಕಟಣೆ ಮಾಡುವ ಜೊತೆಗೆ 2026-27ನೇ ಸಾಲಿನಲ್ಲೂ ಬಿ.ಎಡ್. ಪ್ರವೇಶಾತಿಗೆ ಆದೇಶ ನೀಡಿದೆ. ಆದರೆ ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ಕಾಲೇಜಿನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಉಳ್ಳೂರು ಸಿಗಂದೂರೇಶ್ವರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೃಷ್ಣಮೂರ್ತಿ ಎನ್. ಬಿಳಿಗಲ್ಲೂರು ತಿಳಿಸಿದರು.
ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರ ಅವಿವೇಕತನದ ವಿರುದ್ದ ನಮ್ಮ ಸಂಸ್ಥೆ ಸುಮಾರು 4 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಿದೆ ಎಂದರು.
ನಮ್ಮ ಸಂಸ್ಥೆಯು 2007-08ರಲ್ಲಿ ಪ್ರಾರಂಭಗೊAಡಿದ್ದು 2009ರಲ್ಲಿ ಉಳ್ಳೂರಿನ ಕ್ಯಾಂಪಸ್‌ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮಾಡಲಿದೆ. ಕಾನೂನು, ಬಿ.ಎಡ್., ನರ್ಸಿಂಗ್, ಪ್ರೌಢ ಮತ್ತು ಪ್ರಾಥಮಿಕ ತರಗತಿಗಳು ಒಂದೇ ಛಾವಣಿಯಲ್ಲಿ ನಡೆಸಲಾಗುತ್ತಿದೆ. ನಮ್ಮ ಸಂಸ್ಥೆ ವಿರುದ್ದ ಯಾವುದೇ ದೂರು ಇರುವುದಿಲ್ಲ. ನಮ್ಮ ಸಂಸ್ಥೆಯಲ್ಲಿ ಪ್ರಾಚಾರ್ಯರಾಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಎಂಬಾತ ಉದ್ಯೋಗಕ್ಕೆ ಸೇರುವಾಗಿ ನಕಲಿ ಪಿಎಚ್‌ಡಿ ಸರ್ಟಿಫಿಕೇಟ್ ನೀಡಿದ್ದರು. ಇದನ್ನು ಎನ್.ಸಿ.ಇ.ಟಿ. ಗುರುತಿಸಿ ಕುವೆಂಪು ವಿಶ್ವವಿದ್ಯಾಲಯಕ್ಕೆ, ನಮ್ಮ ಸಂಸ್ಥೆಗೆ ಮಾಹಿತಿ ನೀಡಿತ್ತು. ತಾನು ನೀಡಿದ್ದ ನಕಲಿ ದಾಖಲೆ ಎನ್ನುವುದು ಗೊತ್ತಾದ ತಕ್ಷಣ ಪ್ರಶಾಂತ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಜೊತೆಗೆ ರಾಜಸಾಬ್ ಮಲ್ಲಾಪುರ ಎಂಬುವವರ ಮೂಲಕ ಕಾಲೇಜಿನ ವಿರುದ್ದ ದೂರು ನೀಡಿದ್ದಾರೆ. ಎನ್.ಸಿ.ಇ.ಟಿ. ಮಾನ್ಯತೆ ಹಿಂದಕ್ಕೆ ಪಡೆದಿತ್ತು. ಆದರೆ ನಾವು ಪ್ರಶಾಂತ್ ವಿರುದ್ದ ದೂರು ಸಲ್ಲಿಸುವ ಜೊತೆಗೆ ನಮ್ಮ ಸಂಸ್ಥೆಯ ದಾಖಲೆಗಳನ್ನು ಹೈಕೋರ್ಟ್ಗೆ ಸಲ್ಲಿಸಲಾಗಿತ್ತು. ನ್ಯಾಯಾಲಯವು ದಾಖಲೆಗಳನ್ನು ಪರಿಶೀಲನೆ ನಡೆಸಿ ದಿನಾಂಕ 08-08-2024ರಂದು ಮಧ್ಯಂತರ ಆದೇಶ ನೀಡಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆ ನಡೆಸಲು ಎನ್.ಸಿ.ಇ.ಟಿ. ಮತ್ತು ಕುವೆಂಪು ವಿವಿಗೆ ಸೂಚಿಸಿತ್ತು ಎಂದರು.
ನ್ಯಾಯಾಲಯದ ಸೂಚನೆಯಂತೆ ಕುವೆಂಪು ವಿವಿ 2023-24ನೇ ಸಾಲಿನ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಪಾವತಿಸಿಕೊಂಡು ಪರೀಕ್ಷೆಯನ್ನು ವಿಶ್ವವಿದ್ಯಾಲಯ ದಿನಾಂಕ 25-072-025ರಿಂದ 12-08-2025ರವರೆಗೆ ಪರೀಕ್ಷೆ ನಡೆಸಿದೆ. ಪ್ರಶ್ನೆಪತ್ರಿಕೆಗಳ ಮೌಲ್ಯಮಾಪನಾ ಸಹ ಮುಗಿದಿದೆ. ಆದರೆ ಈತನಕ ಫಲಿತಾಂಶ ಪ್ರಕಟಣೆ ಮತ್ತು ಅಂಕಪಟ್ಟಿ ವಿತರಣೆ, ಘಟಿಕೋತ್ಸವ ನಡೆಸಿಲ್ಲ. ಇದೇ ತಿಂಗಳು ೨೫ರಂದು ರಾಜ್ಯ ಸರ್ಕಾರ ಸುಮಾರು 2ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ನಮ್ಮ ಸಂಸ್ಥೆಯಲ್ಲಿ ಬಿಎಡ್ದ ಪದವಿ ಪಡೆದ ಇನ್ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿದ್ದಾರೆ. ಆದರೆ ಈತನಕ ಫಲಿತಾಂಶ ಪ್ರಕಟಿಸದೆ, ಅಂಕಪಟ್ಟಿ ನೀಡದೆ ಇರುವುದರಿಂದ ಅವರು ಸರ್ಕಾರಿ ಉದ್ಯೋಗ ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ನೇರ ಹೊಣೆ ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗವಾಗಿರುತ್ತದೆ ಎಂದು ದೂರಿದರು. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ತಾವೇ ತೀರ್ಪು ಹೇಗೆ ಬರೆಯಬೇಕು ಎಂದು ಹೇಳುತ್ತೇವೆ ಎನ್ನುವ ದಾಷ್ಟö್ರ್ಯವನ್ನು ಅಧಿಕಾರಿಗಳು ಪ್ರದರ್ಶನ ಮಾಡಿದ್ದಾರೆ.
ವಿದ್ಯಾರ್ಥಿಗಳಿಂದ ಹಣ ಪಾವತಿಸಿಕೊಂಡು ಪರೀಕ್ಷೆ ನಡೆಸಿದೆ. ಸರ್ಕಾರ ಮತ್ತೆ 2026-27ನೇ ಸಾಲಿಗೆ ಬಿ.ಎಡ್. ಪ್ರವೇಶಾತಿಗೆ 50 ವಿದ್ಯಾರ್ಥಿಗಳನ್ನು ಸರ್ಕಾರಿ ಕೋಟಾದಡಿ ಕಳಿಸಿದೆ. ಆದರೆ ಕುವೆಂಪು ವಿವಿ ಅನಗತ್ಯ ತೊಂದರೆ ಕೊಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕುವೆಂಪು ವಿವಿ. ವಿದ್ಯಾರ್ಥಿ ವಿರೋಧಿ ಧೋರಣೆ ತೆಳೆಯುತ್ತಿದ್ದು ಪ್ರತಿದಿನ ವಿವಿ ವಿರುದ್ದ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಬಿ.ಎಡ್. ಪರೀಕ್ಷೆ ಬರೆದವರಿಗೆ ಅಂಕಪಟ್ಟಿ ನೀಡಿ ಫಲಿತಾಂಶ ಪ್ರಕಟಿಸದೆ ಹೋದಲ್ಲಿ ಖಾಸಗಿ ಕಾಲೇಜುಗಳ ಒಕ್ಕೂಟದಿಂದ ಕಾನೂನು ಹೋರಾಟದ ಜೊತೆ ವಿವಿ ಎದುರಿಗೂ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಟಿಯಲ್ಲಿ ನ್ಯಾಯವಾದಿ ರಾಜಶೇಖರ್ ಎಂ., ಕಾಲೇಜಿನ ವಿನಯಕುಮಾರ್, ವಿನಯ್, ಪುನೀತ್, ಜ್ಯೋತಿ, ಕೃಷ್ಣಮೂರ್ತಿ, ಮಂಜುನಾಥ್, ಸುರೇಶ್, ರುದ್ರಪ್ಪ, ದರ್ಶನ್, ಶ್ರೀಕಾಂತ್, ವಿನಾಯಕ್, ವಿದ್ಯಾ, ವಿನಿತಾ, ಸುಷ್ಮಾ, ಲತಾ ಇನ್ನಿತರರು ಹಾಜರಿದ್ದರು.
ಸುದ್ದಿ ಮತ್ತು ಜಾಹಿರಾತು ನೀಡಲು-7204641701
ಮೀನಿನಹೆಜ್ಜೆ ನ್ಯೂಸ್, ಸಾಗರ


Comments
Post a Comment