ಸರ್ಕಾರ ಜಾರಿಗೆ ತಂದ ಯೋಜನೆ ಪರಿಣಾಮಕಾರಿ ಅನುಷ್ಟಾನವಾಗಬೇಕಾದರೆ ಅದರ ಬಗ್ಗೆ ಪೂರ್ಣ ಮಾಹಿತಿಯನ್ನು ನಾವು ಹೊಂದಿರಬೇಕು-ಸಹಾಯಕ ಕೃಷಿ ನಿರ್ದೇಶಕ ಬಿ.ಎಲ್. ಶಿವಪ್ರಕಾಶ್

ಸರ್ಕಾರ ಜಾರಿಗೆ ತಂದ ಯೋಜನೆ ಪರಿಣಾಮಕಾರಿ ಅನುಷ್ಟಾನವಾಗಬೇಕಾದರೆ ಅದರ ಬಗ್ಗೆ ಪೂರ್ಣ ಮಾಹಿತಿಯನ್ನು ನಾವು ಹೊಂದಿರಬೇಕು-ಸಹಾಯಕ ಕೃಷಿ ನಿರ್ದೇಶಕ ಬಿ.ಎಲ್. ಶಿವಪ್ರಕಾಶ್

ಸಾಗರ : ಪ್ರತಿ ವೃತ್ತಿಯಲ್ಲೂ ಸೇವೆ ಸಲ್ಲಿಸುವವರಿಗೆ ಕಾಲಕಾಲಕ್ಕೆ ತರಬೇತಿ ಅಗತ್ಯ. ನಾವು ಇಲಾಖೆ ಮೂಲಕ ಜನಸೇವೆಗೆ ಬಂದವರು. ಸರ್ಕಾರ ಜಾರಿಗೆ ತಂದ ಯೋಜನೆ ಪರಿಣಾಮಕಾರಿ ಅನುಷ್ಟಾನವಾಗಬೇಕಾದರೆ ಅದರ ಬಗ್ಗೆ ಪೂರ್ಣ ಮಾಹಿತಿಯನ್ನು ನಾವು ಹೊಂದಿರಬೇಕು. ನಾವು ತಿಳಿದ ಮಾಹಿತಿ ಸಮೂಹದ ನಡುವೆ ಹಂಚಿಕೊಳ್ಳಲು ಸೂಕ್ತ ತರಬೇತಿ ಇದ್ದಾಗ ಮಾತ್ರ ಸಾಧ್ಯ ಎಂದು ಸಹಾಯಕ ಕೃಷಿ ನಿರ್ದೇಶಕ ಬಿ.ಎಲ್. ಶಿವಪ್ರಕಾಶ್ ತಿಳಿಸಿದರು.

ಇಲ್ಲಿನ ಪಶುಪಾಲನಾ ಇಲಾಖೆ ಸಭಾಂಗಣದಲ್ಲಿ ಸೋಮವಾರ ಕೃಷಿ ಇಲಾಖೆ, ಕೃಷಿಕ ಸಮಾಜ ಹಾಗೂ ಪಶುಪಾಲನಾ ಇಲಾಖೆ ವತಿಯಿಂದ ಆತ್ಮ ಯೋಜನೆ ಅಡಿಯಲ್ಲಿ ವಿಸ್ತರಣಾ ಕಾರ್ಯಕರ್ತರಿಗೆ ತರಬೇತಿ ಹಾಗೂ ರೇಬಿಸ್ ರೋಗ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಜನರಿಗೆ ನಾವು ನೀಡುವ ಸೇವೆ ಉತ್ಕೃಷ್ಟವಾಗಿರಬೇಕು. ಕೃಷಿ, ತೋಟಗಾರಿಕೆ, ಪಶುಪಾಲನೆ ಇನ್ನಿತರೆ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಕ್ಷೇತ್ರದೊಳಗೆ ಕೆಲಸ ಮಾಡುವುದು ಹೆಚ್ಚು ಇರುತ್ತದೆ. ಸೇವಾ ಮನೋಭಾವದಿಂದ ನಾವು ಕೆಲಸ ಮಾಡುವಾಗ ಅನೇಕ ಸವಾಲುಗಳು ಎದುರಾಗುತ್ತದೆ. ನಾವು ಇಲಾಖೆಗೆ ಸಂಬಂಧಿಸಿದ ಎಲ್ಲವನ್ನು ತಿಳಿದುಕೊಂಡಿರಬೇಕಾಗುತ್ತದೆ. ಆತ್ಮ ಯೋಜನೆಯಡಿ ಕಾಲಕಾಲಕ್ಕೆ ತರಬೇತಿ ನೀಡಲಾಗುತ್ತಿದ್ದು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಜನರಿಗೆ ಇದರ ಮಾಹಿತಿ ತಲುಪಿಸಲು ಸಲಹೆ ನೀಡಿದರು.

ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಅರುಣ್ ಮಾತನಾಡಿ, ರೇಬಿಸ್ ರೋಗ ಕುರಿತು ಸಮುದಾಯದ ನಡುವೆ ಜಾಗೃತಿ ಅಗತ್ಯ. ನಾಯಿ ಕಚ್ಚಿದೆ ಎಂದು ನಿರ್ಲಕ್ಷ ಮಾಡಬಾರದು. ನಾಯಿ ಕಚ್ಚಿದ್ದು ಬೇರೆಬೇರೆ ಸಂದರ್ಭದಲ್ಲಿ ದೇಹದ ಮೇಲೆ ಮಾರಕ ಪರಿಣಾಮ ಬೀರಬಹುದು. ಈ ಹಿನ್ನೆಲೆಯಲ್ಲಿ ಜನರಿಗೆ ರೇಬಿಸ್ ಕುರಿತು ಜಾಗೃತಿ ಮೂಡಿಸಲು ಇಲಾಖೆ ಅಗತ್ಯ ಗಮನ ಹರಿಸಿದೆ ಎಂದು ತಿಳಿಸಿದರು.

ಕೃಷಿ ಸಮಾಜದ ಅಧ್ಯಕ್ಷ ವಿ.ಜಿ.ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ್ ರಾವ್ ಮಂಚಾಲೆ, ನಿಂಗಪ್ಪ ಗೌಡ, ಲಕ್ಷ್ಮೀನಾರಾಯಣ ಇನ್ನಿತರರು ಹಾಜರಿದ್ದರು. ಪರ್ವಿನ್ ಪ್ರಾರ್ಥಿಸಿದರು. ಗಣಪತಿ ಹೆನಗೆರೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿನಾಯಕ ರಾವ್ ಬೇಳೂರು ನಿರೂಪಿಸಿದರು.

ಸುದ್ದಿ ಮತ್ತು ಜಾಹೀರಾತು ನೀಡಲು - 7204641701

ಮೀನಿನಹೆಜ್ಜೆ ನ್ಯೂಸ್, ಸಾಗರ 

Comments

Popular posts from this blog

ಸಾಗರದಲ್ಲಿ SIR ಪ್ರಕ್ರಿಯೆಯಲ್ಲಿ ಅಕ್ರಮ. ಬಿ ವೈ ವಿಜಯೇಂದ್ರ ಆರೋಪ...

ರಜಪೂತ ಸಮಾಜ ಅಭಿವೃದ್ಧಿ ಮಂಡಳಿ ರಚಿಸುವ ಬಗ್ಗೆ ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಸಾಗರ ತಾಲ್ಲೂಕು ರಜಪೂತ ಸಮಾಜದಿಂದ ಮನವಿ

ವಿವೇಕ ಸೂರ್ಯ ಎಂಬ ಅವಿವೇಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ-ಚಾರೋಡಿ ಕೊಂಕಣಿ ಆಚಾರ್ ಸಮಾಜ